ಢಾಕಾ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್, ಝರಿನಾ ಎಕ್ತಾ ಕಪೂರ್ ಲಾಕ್ ಅಪ್ ಟ್ರೈಲರ್ ಬಿಡುಗಡೆ ದಿನದಂದು ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ.
ಕಂಗನಾ ರಣಾವತ್ ಮೊದಲ ಬಾರಿಗೆ ನಿರೀಕ್ಷಿತ ರಿಯಾಲಿಟಿ ಶೋ ಒಂದರ ಅತಿಥಿಯಾಗುತ್ತಿದ್ದು, ಲಾಕ್ ಅಪ್ ಅಂತಿಮವಾಗಿ ಬುಧವಾರ ದೆಹಲಿಯಲ್ಲಿ ತನ್ನ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ. ಆದ್ದರಿಂದ ಈ ದಿನವನ್ನು ಹೆಚ್ಚು ವಿಶೇಷವಾಗಿಸುವ ಸಲುವಾಗಿ, ಎಕ್ತಾ ಕಪೂರ್, ಕಂಗನಾ ಹಾಗೂ ರಿಯಾಲಿಟಿ ಶೋನ ತಮ್ಮ ತಂಡದೊಂದಿಗೆ ಗುರುದ್ವಾರ ಬಾಂಗ್ಲಾ ಸಾಹಿಬ್‍ಗೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದರು. ಇದನ್ನೂ ಓದಿ: ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ
View this post on Instagram
ಅವರ ಮುಂಬರುವ ಫಿಯರ್ಲೆಸ್ ರಿಯಾಲಿಟಿ ಶೋ ಲಾಕ್ ಅಪ್ ಈಗಾಗಲೇ ಸಾಕಷ್ಟು ಜನರ ಗಮನ ಸೆಳೆದಿದ್ದು, ಅಭಿಮಾನಿಗಳ ಮನೆ ಮಾತಾಗಿದೆ. ಉದ್ಯಮಿ ಮಹಿಳೆ ಏಕ್ತಾ ಕಪೂರ್ ಯಾವಾಗಲೂ ಭಾರತೀಯ ದೂರದರ್ಶನ ಉದ್ಯಮಕ್ಕೆ ಹೊಸ ಮತ್ತು ವಿಶಿಷ್ಟವಾದ ಕಾರ್ಯಕ್ರಮಗಳನ್ನು ಪರಿಚಯಿಸಿದ್ದಾರೆ. ಈಗ ಅವರು ಹೊಸ ರಿಯಾಲಿಟಿ ಶೋ ಆದ ಲಾಕ್ ಅಪ್‍ನಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ:ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಯಾವೆಲ್ಲ ಚಿತ್ರಗಳು ಸ್ಪರ್ಧಾ ಕಣದಲ್ಲಿ?
ಕಾರ್ಯಕ್ರಮವು ಇದೇ ಫೆಬ್ರವರಿ 27 ರಂದು ಆಲ್ಟ್ ಬಾಲಾಜಿ ಮತ್ತು ಎಮ್‍ಎಕ್ಸ್ ಪ್ಲೇಯರ್ ನಂತಹ ಆನ್‍ಲೈನ್ ಪ್ಲಾಟ್‍ಫಾರ್ಮ್‍ಗಳಲ್ಲಿ ಲೈವ್ ಸ್ಟ್ರೀಮ್ ಮಾಡಲು ಸಿದ್ಧವಾಗಿದೆ.