ರಾಹುಲ್ ಮಂಗಳ ಗ್ರಹದಿಂದ ಬಂದಿದ್ದಾರೆ: ಕಂಗನಾ ಹೇಳಿಕೆಗೆ ‘ಕೈ’ ಕಾರ್ಯಕರ್ತರು ತಿರುಗೇಟು

Public TV
1 Min Read
Kangana

ಕಾಂಗ್ರೆಸ್ ಪಕ್ಷದ ಯುವ ನಾಯಕ, ಸಂಸದ ರಾಹುಲ್ ಗಾಂಧಿ ಅವರನ್ನು ಮಂಗಳ ಗ್ರಹದಿಂದ (Mars) ಬಂದಿರುವ ವ್ಯಕ್ತಿ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಟೀಕಿಸಿದ್ದರು. ಕಂಗನಾ ಮಾತಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ. ಕಂಗನಾ ಅವರ ಅನೇಕ ಮಾತುಗಳನ್ನು ಟ್ರೋಲ್ ಮಾಡಿ, ನೀವು ಯಾವ ಗ್ರಹದಿಂದ ಬಂದಿದ್ದೀರಿ ಉತ್ತರಿಸಿ ಎಂದು ಕೇಳುತ್ತಿದ್ದಾರೆ.

kangana ranaut 7

ಪದೇ ಪದೇ ರಾಹುಲ್ ಅವರನ್ನು ಕಂಗನಾ ಟಾರ್ಗೆಟ್ ಮಾಡುತ್ತಿದ್ದಾರೆ. ಈವರೆಗೂ ಬಾಲಿವುಡ್ ನಲ್ಲಿನ ನೆಪೋಟಿಸಂ (Nepotism) ಬಗ್ಗೆ ಮಾತನಾಡುತ್ತಿದ್ದ ಕಂಗನಾ ರಣಾವತ್, ಇದೀಗ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿರುವುದರಿಂದ, ಇಲ್ಲಿನ ನೆಪೋಟಿಸಂ ಬಗ್ಗೆ ಟೀಕಿಸಿದ್ದಾರೆ. ಅದು ಕೇವಲ ಕಾಂಗ್ರೆಸ್ ಪಕ್ಷದೊಳಗಿನ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ.

Kangana Ranaut 5

ಮೊದಲಿನಿಂದಲೂ ನಾನು ಕಾಂಗ್ರೆಸ್ ಅನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕೆ ಕಾರಣ ಕುಟುಂಬ ರಾಜಕಾರಣ. ರಾಹುಲ್ ಗಾಂಧಿ (Rahul Gandhi) ಹೆಸರನ್ನು ನೇರವಾಗಿಯೇ ತಗೆದುಕೊಳ್ಳುತ್ತೇನೆ. ಈ ನೆಪೋಟಿಸಂ ಅಂತ್ಯವಾಗಬೇಕು. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಕಂಗನಾ ರಣಾವತ್ ಕಟು ನುಡಿಯಲ್ಲೇ ಟೀಕೆ ಮಾಡಿದ್ದಾರೆ.

 

ಸದ್ಯ ಲೋಕಸಭಾ ಅಖಾಡದಲ್ಲಿ ಕಸರತ್ತು ಮಾಡುತ್ತಿದ್ದಾರೆ ನಟಿ ಕಂಗನಾ ರಣಾವತ್. ಇದೇ ವೇಳೆಯಲ್ಲಿ ಮಾಧ್ಯಮಗಳ ಜೊತೆಯೂ ಅವರು ಮಾತನಾಡಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಸೂಪರ್ ಸ್ಟಾರ್ ಅನಿಸಿಕೊಂಡ ಶಾರುಖ್ (Shahrukh Khan) ಕೂಡ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋಲುಂಡಿದ್ದಾರೆ. ನಾನು ಮತ್ತು ಶಾರುಖ್ ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್ ಎಂದು ಬಣ್ಣಿಸಿಕೊಂಡಿದ್ದಾರೆ.

Share This Article