ಕಾರವಾರ: ಜ್ಯೋತಿಷಿ ಕಮಲಾಕರ್ ಭಟ್ (Kamalakar Bhat) ಗ್ಯಾಂಗ್‌ನಿಂದ ವಸಂತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಕಮಲಾಕರ ಭಟ್ ಮತ್ತು ಸುಚಿತ್ರಾಗೆ ಫೆಬ್ರುವರಿ 21 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಸಿದ್ದಾಪುರ JMFC ನ್ಯಾಯಾಲಯದ ನ್ಯಾಯಾಧೀಶ ಉಮೇಶ್ ಎಂ.ಪಿ ಅವರು ಆದೇಶ ಹೊರಡಿಸಿದ್ದಾರೆ.
8 ಆರೋಪಿಗಳ ಪೈಕಿ A5 ಆರೋಪಿ ಮಹ್ಮದ್ ಮೆಹಫೂಪ್, A6 ಆರೋಪಿ ಮಹ್ಮದ್ ಫೈಸಲ್, A7 ಆರೋಪಿ ಇರ್ಫಾನ್‌ಗೆ ಪೊಲೀಸ್ ಕಸ್ಟಡಿ ಇರುವ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನ ಫೆ.13 ಕ್ಕೆ ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ. ಇದನ್ನೂ ಓದಿ: ನನ್ನನ್ನು ನೋಡಿಕೊಳ್ಳದಿದ್ದರೆ ವಿಡಿಯೋ ಔಟ್ – ಕಮಲಾಕರ್ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್
ಉಳಿದ 5 ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ್ದು, A1 ಆರೋಪಿ ಸುಚಿತ್ರಾ, A2-ಲೋಕನಾಥ್, A3-ಕಮಲಾಕರ ಭಟ್, A4 -ಆಕಾಶ ಮತ್ತು A8 ವಿನಯ್‌ಗೆ ಫೆ.21 ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ.
ಉಳಿದ ಮೂರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಮಹಜರು ಸೇರಿದಂತೆ ಹತ್ಯೆ ಮಾಡಿದ ಮಾರಕಾಸ್ತ್ರಗಳನ್ನ ಪತ್ತೆಗಾಗಿ ಪೊಲೀಸರ ವಶದಲ್ಲೇ ಶಿವಮೊಗ್ಗಕ್ಕೆ ಸಿದ್ದಾಪುರ ಪೊಲೀಸರು ಕರೆದೊಯ್ದಿದ್ದು ಫೆ.13 ರಂದು ಸಿದ್ದಾಪುರ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಇದನ್ನೂ ಓದಿ: ಗಂಡನಿಲ್ಲದ ವೇಳೆ ಜಮೀನ್ದಾರ್‌ಗೆ ಸುಚಿತ್ರಾ ಬುಲಾವ್; ಕಲಬುರಗಿ ಜಮೀನ್ದಾರ ಜೊತೆ 3 ವರ್ಷ ಲವ್ವಿ-ಡವ್ವಿ

