ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಇವರ ಹೆಂಡತಿಯ ಜಗಳ ನಾನಾ ರೂಪ ಪಡೆದುಕೊಳ್ಳುತ್ತಿದೆ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಹೆಂಡತಿಯ ವಿರುದ್ಧ ಹಲವು ಪೋಸ್ಟ್ ಗಳನ್ನು ಸಿದ್ದಿಕಿ ಹಾಕಿದ್ದರು. ಹಲವು ದಿನಗಳ ನಂತರ ಮೌನ ಮುರಿದಿದ್ದರು. ನವಾಜುದ್ದೀನ್ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಂತೆಯೇ ನಟಿ ಕಂಗನಾ ರಣಾವತ್ (Kangana Ranaut) ಪ್ರಕರಣದಲ್ಲಿ ಪ್ರವೇಶ ಮಾಡಿದ್ದಾರೆ. ಮೌನ ಯಾವತ್ತು ನೋವನ್ನುಂಟು ಮಾಡುತ್ತಿದೆ. ಎಲ್ಲವನ್ನೂ ಹಂಚಿಕೊಂಡಿದ್ದೀರಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಿದ್ದಾರೆ.
ನವಾಜುದ್ದೀನ್ ಸಿದ್ದಿಕಿ ಹಾಗೂ ಪತ್ನಿ ಆಲಿಯಾ (Alia) ನಡುವಿನ ಜಗಳ ಅಕ್ಷರಶಃ ಆಡಿಕೊಳ್ಳುವಂತಾಗಿದೆ. ನವಾಜುದ್ದೀ ನ್ ಮೇಲೆ ಪತ್ನಿ ಆಲಿಯಾ ಅನೇಕ ರೋಪಗಳನ್ನು ಮಾಡಿದ್ದರು. ಅತ್ತೆಯ ಕಿರುಕುಳ ಸೇರಿದಂತೆ, ತನಗೆ ಅನ್ನ ನೀರು ಕೊಡದೇ ಕೂಡಿ ಹಾಕಲಾಗಿತ್ತು ಎಂದೆಲ್ಲ ಹೇಳಿದ್ದರು. ತಮ್ಮಿಂದ ಮಕ್ಕಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದರು. ಇದನ್ನೂ ಓದಿ:ಬರ್ತ್‌ಡೇ ಬಗ್ಗೆ ಅಪ್‌ಡೇಟ್ ನೀಡಿದ ರಾಧಿಕಾ ಪಂಡಿತ್
ಪತ್ನಿಯ ಯಾವ ಮಾತಿಗೂ ಈವರೆಗೂ ಪ್ರತಿಕ್ರಿಯಿಸದ ನವಾಜುದ್ದೀನ್, ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅಸಲಿಯಾಗಿ ಆಲಿಯಾ ನನ್ನ ಪತ್ನಿಯಲ್ಲ, ಆಕೆ ಡಿವೋರ್ಸ್ ತಗೆದುಕೊಂಡಿದ್ದಾಳೆ. ಆದರೆ, ಆಕೆ ಈಗ ಕೇವಲ ನನ್ನ ಮಕ್ಕಳ ತಾಯಿಯಷ್ಟೇ ಎಂದು ಬರೆದುಕೊಂಡಿದ್ದಾರೆ. ತಿಂಗಳಿಗೆ ಸರಾಸರಿ ಹತ್ತು ಲಕ್ಷ ರೂಪಾಯಿ ಕೊಟ್ಟಿದ್ದೇನೆ. ದುಡ್ಡಿನ ದಾಹಕ್ಕೆ ಆಲಿಯಾ ಆರೋಪಿಸುತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಮೂಲಕ ಸಂಸಾರದ ಅನೇಕ ವಿಷಯಗಳನ್ನೂ ಹಂಚಿಕೊಂಡಿರುವ ನವಾಜುದ್ದೀನ್, ‘ಆಲಿಯಾ ಸಿನಿಮಾ ಮಾಡಲು ಕೋಟಿ ಕೋಟಿ ಕಳೆದುಕೊಂಡದ್ದೇನೆ. ಮಕ್ಕಳೊಂದಿಗೆ ಆಕೆ ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ದುಬಾರಿ ಫ್ಲ್ಯಾಟ್ ಕೊಡಿಸಿದ್ದೇನೆ. ಅಲ್ಲದೇ, ಮಕ್ಕಳಿಗಾಗಿ ದುಬೈನಲ್ಲೂ ಅಪಾರ್ಟ್ಮೆಂಟ್ ನೀಡಿದ್ದೇನೆ. ಅಲ್ಲಿ ಅವಳೂ ಇದ್ದಳು. ಇಷ್ಟೆಲ್ಲ ಮಾಡಿದರೂ, ನನ್ನ ಮೇಲೆ ಆರೋಪ ಮಾಡಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ.
ಆಲಿಯಾ ಮಾಧ್ಯಮಗಳ ಮುಂದೆ ತಮ್ಮ ಮಾನ ಹರಾಜು ಮಾಡುತ್ತಿರುವ ಕುರಿತಾಗಿಯೂ ಅವರು ಹೇಳಿಕೊಂಡಿದ್ದು, ತಮ್ಮ ಭಾವನೆಗಳ ಜೊತೆ ಅವರು ಆಟವಾಡುತ್ತಿದ್ದಾರೆ ಎಂದು ದೂರಿದ್ದಾರೆ. ಏಕಪಕ್ಷೀಯ ರೀತಿಯ ವಿಡಿಯೋಗಳನ್ನು ಹಾಕುತ್ತಿರುವವರ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ಮಕ್ಕಳಿಗಾಗಿ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿರುವುದಾಗಿ ನವಾಜುದ್ದೀನ್ ಹೇಳಿಕೊಂಡಿದ್ದಾರೆ.