ಬೆಂಗಳೂರು: ‘ಕಂಬಳ ವೀರ’ ಕರ್ನಾಟಕದ ಉಸೇನ್ ಬೋಲ್ಟ್, ಅದ್ವೀತಿಯ ಕಂಬಳ ಓಟಗಾರ ಶ್ರೀನಿವಾಸ್ ಗೌಡ ಬಗ್ಗೆ ಎಂದೂ ರಿವೀಲ್ ಆಗದ ಕಹಾನಿಯನ್ನು ಪಬ್ಲಿಕ್ ಟಿವಿ ಬಿಚ್ಚಿಟ್ಟಿದೆ. ಇದನ್ನೂ ಓದಿ: ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ
ಶ್ರೀನಿವಾಸ್ ಗೌಡ, ಇಡೀ ದೇಶಕ್ಕೆ ದೇಶವೇ ಈ ಕಂಬಳದ ಕೆಸರುಗದ್ದೆಯಲ್ಲಿ ಓಡಿದವನನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಕಂಬಳದಲ್ಲಿ 145 ಮೀಟರ್ ದೂರವನ್ನು 13.61 ಸೆಕೆಂಡಿನಲ್ಲಿ ಓಡಿ, ಕರ್ನಾಟಕದ ಉಸೇನ್ ಬೊಲ್ಟ್ ಅಂತ ಕರೆಸಿಕೊಂಡಿದ್ದಾರೆ.
ಮಂಗಳೂರಿನ ಕಂಬಳ ಹೀರೋ ಅದೆಂಥ ಕಡು ಬಡತನದಲ್ಲಿ ಬೆಳೆದು ಬಂದರು ಅಂದರೆ ಇದೂವರೆಗೆ ಕಾಲಿಗೆ ಶೂವನ್ನೇ ಧರಿಸಲ್ಲವಂತೆ. ಹವಾಯಿ ಚಪ್ಪಲಿಯಷ್ಟೇ ಶ್ರೀನಿವಾಸ್‍ಗೆ ಆಸರೆ. ಬರಿಗಾಲಲ್ಲಿ ಕುದುರೆ ಕೆನೆತದಂತೆ ಓಡುವ ಈ ಹೀರೋಗೆ ಶೂ ಧರಿಸಿಯೇ ಗೊತ್ತಿಲ್ಲವಂತೆ. ಇದನ್ನೂ ಓದಿ: ಮತ್ತೆ ಚಿನ್ನದ ಪದಕ ಬಾಚಿದ ಕಂಬಳದ ಉಸೇನ್ ಬೋಲ್ಟ್
ಕಂಬಳದಲ್ಲಿ ಮಿಂಚಿನ ಓಟದ ಮೂಲಕ ಗಮನ ಸೆಳೆದ, ಶೂವನ್ನು ಧರಿಸಲು ಹಣವಿಲ್ಲದ ಶ್ರೀನಿವಾಸ್‍ಗೆ ಈಗ ಅಂತರಾಷ್ಟ್ರೀಯ ಬ್ರ್ಯಾಂಡೆಡ್ ಶೂ ಕಂಪನಿಯವರೇ ಕರೆ ಮಾಡುತ್ತಿದ್ದಾರೆ. ಒಲಂಪಿಕ್ಸ್‌ಗೆ ಫೀಲ್ಡ್‌ಗಿಳಿಯುವ ಮುನ್ನವೇ ಬ್ರ್ಯಾಂಡೆಡ್ ಶೂ ಕಂಪನಿಯವರು ಕಂಬಳ ವೀರನಿಗಾಗಿ ಸ್ಪೆಷಲ್ ಶೂ ತಯಾರಿಯಲ್ಲಿ ತೊಡಗಿದ್ದಾರೆ ಎಂದು ಕಂಬಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಗುಣಪಾಲ್ ಕಡಂಬ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕಂಬಳ ವೀರನ ಓಟದ ಬದುಕಿನಷ್ಟೇ ಅವರ ಬದುಕಿನ ಹೋರಾಟ ಕೂಡ ಅಚ್ಚರಿಗೊಳಿಸುತ್ತೆ.
ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ್ ಗೌಡ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದರು. ಇದು ಕಂಬಳ ಕ್ರೀಡೆಯಲ್ಲಿ ಇದೂವರೆಗಿನ ಅತ್ಯಂತ ವೇಗದ ದಾಖಲೆಯಾಗಿದೆ. ಶ್ರೀನಿವಾಸ್ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿದರೆ 9.55 ಸೆಕೆಂಡ್‍ನಲ್ಲಿ ಓಟ ಪೂರ್ಣಗೊಳಿಸಿ ಬೋಲ್ಟ್ ದಾಖಲೆಯನ್ನು ಉಡಾಯಿಸಿದ್ದರು.