ಚಂಡೀಗಢ: ರೈತರನ್ನು ಭಯೋತ್ಪಾದಕರೆಂದು ಕರೆದಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ಕಂಗನಾ ಅವರ ಕಾರನ್ನು ತಡೆ ಹಿಡಿದ ಘಟನೆ ಪಂಜಾಬ್‍ನ ಕಿರಾತ್‍ಪುರ ಸಾಹಿಬ್‍ನಲ್ಲಿ ನಡೆದಿದೆ.
ಇತ್ತೀಚೆಗೆ ರದ್ದುಪಡಿಸಿದ ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ಸುಮಾರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರು. ಬಿಜೆಪಿ ಬೆಂಬಲಿಗರಾದ ಕಂಗನಾ ಅವರು ರೈತರ ವಿರುದ್ಧ ಕಿಡಿಕಾರಿದ್ದರು. ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರು, ಖಲಿಸ್ಥಾನಿಗಳು ಮತ್ತು ಸಮಾಜ ವಿರೋಧಿಗಳು ಎಂದು ಟೀಕಿಸಿದ್ದರು.
ಈ ಹಿನ್ನೆಲೆಯಲ್ಲಿ ಕಂಗನಾ ಅವರು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಪಂಜಾಬ್‍ನಲ್ಲಿ ಹಾದು ಹೋಗುತ್ತಿದ್ದಾಗ ಪ್ರತಿಭಟನಾಕಾರರು ಧ್ವಜಗಳನ್ನು ಬೀಸುತ್ತಾ ಮತ್ತು ಘೋಷಣೆಗಳನ್ನು ಕೂಗುತ್ತಾ ಅವರ ಕಾರನ್ನು ತಡೆದರು. ಇದನ್ನೂ ಓದಿ: ಐ ಡೋಂಟ್ ಕೇರ್, ಐ ಡೋಂಟ್ ಲೈಕ್ – ಲಸಿಕೆ ಬೇಡವೆಂದು ಹಠ ಹಿಡಿದ ವೃದ್ಧ
ಘಟನೆ ಕುರಿತು ಕಂಗನಾ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ನನ್ನನ್ನು ಇಲ್ಲಿಯ ಗುಂಪೊಂದು ಸುತ್ತುವರಿದಿದ್ದು, ನನ್ನನ್ನು ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನಟಿಯು ಕೆಲವು ಮಹಿಳಾ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ನಂತರ ಅಂತಿಮವಾಗಿ ಆ ಸ್ಥಳವನ್ನು ತೊರೆಯುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಆತಂಕ ಬೇಡ- ಸೋಂಕಿತನ ಅಭಯ