ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲಿ ಸದಾ ಮುಂದು. ಮುಲಾಜಿಲ್ಲದೇ ಯಾರ ಬಗ್ಗೆ ಬೇಕಾದರೂ ಮಾತನಾಡಬಲ್ಲ ತಾಕತ್ತು ಅವರಿಗೆ ಇದೆ. ತಮ್ಮ ಸಹ ನಟರ ಮೇಲೂ ಸಾಕಷ್ಟು ಆರೋಪ ಮಾಡಿದ್ದಾರೆ. ಇದೀಗ ಮತ್ತೆ ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಸೆಲೆಬ್ರಿಟಿಗಳ ವಾಟ್ಸಪ್ ಹ್ಯಾಕ್ ಮಾಡುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಸೆಲೆಬ್ರಿಟಿಗಳೇ ಈ ಕೃತ್ಯದಲ್ಲಿ ಭಾಗಿ ಆಗಿದ್ದಾರೆ. ಕೇಂದ್ರ ಸರಕಾರ ಸರಿಯಾದ ತನಿಖೆಯನ್ನು ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸೆಲೆಬ್ರಿಟಿಗಳ ವಾಟ್ಸಪ್ ಅನ್ನು ಸೆಲೆಬ್ರಿಟಿಗಳೇ ಹ್ಯಾಕ್ ಮಾಡಿ, ಇತರರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎನ್ನುವುದು ಕಂಗನಾ ಗಂಭೀರ ಆರೋಪ. ಕೇವಲ ವಾಟ್ಸಪ್ ಮಾತ್ರವಲ್ಲ ಮೇಲ್ ಕೂಡ ಹ್ಯಾಕ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರಕಾರ ಇದನ್ನು ಗಂಭೀರವಾಘಿ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಕಂಗನಾ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಅವರು ಯಾರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿಲ್ಲವಾದ್ದರಿಂದ ಈ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಎನ್ನುವ ಅನುಮಾನವಂತೂ ಮೂಡಿದೆ.