ಬೆಂಗಳೂರು: ಇತ್ತೀಚೆಗೆ ನಗರದ ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಸಂತ್ರಸ್ತ ಯುವತಿ ಆರೋಪಿಗಳ ಗುರುತು ಪತ್ತೆ ಹಚ್ಚಿದ್ದಾಳೆ.
ಘಟನೆ ಬಳಿಕ ಶಾಕ್‍ಗೆ ಒಳಗಾಗಿದ್ದ ಯುವತಿ ಪೊಲೀಸ್ ತನಿಖೆಗೆ ಸ್ಪಂದಿಸ್ತಾ ಇರ್ಲಿಲ್ಲ. ಮಾತ್ರವಲ್ಲದೇ ಆರೋಪಿಗಳ ಗುರುತು ಪತ್ತೆ ಹಚ್ಚುವ ಸಲುವಾಗಿ ಪೊಲೀಸರು 2 ಬಾರಿ ಪರೇಡ್ ಮಾಡುವುದಾಗಿ ಹೇಳಿದ್ದು, ಇದಕ್ಕೆ ಯುವತಿ ಹಾಜರಾಗದೇ ಪೆರೇಡ್ ರದ್ದಾಗಿತ್ತು.
Advertisement
ಪೊಲೀಸರು ಎಷ್ಟೇ ಬಾರಿ ಮನವೊಲಿಕೆ ಯತ್ನ ಮಾಡಿದ್ರು ಡೋಂಟ್ ಡಿಸ್ಟರ್ಬ್ ಮೀ ಅಂತಲೇ ಮೆಸೇಜ್ ಕಳಿಸ್ತಾ ಇದ್ಲು. ಯುವತಿಯ ಈ ವರ್ತನೆಯಿಂದ ಭಯಗೊಂಡಿದ್ದ ಪೊಲೀಸ್ರು ತನಿಖೆ ಹಳ್ಳ ಹಿಡಿಯುತ್ತೆ ಅಂದುಕೊಂಡಿದ್ರು. ಹೀಗಾಗಿ ಮೂರನೇ ಬಾರಿ ಪೆರೇಡ್‍ಗೆ ಹಾಜರಾಗದಿದ್ದಲ್ಲಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲು ಚಿಂತನೆ ನಡೆಸಿದ್ದರು. ಕೊನೆಗೆ ಕೂಡ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಮಾಡಿದ್ದು, ಆರೋಪಿಗಳ ಪತ್ತೆಗೆ ಆದ ಕಷ್ಟ ಎಲ್ಲವನ್ನೂ ಯುವತಿಗೆ ಹೇಳಿ ಮನವೊಲಿಕೆ ಮಾಡಿದ್ದಾರೆ. ಮಾತ್ರವಲ್ಲದೇ ಪೆರೇಡ್‍ನಲ್ಲಿ ಹಾಜರಾಗಿ ಆರೋಪಿಗಳನ್ನು ಪತ್ತೆ ಮಾಡಿಕೊಡಬೇಕೆಂದು ಹೇಳಿದ್ದಾರೆ. ಪೊಲೀಸರ ಮನವೊಲಿಕೆಯ ಬಳಿಕ ಮಂಗಳವಾರ ಸಂತ್ರಸ್ತ ಯುವತಿ ಪೆರೇಡ್‍ನಲ್ಲಿ ಹಾಜರಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ತನಿಖೆಗೆ ಸಹಕಾರ ನೀಡಿದ್ದಾಳೆ.
Advertisement
ಏನಿದು ಪ್ರಕರಣ?: ಜನವರಿ 1ರ ಬೆಳಗಿನ ಜಾವ ಯುವತಿ ನ್ಯೂ ಇಯರ್ ಪಾರ್ಟಿ ಮುಗಿಸಿಕೊಂಡು ಆಟೋದಿಂದ ಇಳಿದು 50 ಮೀಟರ್ ದೂರದಲ್ಲಿದ್ದ ಮನೆಗೆ ತೆರಳುತ್ತಿದ್ದಾಗ ಸ್ಕೂಟರಿನಲ್ಲಿ ಬಂದಿದ್ದ ಇಬ್ಬರು ಯುವಕರು ಆಕೆಯನ್ನು ಚುಡಾಯಿಸಿ ಮುಂದಕ್ಕೆ ಹೋಗಿದ್ದರು. ಇದಾದ ಬಳಿಕ ಹಿಂದಿರುಗಿ ಬಂದ ಯುವಕರಲ್ಲಿ ಒಬ್ಬಾತ ಆಕೆಯನ್ನು ಗಟ್ಟಿಯಾಗಿ ತಬ್ಬಿ ದೌರ್ಜನ್ಯ ಎಸಗಿದ್ದ. ಈ ವೇಳೆ ಯುವತಿ ಜೋರಾಗಿ ಕಿರುಚಿಕೊಂಡಾಗ ಅವರು ಪರಾರಿಯಾಗಿದ್ದರು. ದೌರ್ಜನ್ಯ ಎಸಗುತ್ತಿದ್ದ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಲೆನೋ ಸೇರಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
Advertisement