ಕರಣ್ ಜೋಹಾರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕಂಗನಾ

Public TV
2 Min Read
kangana ranaut dhaakad 1

ಬಾಲಿವುಡ್ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹಾರ್ (Karan Johar) ವಿರುದ್ಧದ ವಾಗ್ದಾಳಿಯನ್ನು ನಟಿ ಕಂಗನಾ ರಣಾವತ್ (Kangana Ranaut) ಮುಂದುವರೆಸಿದ್ದಾರೆ. ನಿರಂತರವಾಗಿ ಕರಣ್ ವಿರುದ್ಧ ಪೋಸ್ಟ್ ಮಾಡುತ್ತಿರುವ ಅವರು, ಇದೀಗ ‘ಚಾಚಾ ಚೌಧರಿ’ ಎಂದು ಜರಿದಿದ್ದಾರೆ. ನಾನು ನಿರ್ಮಾಪಕಿಯಾಗಿ ಯಶಸ್ವಿಯಾದರೆ ನಿನ್ನ ಮುಖಕ್ಕೆ ಉಜ್ಜುತ್ತೇನೆ ಎಂದು ಗುಡುಗಿದ್ದಾರೆ.

Karan kangana priyank

ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಂಗನಾ, ನೇರವಾಗಿ ಬಾಲಿವುಡ್ ಮಾಫಿಯಾ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಕರಣ್ ಕೂಡ ಇದ್ದಾರೆ ಎಂದಿದ್ದಾರೆ. ಈ ಮಾತು ಸಾಕಷ್ಟು ವಿವಾದವನ್ನು (controversy) ಎಬ್ಬಿಸಿತ್ತು. ಅಲ್ಲಿಂದ ಕಂಗನಾ ಮತ್ತು ಕರಣ್ ಹಾವು ಮುಂಗಸಿ ರೀತಿಯಲ್ಲಿ ಕಿತ್ತಾಡುವುದಕ್ಕೆ ಶುರು ಮಾಡಿದರು. ಕರಣ್ ಬಗ್ಗೆ ಯಾರೇ ನೆಗೆಟಿವ್ ಕಾಮೆಂಟ್ ಮಾಡಿದರೂ, ಕಂಗನಾ ಅವರ ಪರವಾಗಿ ನಿಂತುಕೊಳ್ಳುತ್ತಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

Kangana

ಮೊನ್ನೆಯಷ್ಟೇ ಕರಣ್ ವಿಚಾರವಾಗಿ ಅನುಷ್ಕಾ ಶರ್ಮಾ ಬೆನ್ನಿಗೆ ನಿಂತಿದ್ದರು ಕಂಗನಾ.  2016ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಶರ್ಮಾ (Anushka Sharma) ಮತ್ತು ಕರಣ್ ಜೋಹಾರ್ ವೇದಿಕೆಯ ಮೇಲಿದ್ದರು. ಆ ಸಮಯದಲ್ಲಿ ಕರಣ್ ಮಾತನಾಡುತ್ತಾ, ‘ಅನುಷ್ಕಾಳ ಕರಿಯರ್  ನಾಶ ಮಾಡಬೇಕು ಎಂದುಕೊಂಡಿದ್ದೆ’ ಎನ್ನುತ್ತಾರೆ. ಅದಕ್ಕೆ ಅವರು ಕಾರಣವನ್ನೂ ಕೊಡುತ್ತಾರೆ. ಅನುಷ್ಕಾ ನಟನೆಯ ಚೊಚ್ಚಲು ಚಿತ್ರಕ್ಕೆ ಆಯ್ಕೆ ಆಗುವ ಮುನ್ನ, ಅವರ ಫೋಟೋವನ್ನು ನಿರ್ದೇಶಕರು ನನ್ನ ಬಳಿ ತಂದಿದ್ದರು. ಅನುಷ್ಕಾ ಫೋಟೋ ನೋಡಿ, ಇವರು ಬೇಡ ಅಂದಿದ್ದೆ. ನನ್ನ ಹತ್ತಿರವೇ ಒಬ್ಬಳು ನಾಯಕಿ ಇದ್ದಾಳೆ ಎಂದೂ ಹೇಳಿದ್ದೆ. ಕೊನೆಗೂ ಅನುಷ್ಕಾ ಅವರೇ ಆಯ್ಕೆಯಾದರು’ ಎಂದಿದ್ದರು.

kangana ranaut 2

ಈ ವಿಚಾರವಾಗಿ ಕಂಗನಾ ಉರಿವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದರು. ‘ಕರಣ್ ಜೋಹಾರ್ ಇಂತಹ ಕೆಲಸಗಳನ್ನು ಮಾಡಲು ಫೇಮಸ್. ಯಾರದ್ದೆಲ್ಲ ಕರಿಯರ್ ನಾಶ ಮಾಡಿದ್ದಾರೆ ಎನ್ನುವ ಪಟ್ಟಿ ನನ್ನ ಬಳಿ ಇದೆ. ಇಂತಹ ಕೆಲಸ ಮಾಡಲೆಂದು ಅವರು ಇರುವುದು’ ಎಂದು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದರು.

kangana ranaut dhaakad 2

ಕಂಗನಾ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರಣ್ ಜೋಹಾರ್ ಬಗ್ಗೆ ಮತ್ತಷ್ಟು ನೆಗೆಟಿವ್ ಕಾಮೆಂಟ್ ಗಳನ್ನು ಬರೆಯಲಾಗುತ್ತಿದೆ. ಯಾರಿಗೆಲ್ಲ ಕರಣ್ ತೊಂದರೆ ಕೊಟ್ಟಿದ್ದಾರೆ ಎನ್ನುವ ಒಂದೊಂದೇ ಹೆಸರುಗಳನ್ನು ನೆಟ್ಟಿಗರು ಹಾಕುತ್ತಿದ್ದಾರೆ. ಅಲ್ಲಿಗೆ ಕಂಗನಾ ಹೊಡೆದ ಕಲ್ಲು ಹಲವು ದಿಕ್ಕುಗಳನ್ನು ಆವರಿಸುತ್ತಿದೆ.

Share This Article