ಬಾಲಿವುಡ್ ನಟಿಯೂ ಆಗಿರುವ ಬಿಜೆಪಿ ಸಂಸದೆ ಕಂಗನಾ ರಾಣಾವತ್ (Kangana Ranaut) ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಇದು ವಾಸ್ತವವಾಗಿ ಥೀಮ್ ಫೋಟೋಶೂಟ್ ಆಗಿದ್ದು ಹಿಮಾಚಲ ಪ್ರದೇಶದ ಲಡಾಕ್ ಭಾಗದ ಮಹಿಳೆಯರ ಸಾಂಪ್ರದಾಯಿಕ ಉಡುಗೆಯನ್ನ ಪ್ರತಿನಿಧಿಸುತ್ತದೆ.
View this post on Instagram
ವಿಶಿಷ್ಟ ಶೈಲಿ ವಿನ್ಯಾಸ ಈ ಉಡುಗೆ ಧರಿಸಿ ಕಂಗನಾ ರಾಣಾವತ್ ಪೋಸ್ ಕೊಟ್ಟಿದ್ದಾರೆ. ಇಡೀ ದೇಹ ಕವರ್ ಆಗುವ ವಿಶಿಷ್ಟ ಶೈಲಿಯ ಉಡುಗೆ ಇದಾಗಿದ್ದು ಕ್ವೀನ್ ಕಂಗನಾ ಎಲಿಗೆಂಟ್ ಲುಕ್‌ನಲ್ಲಿ ಮಿಂಚಿದ್ದಾರೆ. ಇದು ಹೈವೆಸ್ಟ್ ಪ್ಲೀಟೆಡ್ ಸ್ಕರ್ಟ್ ಆಗಿದ್ದು ಅದಕ್ಕೆ ಹೋಲುವ ರವಿಕೆ ಹಾಗೂ ಹಿಮಾಚಲ ರೇಷ್ಮೆ ದುಪಟ್ಟಾ ಸುತ್ತಿಕೊಂಡಿದ್ದಾರೆ. ಮಂಡಿ ಕ್ಷೇತ್ರದ ಸಂಸದೆಯ ಸಾಂಪ್ರದಾಯಿಕ ಲುಕ್‌ಗೆ ನೆಟ್ಟಿಗರಂತೂ ಫಿದಾ ಆಗಿದ್ದಾರೆ. ಫೋಟೋವನ್ನ ಕಂಗನಾ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ಕಂಗನಾ, ʻನಿನ್ನೆ ರಾತ್ರಿ ಒಂದು ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಈ ಲುಕ್‌ನಲ್ಲಿ ಭಾಗಿಯಾಗಿದ್ದರಂತೆ. ಭಾರತದಲ್ಲಿ ಮದುವೆ ಸೀಸನ್ ಬಂದರೆ ಸಾಕು ನಮ್ಮ ಸಂಸ್ಕೃತಿಯನ್ನ ಸಂಪ್ರದಾಯವನ್ನ ಪಾಲಿಸಲು ಅವಕಾಶ ಇರುತ್ತದೆ. ನಮ್ಮ ಭಾಗದಲ್ಲಿ ಚಳಿಗಾಲದ ಮದುವೆ ಕಾರ್ಯಕ್ರಮ ಹೀಗೆ ನಡೆಯುತ್ತದೆʼ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ ಕಂಗನಾ. ಕಂಗನಾ ಅವರ ಈ ಲುಕ್‌ನ ಫೋಟೋಶೂಟ್ ಸಖತ್ ಟ್ರೆಂಡ್ ಕ್ರಿಯೆಟ್ ಮಾಡಿದೆ.


