ಮಂಗಳೂರು: ನನ್ನ ಮೇಲೆ ಮಾಡಿರುವ ಈ ಆರೋಪಗಳೆಲ್ಲವೂ ಸುಳ್ಳು. ನಕಲಿ ದಾಖಲೆ ಸೃಷ್ಟಿಸಲು ಸಾಧ್ಯವಿಲ್ಲ. ಎಲ್ಲಾ ಕಂಬಳದಲ್ಲೂ ಲೈವ್ ಇರುತ್ತದೆ. ಪಾರದರ್ಶಕತೆ ಇರುತ್ತೆ ಟೈಮಿಂಗ್‍ನ್ನು ತೋರಿಸುವ ಪರದೆಯೂ ಸಹ ಇರುತ್ತದೆ. ಹೀಗಾಗಿ ಮೋಸ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ತನ್ನ ವಿರುದ್ಧ ಕ್ರಿಮಿನಲ್ ದೂರು ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ದೂರು ನೀಡಿದ ಲೋಕೇಶ್ ಶೆಟ್ಟಿ ಫಿಲ್ಮ್ ಮಾಡುತ್ತೇನೆ ಅಂದಾಗ ನಾನು ಒಪ್ಪಿರಲಿಲ್ಲ. ಇದನ್ನು ಸಹಿಸಲು ಆಗದೇ ಈ ಆರೋಪ ಮಾಡಿದ್ದಾರೆ. ಹೀಗಾಗಿ ಲೋಕೇಶ್ ಶೆಟ್ಟಿ ವಿರುದ್ಧ ದೂರು ನೀಡುತ್ತೇನೆ. ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕರಾವಳಿಯ ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ್ ಗೌಡ ವಿರುದ್ಧ ಪ್ರಕರಣ ದಾಖಲು
ದೂರು ನೀಡಿದ ಬಳಿಕ ನನ್ನ ಹೇಳಿಕೆಯನ್ನು ಪೊಲೀಸ್ ಠಾಣೆಗೆ ನೀಡಿದ್ದೇನೆ. ಕೋಣೆಗಳನ್ನು ಓಡಿಸುವುದು ಮಾತ್ರ ನಮ್ಮ ಕೆಲಸ. ಕಂಬಳ ಓಟದ ಸಮಯ, ರಿಸಲ್ಟ್ ಹೇಳೋದು ತೀರ್ಪುಗಾರರು. ಈ ಸುಳ್ಳು ಆರೋಪದಿಂದಾಗಿ ನೆಮ್ಮದಿಯಿಂದ ಇರುವುದಕ್ಕೆ ಆಗ್ತಿಲ್ಲ ಎಂದರು. ಇದನ್ನೂ ಓದಿ: ನಿಮ್ಮದೆಲ್ಲಾ ಬಯಲಿಗೆ ಎಳೆಯುತ್ತೇನೆ ಜಸ್ಟ್ ವೈಟ್: ಎಂ.ಸಿ.ಸುಧಾಕರ್‌ಗೆ ಸಚಿವ ಸುಧಾಕರ್ ವಾರ್ನಿಂಗ್
ಶ್ರೀನಿವಾಸಗೌಡ ವಿರುದ್ಧದ ಆರೋಪ ಏನು..?
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ. ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ ಲಕ್ಷಾಂತರ ಹಣ ಸಂಗ್ರಹ ಮಾಡಿದ್ದಾರೆ ಎಂದು ಆರೋಪಿಸಿ ಲೋಕೇಶ್ ಶೆಟ್ಟಿ ಎಂಬವರು ಕಂಬಳ ಓಟಗಾರ ಶ್ರೀನಿವಾಸ ಗೌಡ, ಗುಣಪಾಲ ಕಡಂಬ ಮತ್ತು ರತ್ನಾಕರ ಎಂಬವರ ವಿರುದ್ದ ಕ್ರಿಮಿನಲ್ ದೂರು ನೀಡಿದ್ದಾರೆ. ಇದನ್ನೂ ಓದಿ: 8.96 ಸೆಕೆಂಡ್‍ನಲ್ಲಿ 100 ಮೀ. ಕ್ರಮಿಸಿ ಕಂಬಳದಲ್ಲಿ ತಮ್ಮದೇ ದಾಖಲೆ ಸರಗಟ್ಟಿದ ಶ್ರೀನಿವಾಸ್ ಗೌಡ
2020ರ ಫೆ.1ರಂದು ಐಕಳ ಕಂಬಳದಲ್ಲಿ 100 ಮೀ. ದೂರವನ್ನು 9.55 ಸೆಕೆಂಡ್ ನಲ್ಲಿ ಕ್ರಮಿಸಿದ್ದ ಶ್ರೀನಿವಾಸ ಗೌಡ ಅವರು 2009ರಲ್ಲಿ ಉಸೇನ್ ಬೋಲ್ಟ್ 100 ಮೀ. ಅನ್ನು 9.58 ಸೆಕೆಂಡ್ ನಲ್ಲಿ ಕ್ರಮಿಸಿದ ದಾಖಲೆ ಉಡೀಸ್ ಮಾಡಿದ್ದರು.