ವೆಲ್ಲಿಂಗ್ಟನ್: ಟಿ20 ವಿಶ್ವಕಪ್ (T20 World Cup) ಸೆಮಿಫೈನಲ್‍ನಲ್ಲಿ ಸೋಲಿನ ಬಳಿಕ ನ್ಯೂಜಿಲೆಂಡ್ (New Zealand) ಮತ್ತು ಭಾರತ (India) ತಂಡ ದ್ವಿಪಕ್ಷೀಯ ಸರಣಿಗೆ ಸಿದ್ಧಗೊಂಡಿದೆ. ಕಿವೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ.
Advertisement
ನ.18 ರಿಂದ ಟಿ20 ಸರಣಿ ಆರಂಭವಾಗುತ್ತಿದೆ. ಈ ನಡುವೆ ಸರಣಿ ಆರಂಭಕ್ಕೂ ಮೊದಲೇ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (Kane Williamson) ಕಪ್ ಹಿಡಿದು ಹೊರಟಿದ್ದಾರೆ. ಇಂದು ಎರಡೂ ತಂಡಗಳ ನಾಯಕರಾದ ವಿಲಿಯಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಟಿ20 ಸರಣಿಯ ಟ್ರೋಫಿ ಜೊತೆ ಫೋಟೋ ತೆಗೆಸಿಕೊಂಡರು. ಈ ವೇಳೆ ಫೋಟೋಶೂಟ್‍ಗೂ ಮುನ್ನ ಟ್ರೋಫಿ ಗಾಳಿಗೆ ಹಾರಿದೆ. ಪಕ್ಕದಲ್ಲಿದ್ದ ವಿಲಿಯಮ್ಸನ್ ಕೂಡಲೇ ಬೀಳುತ್ತಿದ್ದ ಟ್ರೋಫಿ ಹಿಡಿದಿದ್ದಾರೆ. ಅಲ್ಲದೆ ಟ್ರೋಫಿ ಜೊತೆ ಹೊರಡಲು ಸಿದ್ಧರಾದಂತೆ ಕಂಡು ಬಂದರು. ಇದನ್ನೂ ಓದಿ: ರಿಟೈನ್ ಪಟ್ಟಿಯಲ್ಲಿ RCB ಗೇಮ್ ಪ್ಲಾನ್ – 10 ತಂಡಗಳ ರಿಟೈನ್-ರಿಲೀಸ್ ಲಿಸ್ಟ್
Advertisement
Advertisement
ಈ ಮೊದಲು ಫೋಟೋಗಾಗಿ ಇಬ್ಬರು ನಾಯಕರು Crocodile Bike ನಲ್ಲಿ ಬಂದರು. ಟಿ20 ಸರಣಿಯ ಮೂರು ಪಂದ್ಯಗಳು ನ.18, 20 ಮತ್ತು 22 ರಂದು ನಡೆಯಲಿದೆ. ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. 3 ಪಂದ್ಯಗಳ ಏಕದಿನ ಸರಣಿ ನ.25, 27 ಮತ್ತು 30 ರಂದು ನಡೆಯಲಿದ್ದು, ಟೀಂ ಇಂಡಿಯಾವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಟಿ20 ಮತ್ತು ಏಕದಿನ ತಂಡಕ್ಕೆ ಪ್ರತ್ಯೇಕ ನಾಯಕರನ್ನು ನೇಮಿಸಲಾಗಿದೆ. ಈ ಸರಣಿಯಿಂದ ರೋಹಿತ್ ಶರ್ಮಾ, ಕೊಹ್ಲಿ ಸಹಿತ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
Advertisement
ಟಿ20 ತಂಡ:
ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್, ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲ್‍ದೀಪ್ ಯಾದವ್, ಅರ್ಶ್‍ದೀಪ್ ಸಿಂಗ್, ಹರ್ಷಲ್ ಪಟೇಲ್ , ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್. ಇದನ್ನೂ ಓದಿ: ಐಪಿಎಲ್‌ಗೆ ಗುಡ್‌ಬೈ ಹೇಳಿದ್ರೂ ಮುಂಬೈ ತಂಡದಲ್ಲೇ ಇರಲಿದ್ದಾರೆ ಪೋಲಾರ್ಡ್
"I'll have that!" ???? ???? #NZvIND #CricketNation pic.twitter.com/KiQL8IkzUK
— BLACKCAPS (@BLACKCAPS) November 16, 2022
ಏಕದಿನ ತಂಡ:
ಶಿಖರ್ ಧವನ್ (ನಾಯಕ), ರಿಷಬ್ ಪಂತ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯಜುವೇಂದ್ರ ಚಾಹಲ್, ಕುಲ್‍ದೀಪ್ ಯಾದವ್, ಅರ್ಶ್‍ದೀಪ್ ಸಿಂಗ್, ದೀಪಕ್ ಚಾಹರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.