ಆಲಿಯಾ ಭಟ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್‍ಗೆ ‘ಪಾನಿ ಮೇ ದೂಧ್’ ಎಂದ ಕಂಗನಾ

Public TV
2 Min Read
allia kangana

ಮುಂಬೈ: ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಇಡೀ ಬಾಲಿವುಡ್ ಸಂಭ್ರಮ ಪಡುತ್ತಿದ್ದರೆ, ವಿವಾದಿತ ತಾರೆಯಾಗಿಯೇ ಗುರುತಿಸಿಕೊಳ್ಳುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಕೊಂಕು ತಗೆದಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿರುವ ಅವರು, ಬಾಕ್ಸ್ ಆಫೀಸ್ ರಿಪೋರ್ಟ್ ಬಗ್ಗೆ ‘ಪಾನಿ ಮೇ ದೂಧ್’ ಎಂದು ಕಾಮೆಂಟ್ ಮಾಡಿದ್ದಾರೆ.

ಗಂಗೂಬಾಯಿ ಕಥಿಯಾವಾಡಿ ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೆ, ಅದರ ಯಶಸ್ಸಿನ ಬಗ್ಗೆ ಕಂಗನಾ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಚಿತ್ರವು 100 ಕೋಟಿ ರೂ. ಕ್ಲಬ್ ಸೇರಿದ ಹಿನ್ನೆಲೆಯಲ್ಲಿಯೇ ಕಂಗನಾ ವ್ಯಕ್ತ ಪಡಿಸಿರುವ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರ ಚರ್ಚೆಗೆ ಕಾರಣವಾಗಿದೆ. ಇದು ಹೊಗಳಿಕೆಯೋ ಅಥವಾ ತೆಗಳಿಕೆಯೋ ಏನೂ ಗೊತ್ತಾಗದೇ ಗೊಂದಲಕ್ಕೂ ಕೆಲವರು ಬಿದ್ದಿದ್ದಾರೆ. ಇದನ್ನೂ ಓದಿ: ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ – ಆಲಿಯಾ ಅಭಿನಯಕ್ಕೆ ಕಂಗನಾ ಫುಲ್ ಫಿದಾ

alia butta

(ಅಚ್ಚಾ ದೂಧ್ ಮೇ ಪಾನಿ ತೋ ಸುನಾ ಥಾ ಲೇಕಿನ್ ಪಾನಿ ಮೇ ದೂಧ್ ಹಮ್ ಕ್ಯಾ ಮಜ್ಬೂರಿಯಾನ್ ರಹೀ ಹೊಂಗಿ ಬೇಚರೋನ್ ಕಿ) ಹಾಲನ್ನು ನೀರಿನಿಂದ ದುರ್ಬಲಗೊಳಿಸುವ ಪ್ರವೃತ್ತಿಯ ಬಗ್ಗೆ ನಾವು ಕೇಳಿದ್ದೇವೆ ಆದರೆ ಇಲ್ಲಿ ನೀರನ್ನು ಹಾಲಿನೊಂದಿಗೆ ದುರ್ಬಲಗೊಳಿಸಲಾಗಿದೆ ಎಂದು ತೋರುತ್ತದೆ. ಅಸಹಾಯಕ ಜನರು ಕೆಲವು ಕಟ್ಟುಪಾಡುಗಳನ್ನು ಹೊಂದಿರುತ್ತಾರೆ ಎಂದು ಅವರು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

alia but

ಬಾಕ್ಸ್ ಆಫೀಸ್ ರಿಪೋರ್ಟ್ ಪ್ರಕಾರ ಚಿತ್ರವು 100 ಕೋಟಿ ರೂಪಾಯಿಗಳ ಗಡಿ ದಾಟಿದೆ ಮತ್ತು ಇನ್ನೂ ಮುಂದುವರೆದಿದೆ. ಈ ಹಿಂದೆ ಕಂಗನಾ ಚಿತ್ರದ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ, ದಕ್ಷಿಣ ಭಾರತದ ಥಿಯೇಟರ್‍ಗಳಲ್ಲಿ ಸಿನಿಮಾ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿರುವುದನ್ನು ಕೇಳಲು ಸಂತಸವಾಗುತ್ತಿದೆ. ಹಿಂದಿಯಲ್ಲಿ ಪುಟ್ಟ, ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಸಿನಿಮಾ ಮುಂದೆ ಸಾಗುತ್ತಿರುವ ಬಗ್ಗೆ ಕೇಳುತ್ತಿದ್ದೇನೆ. ಸ್ಟಾರ್ ನಟ ಮತ್ತು ನಿರ್ದೇಶಕರ ಸಿನಿಮಾಗಳೇ ಹೆಚ್ಚಾಗಿ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಮಹಿಳಾ ಪ್ರಧಾನ ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ

ಹಿಂದಿ ಚಿತ್ರೋದ್ಯಮ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಸಿನಿಮಾ ಮುಂದೆ ಸಾಗುತ್ತಿದೆ. ಸದ್ಯ ಪುಟ್ಟ ಹೆಜ್ಜೆ ಇಡುತ್ತಿರುವ ಈ ಸಿನಿಮಾ ದೊಡ್ಡ ಹೆಜ್ಜೆ ಇಡಲು ಕಡಿಮೆ ಸಮಯವಿಲ್ಲ. ಕೆಲವೊಮ್ಮೆ ಮಾಫಿಯಾ ಸಿನಿಮಾಗಳು ಕೂಡ ಒಳ್ಳೆಯದನ್ನು ಮಾಡುತ್ತವೆ. ಉತ್ತಮ ಸಿನಿಮಾ ಮಾಡಿದರೆ ಖಂಡಿತ ಎಲ್ಲರೂ ಪ್ರಶಂಸಿಸುತ್ತೇವೆ ಮತ್ತು ಒಳ್ಳೆಯದಾಗಲಿ ಎಂದು ಆಶಿಸುತ್ತೇವೆ ಎಂದು ಆಲಿಯಾ ಭಟ್ ಅಭಿನಯಕ್ಕೆ ಹಾಗೂ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಈಗ ಉಲ್ಟಾ ಹೊಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *