ಬೆಂಗಳೂರು: ಸಿದ್ದರಾಮಯ್ಯ ರಾಜ್ಯಕ್ಕಷ್ಟೇ ಅಲ್ಲ ದೇಶಕ್ಕೆ ಅನಿವಾರ್ಯ ಎಂದು ಕಂಪ್ಲಿ ಕಾಂಗ್ರೆಸ್ ಶಾಸಕ ಗಣೇಶ್ (Kampli MLA Ganesh) ಹೇಳಿದ್ದಾರೆ.
ಸಿದ್ದರಾಮಯ್ಯ ಅನಿವಾರ್ಯವೇ ಎಂಬ ಪ್ರಶ್ನೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ (Siddaramaiah) ರಾಜ್ಯಕ್ಕಷ್ಟೇ ಅಲ್ಲ ದೇಶಕ್ಕೆ ಅನಿವಾರ್ಯ. ಎಲ್ಲಾ 138 ಶಾಸಕರು ಅವರ ಬೆಂಬಲಕ್ಕಿದ್ದೇವೆ. ಅವರಿರೋದ್ರಿಂದ ಪಾರ್ಟಿಗೆ ಅನುಕೂಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಫೆ.18ಕ್ಕೆ ರಾಜೀವ್ ಕುಮಾರ್ ನಿವೃತ್ತಿ – ಯಾರಾಗ್ತಾರೆ ಮುಂದಿನ ಮುಖ್ಯ ಚುನಾವಣಾ ಆಯುಕ್ತ?
ಈ ಬಾರಿಯ ಚುನಾವಣೆಯನ್ನ ನೋಡಿದ್ದೀರ ಅವರು ಒಂದು ರೀತಿ ರೋಲ್ ಮಾಡೆಲ್ ಇದ್ದಂತೆ. ಅವರಿಂದಾನೇ ಐದಕ್ಕೆ ಐದು ನಮ್ಮ ಭಾಗದಲ್ಲಿ ಸೀಟು ಗೆದ್ದಿದ್ದೇವೆ. ಐದು ವರ್ಷ ಅವರೇ ಸಿಎಂ ಆಗ್ಬೇಕು ಎಂಬುದನ್ನ ಹೈಕಮಾಂಡ್ ಹೇಳಿದ್ರೆ 5 ವರ್ಷ ಮುಂದುವರಿಯುತ್ತಾರೆ. ಅವರೇ ಸಿಎಂ ಸ್ಥಾನದಲ್ಲಿ ಮುಂದುವರಿದರೆ ಒಳ್ಳೆಯದು ಎಂದು ನುಡಿದಿದ್ದಾರೆ. ಇದನ್ನೂ ಓದಿ: ಅಮೆರಿಕದಿಂದ 2ನೇ ಹಂತದ ಗಡಿಪಾರು – ಇಂದು 119 ಮಂದಿ ಅಕ್ರಮ ವಲಸಿಗರು ಭಾರತಕ್ಕೆ
ಇನ್ನೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವನ್ನ ಪಾರ್ಟಿ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಶೀಷ್ ಮಹಲ್ ವಿವಾದ; ನವೀಕರಣ, ಐಷಾರಾಮಿ ವೆಚ್ಚದ ವಿವರವಾದ ತನಿಖೆಗೆ ಆದೇಶಿಸಿದ ಕೇಂದ್ರ ಜಾಗೃತ ಆಯೋಗ