ಕಂಗನಾ ರಣಾವತ್ (Kangana Ranaut) ನಟನೆಯ ಬಹುನಿರೀಕ್ಷಿತ ‘ಎಮರ್ಜೆನ್ಸಿ’ (Emergency Film) ಸಿನಿಮಾಗೆ ಕೇಂದ್ರ ಸೆನ್ಸಾರ್ ಮಂಡಳಿಯು ಸರ್ಟಿಫಿಕೇಟ್ ಕೊಡದೇ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಕಂಗನಾ ಬಾಂಬೆ ಹೈಕೋರ್ಟ್ (Court) ಮೆಟ್ಟಿಲು ಏರಿದ್ದರು. ಈಗ ಹೈರ್ಕೋಟ್ ಸೆನ್ಸಾರ್ ಮಂಡಳಿಗೆ ಸೂಚನೆ ನೀಡಿದ್ದು, ಒಂದು ವಾರದ ಒಳಗೆ ಪ್ರಮಾಣ ಪತ್ರದ ತೀರ್ಮಾನ ತಗೆದುಕೊಳ್ಳಬೇಕು ಎಂದಿದೆ.
ಮೊನ್ನೆಯಷ್ಟೇ ಸಿನಿಮಾದ ಟ್ರೈಲರ್ ಈಗ ರಿಲೀಸ್ ಆಗಿದೆ. ಇಂದಿರಾ ಗಾಂಧಿ (Indira Gandhi) ಪಾತ್ರದಲ್ಲಿ ಕಂಗನಾ ಪರಕಾಯ ಪ್ರವೇಶ ಮಾಡಿದ್ದಾರೆ. ಇಂಡಿಯಾ ಅಂದರೆ ಇಂದಿರಾ ಎಂದು ಖಡಕ್ ಆಗಿ ನಟಿ ಡೈಲಾಗ್ ಹೊಡೆದಿದ್ದಾರೆ.
1975ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದ ಐತಿಹಾಸಿಕ ಸನ್ನಿವೇಶದ ಚಿತ್ರಣ ಹೊಂದಿರುವ ಸಿನಿಮಾ ಇದಾಗಿದೆ. ರಾಜಕೀಯ ಮತ್ತು ಭಾವನಾತ್ಮಕ ಸನ್ನಿವೇಶಗಳನ್ನು ಇಂದಿರಾ ಗಾಂಧಿ ಅವರು ಎದುರಿಸಿದ ರೀತಿಯನ್ನು ಟ್ರೈಲರ್ ಮೂಲಕ ಝಲಕ್ ತೋರಿಸಲಾಗಿದೆ.
ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ರಾಷ್ಟ್ರ ವ್ಯಾಪಿ ನಡೆದ ಪ್ರತಿಭಟನೆಗಳು, ಕರ್ಫ್ಯೂ, ರಾಜಕೀಯ ವಿರೋಧ ಹೀಗೆ ಹಲವು ಸನ್ನಿವೇಶಗಳನ್ನು ಟ್ರೈಲರ್‌ನಲ್ಲಿ ಹೈಲೆಟ್ ಮಾಡಲಾಗಿದೆ. ಕಂಗನಾ ‘ಇಂದಿರಾ ಗಾಂಧಿ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ ಎಂದಿದ್ದಾರೆ ಕಂಗನಾ. ದೇಶದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆ. ಆದರೆ, ಇತಿಹಾಸದಲ್ಲಿ ಅವರು ಬರೆದ ಕರಾಳ ಅಧ್ಯಾಯ! (ಎಮರ್ಜೆನ್ಸಿ). ಸಾಕ್ಷಿಯ ಮಹತ್ವಾಕಾಂಕ್ಷೆಯು ದಬ್ಬಾಳಿಕೆಯೊಂದಿಗೆ ಘರ್ಷಿಸುತ್ತದೆ ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಈ ಟ್ರೈಲರ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಸಿನಿಮಾ ಕುರಿತು ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ.
ಈ ಚಿತ್ರದಲ್ಲಿ ಕಂಗನಾ ಜೊತೆ ಅನುಪಮ್ ಖೇರ್, ಮಹಿಮಾ ಚೌಧರಿ, ಶ್ರೇಯಸ್ ತಲ್ಪಾಡೆ ಸೇರಿದಂತೆ ಅನೇಕರು ನಟಿಸಿದ್ದಾರೆ. ಇದೇ ಸೆ.6ರಂದು ‘ಎಮೆರ್ಜೆನ್ಸಿ’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ನಟಿಸುವ ಜೊತೆ ನಿರ್ದೇಶನ ಕೂಡ ಮಾಡಿದ್ದಾರೆ ಕಂಗನಾ. ರಿಂಕು ಪಿಟ್ಟಿ ಜೊತೆ ಸಹ ನಿರ್ಮಾಪಕಿಯಾಗಿ ಕೂಡ ಕಂಗನಾ ಸಾಥ್ ನೀಡಿದ್ದಾರೆ.