ರಾಮನಗರ: ನರೇಗಾದಲ್ಲಿ(ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ) ಅತಿ ಹೆಚ್ಚು ಕಾಮಗಾರಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕನಕಪುರ ದೇಶಕ್ಕೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ.
ನರೇಗಾದಲ್ಲಿ ಹೆಚ್ಚಿನ ಕಾಮಗಾರಿಗಳನ್ನು ನಡೆಸಿದ ಕನಕಪುರ ಮೊದಲ ಸ್ಥಾನದಲ್ಲಿದ್ದರೆ, ನರೇಗಾದಲ್ಲಿ ಉತ್ತಮ ಸಾಧನೆ ಮಾಡಿರುವ ಬಳ್ಳಾರಿ ಜಿ.ಪಂ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
Advertisement
Advertisement
ಕಡಿಮೆ ಅವಧಿಯಲ್ಲಿ ಅತಿ ಹೆಚ್ಚಿನ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ವಿಭಾಗದಲ್ಲಿ ಇಡೀ ದೇಶದಲ್ಲಿ ಕನಕಪುರ ಮೊದಲ ಸ್ಥಾನ ಪಡೆದಿದೆ ಎಂಬುದು ವಿಶೇಷ. ನರೇಗಾದಡಿಯಲ್ಲಿ ವಿವಿಧ ಹಂತಗಳಲ್ಲಿ ಪ್ರತಿ ವರ್ಷವು ರಾಷ್ಟ್ರಪ್ರಶಸ್ತಿ ನೀಡಲಾಗುತ್ತದೆ. ಅದರಲ್ಲಿ 2018-19ನೇ ಸಾಲಿನಲ್ಲಿ ಅತಿ ಹೆಚ್ಚು ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಕನಕಪುರ ತಾಲೂಕು ಇಡೀ ರಾಷ್ಟ್ರದಲ್ಲಿ ಮೊದಲ ಸ್ಥಾನ ಪಡೆದಿದೆ.
Advertisement
ಜಿ.ಪಂನ ನರೇಗಾ ಕಾಮಗಾರಿಗಳ ಅನ್ವಯ ಆನ್‍ಲೈನ್ ಮೂಲಕ ದೇಶದ ಎಲ್ಲ ಜಿ.ಪಂಗಳು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಈ ವರದಿ ಆಧರಿಸಿ, ಕೇಂದ್ರ ಸರ್ಕಾರ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ, ಕನಕಪುರ ತಾಲೂಕು ಇಡೀ ರಾಷ್ಟ್ರದಲ್ಲಿ ಅತಿ ಹೆಚ್ಚು ನರೇಗಾ ಕಾಮಗಾರಿ ಪ್ರಾರಂಭಿಸಿ, ಅಷ್ಟೇ ಶೀಘ್ರದಲ್ಲಿ ಪೂರ್ಣಗೊಳಿಸಿದೆ.
Advertisement
2008ರಿಂದ ಜಿಲ್ಲೆಯಲ್ಲಿ ನರೇಗಾ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಅದರಲ್ಲಿ ಕನಕಪುರದಲ್ಲಿನ ನರೇಗಾ ಕಾಮಗಾರಿಗಳ ವಿವರ ಇಂತಿವೆ;
ಒಟ್ಟು ಕಾಮಗಾರಿ -97,363
ಮುಕ್ತಾಯಗೊಂಡ ಕಾಮಗಾರಿ -85,675
ವೈಯಕ್ತಿಕ ಕಾಮಗಾರಿ(ಮುಕ್ತಾಯ) -79,558
ಸಮುದಾಯ ಕಾಮಗಾರಿ(ಮುಕ್ತಾಯ) -6,087
ಚೆಕ್ ಡ್ಯಾಂ ನಿರ್ಮಾಣ -1,965
ಕೆರೆ -227
ಕೃಷಿ ಹೊಂಡ -18,858
ದನದ ಕೊಟ್ಟಿಗೆ -28,342
2015-16ನೇ ಸಾಲಿನಲ್ಲಿ ಪ್ರಾರಂಭಿಸಲಾಗಿದ್ದ ಎಲ್ಲ ಕಾಮಗಾರಿಗಳನ್ನು ಕನಕಪುರ ಪೂರ್ಣಗೊಳಿಸಿದೆ. 2016-17ನೇ ಸಾಲಿನಲ್ಲಿ ಕೇವಲ 5 ಕಾಮಗಾರಿಗಳನ್ನು ಬಾಕಿ ಉಳಿಸಿಕೊಂಡಿದ್ದರೆ, 2017-18ನೇ ಸಾಲಿನಲ್ಲಿ ಕೇವಲ 15 ಕಾಮಗಾರಿಗಳು ಮಾತ್ರವೇ ಉಳಿಕೆಯಲ್ಲಿವೆ. ಕಳೆದ 5 ವರ್ಷಗಳ ಅವಧಿಯಲ್ಲಿ ಕನಕಪುರ ನರೇಗಾದಲ್ಲಿ ಗರಿಷ್ಠ ಸಾಧನೆ ಮಾಡಿರುವುದೇ ಇಂದಿನ ಪ್ರಶಸ್ತಿಗೆ ಕಾರಣವಾಗಿದೆ.