Connect with us

ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಕೇಸ್: ಬೆದರಿಕೆಗೆ ನಾಪತ್ತೆಯಾಗಿದ್ದಾಳೆ ಸಂತ್ರಸ್ತೆ!

ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಕೇಸ್: ಬೆದರಿಕೆಗೆ ನಾಪತ್ತೆಯಾಗಿದ್ದಾಳೆ ಸಂತ್ರಸ್ತೆ!

ಬೆಂಗಳೂರು: ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯ ನಾಪತ್ತೆಯಾಗಿ ಪ್ರಕರಣದ ತನಿಖೆಗೆ ಪೊಲೀಸರಿಗೆ ಸಹಕಾರ ನೀಡದೇ ಇರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು, ಪೊಲೀಸರಿಗೆ ಮಾಹಿತಿ ನೀಡದೇ ಯುವತಿ ಈಗ ಮನೆಯನ್ನು ಖಾಲಿ ಮಾಡಿದ್ದು, ಎಲ್ಲಿ ನೆಲೆಸಿದ್ದೇನೆ ಎನ್ನುವ ಮಾಹಿತಿಯನ್ನು ನೀಡಿಲ್ಲ. ಪೊಲೀಸರ ಸಂಪರ್ಕಕ್ಕೂ ಸಿಗದ ಕಾರಣ ತನಿಖೆಗೆ ಹಿನ್ನಡೆಯಾಗಿದೆ. ಆರೋಪಿಗಳ ಕಡೆಯಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಯುವತಿ ನಾಪತ್ತೆಯಾಗಿದ್ದಾಳೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಮಂಗಳವಾರ ಜೈಲಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ದಿನಾಂಕ ನಿಗದಿಯಾಗಿದೆ. ಗುರುತು ಪತ್ತೆ ಮಾಡಲು ಮೂರನೇ ಬಾರಿ ಪೆರೇಡ್ ನಡೆಯಲಿದ್ದು, ಒಂದು ವೇಳೆ ಯುವತಿ ಹಾಜರಾಗದೇ ಇದ್ದಲ್ಲಿ ತನಿಖೆಗೆ ಭಾರೀ ಹಿನ್ನಡೆಯಾಗಲಿದೆ.

ಯುವತಿ ಪೆರೇಡ್‍ಗೆ ಹಾಜರಾಗದ ಕಾರಣ ಎರಡು ಬಾರಿ ಪೆರೇಡ್ ರದ್ದಾಗಿತ್ತು. ಯುವತಿ ಮೂರನೇ ಬಾರಿಯೂ ಪೆರೇಡ್ ಗೆ ಬಾರದೇ ಇದ್ದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಏನಿದು ಪ್ರಕರಣ?
ಜನವರಿ ಒಂದರ ಬೆಳಗಿನ ಜಾವ ಯುವತಿ ಪಾರ್ಟಿ ಮುಗಿಸಿಕೊಂಡು ಆಟೋದಿಂದ ಇಳಿದು 50 ಮೀಟರ್ ದೂರದಲ್ಲಿದ್ದ ಮನೆಗೆ ತೆರಳುತ್ತಿದ್ದಾಗ ಸ್ಕೂಟರ್‍ನಲ್ಲಿ ಬಂದಿದ್ದ ಇಬ್ಬರು ಯುವಕರು ಆಕೆಯನ್ನು ಚುಡಾಯಿಸಿ ಮುಂದಕ್ಕೆ ಹೋಗಿದ್ದರು. ಇದಾದ ಬಳಿಕ ಹಿಂದಿರುಗಿ ಬಂದ ಯುವಕರಲ್ಲಿ ಒಬ್ಬಾತ ಆಕೆಯನ್ನು ಗಟ್ಟಿಯಾಗಿ ತಬ್ಬಿ ದೌರ್ಜನ್ಯ ಎಸಗಿದ್ದ. ಈ ವೇಳೆ ಯುವತಿ ಜೋರಾಗಿ ಕಿರುಚಿಕೊಂಡಾಗ ಅವರು ಪರಾರಿಯಾಗಿದ್ದರು. ದೌರ್ಜನ್ಯ ಎಸಗುತ್ತಿದ್ದ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಲೆನೋ ಸೇರಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

 

https://www.youtube.com/watch?v=RJuNBL03x4A

https://www.youtube.com/watch?v=-8b67OHUS-Y