– ಮುಖ್ಯ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರು
– 8 ಕೋಟಿ ಖರ್ಚಿನಲ್ಲಿ ಕಂಬಳ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕರಾವಳಿ ಕಂಬಳಕ್ಕೆ (Bengaluru Kambala) ಕೌಂಟ್ ಡೌನ್ ಆರಂಭವಾಗಿದೆ. ಇತಿಹಾದಲ್ಲೇ ಮೊದಲ ಬಾರಿಗೆ ನವೆಂಬರ್ 25, 26 ರಂದು ನಗರದ ಪ್ಯಾಲೆಸ್ ಗ್ರೌಂಡ್‍ನಲ್ಲಿ ಕಂಬಳ ನಡೆಯಲಿದೆ.
Advertisement
ಈ ಸಂಬಂಧ ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 200 ಜೋಡಿ ಕೋಣಗಳು ಕರಾವಳಿ ಕಂಬಳದಲ್ಲಿ ಕಮಾಲ್ ಮಾಡಲಿವೆ. ಹಾಸನದಿಂದ ದೊಡ್ಡ ಮೆರವಣಿಯ ಮೂಲಕ ಬೆಂಗಳೂರಿಗೆ ಕೋಣಗಳು ಬರಲಿದೆ. ಕಂಬಳದ ಮುಖ್ಯ ವೇದಿಕೆಗೆ ಪುನೀತ್ ರಾಜ್ ಕುಮಾರ್ (Puneeth Raj Kumar) ಅಂತಾ ಹೆಸರಿಟ್ಟು ನಾಮಕರಣ ಮಾಡಲಾಗಿದೆ ಎಂದರು.
Advertisement
Advertisement
ಇದೇ ವೇಳೆ ಕಂಬಳ ಸಮಿತಿಯ ಅಧ್ಯಕ್ಷ, ಪುತ್ತೂರು ಶಾಸಕ ಆಶೋಕ್ ರೈ (Ashok Rai) ಮಾತನಾಡಿ, ಬೆಂಗಳೂರಿನ ಕಂಬಳ ರೆಕಾರ್ಡ್ ಬ್ರೇಕ್ ಆಗಲಿದೆ. ಕರಾವಳಿ ಭಾಗದಲ್ಲಿ 147 ಕೆರೆ ಇರಲಿದೆ. ಆದರೆ ಬೆಂಗಳೂರಿನ ಕೆರೆ 155 ಮೀಟರ್ ಉದ್ದ ಇರಲಿದೆ. ಕಂಬಳದ ಕೋಣಗಳಿಗೆ ನೀರು ಬೈಹುಲ್ಲು, ಹುರುಳಿ ಎಲ್ಲವೂ ಊರಿಂದ ತರಿಸಲಾಗಿದೆ ಎಂದರು.
Advertisement
ನೀರು ಕೂಡ ಬದಲಾವಣೆ ಆದರೆ ಅವುಗಳಿಗೆ ಆರೋಗ್ಯ ಸಮಸ್ಯೆ ಆಗಲಿದೆ. ಹೀಗಾಗಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಗೆದ್ದ ಕಂಬಳದ ಕೋಣಗಳ ಮಾಲೀಕರಿಗೆ 16 ಗ್ರಾಂ. ಬಂಗಾರ ಮತ್ತು ಒಂದು ಲಕ್ಷ ರೂ. ಬಹುಮಾನ ಕೊಡಲಾಗುತ್ತೆ ಎಂದು ಹೇಳಿದರು.
ಬ್ರಿಜ್ ಭೂಷಣ್ ಆಗಮನ ಗೊಂದಲ ಉಂಟಾಗಿತ್ತು. ಹೀಗಾಗಿ ಅವ್ರಿಗೆ ಖುದ್ದಾಗಿ ವಿರೋಧದ ಬಗ್ಗೆಯೂ ಅವರಿಗೆ ಹೇಳಿದ್ದೇವೆ. ಹೊಸ ಆಮಂತ್ರಣ ಪತ್ರಿಕೆಯನ್ನು ಕೂಡ ತಯಾರು ಮಾಡುತ್ತಿದ್ದೇವೆ. ಒಟ್ಟು ಎಂಟು ಕೋಟಿ ಖರ್ಚಿನಲ್ಲಿ ಕಂಬಳ ನಡೆಯಲಿದೆ. ಎರಡು ದಿನದ ಕಾರ್ಯಕ್ರಮಕ್ಕೆ ಒಟ್ಟು ಆರು ಲಕ್ಷ ಜನ ಬರುವ ನಿರೀಕ್ಷೆ ಇದೆ ಎಂದು ವಿವರಿಸಿದರು.
ಐಶ್ವರ್ಯಾ ರೈ ಕಂಬಳಕ್ಕೆ ಬರೋದು ಅನುಮಾನ ಇದೆ. ಅವರ ತಾಯಿಗೆ ಆರೋಗ್ಯದ ಸಮಸ್ಯೆ ಇರೋದ್ರಿಂದ ಬರೋದು ಡೌಟು. ಆದರೆ ಬೇರೆ ಎಲ್ಲಾ ಗೆಸ್ಟ್ ಬರುತ್ತಿದ್ದಾರೆ ಎಂದು ಗುರುಕಿರಣ್ (Guru Kiran) ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.