ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ (US Presidential Election 2024) ಮತದಾನ ಆರಂಭವಾಗಿದ್ದು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಮಧ್ಯರಾತ್ರಿ ಮಿಷಿಗನ್ ರಾಜ್ಯದಲ್ಲಿ ತಮ್ಮ ಕೊನೆಯ ಚುನಾವಣಾ ಪ್ರಚಾರ ಮುಗಿಸಿದರು.
ಅಮೆರಿಕ ಕಾಲಮಾನ ಸೋಮವಾರ ಮಧ್ಯರಾತ್ರಿ 2:15 ಟ್ರಂಪ್ ಕೊನೆಯ ಬಾರಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ “Kamala, you’re fired. Get the hell out of here.” ಎಂದು ಗುಡುಗಿದರು.
Advertisement
“Kamala, you’re fired. Get the hell out of here.”
Donald Trump speaks at his final rally in Michigan. He adds: ‘Kamala, you’re horrible at your job… You’re a low IQ individual’https://t.co/GIL7LtrHnh
📺 Sky 501 pic.twitter.com/pmg46vYva2
— Sky News (@SkyNews) November 5, 2024
Advertisement
ತಮ್ಮ ಭಾಷಣದಲ್ಲಿ ಅಮೆರಿಕದ ಆರ್ಥಿಕತೆ ಕುಸಿಯಲು ಕಮಲಾ ಅವರ ಆಡಳಿತವೇ ಕಾರಣ. ಇಂದಿಗೆ ಕಮಲಾ ಅವಧಿ ಅಂತ್ಯಗೊಂಡಿದೆ. ಉತ್ತಮ ಅಮೆರಿಕ ನಿರ್ಮಿಸಲು ನನಗೆ ಮತ ಚಲಾಯಿಸಿ ಎಂದು ಕೇಳಿಕೊಂಡರು.
Advertisement
ಅಮೆರಿಕ ಅಧ್ಯಕ್ಷೀಯ ಚುನಾವಣೆ (US Presidential Election) ಅಂತಿಮ ಘಟ್ಟ ತಲುಪಿದೆ. ಇಡೀ ಜಗತ್ತೇ ಕುತೂಹಲದಿಂದ ಎದುರು ನೋಡ್ತಿರುವ ಮತದಾನ ಇಂದು ನಡೆಯಲಿದೆ. ಭಾರತೀಯ ಕಾಲಮಾನ ಇಂದು ರಾತ್ರಿಯಿಂದ ನಾಳೆಯವರೆಗೆ ಮತದಾನ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris), ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಾನಾ ನೀನಾ ಎನ್ನುವಂತೆ ಫೈಟ್ ಮಾಡ್ತಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?
Advertisement
The last dance of the Trump campaign at 2:15 am in Michigan. We landed in FL at 5:35 & @realDonaldTrump is still going strong. If that man at 78 can do 4 rallies & pull an all nighter for America we can all
GET OUT & VOTE & STAY IN LINE TILL IT’S DONE. Now it’s on you America🇺🇸 pic.twitter.com/CETaR0s6uS
— Donald Trump Jr. (@DonaldJTrumpJr) November 5, 2024
ಈಗಾಗಲೇ ಸುಮಾರು 7.7 ಕೋಟಿ ಜನ ಮತದಾನ (Early Voting) ಮಾಡಿದ್ದಾರೆ. ಅಮೆರಿಕದಲ್ಲಿ ಸುಮಾರು ಎರಡು ವಾರಗಳ ಮೊದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಲ್ಲೂ ಈ ಬಾರಿ ಭಾರೀ ಪ್ರಮಾಣದಲ್ಲಿ ಮೊದಲೇ ಮತದಾನ ಮಾಡಲು ಜನರು ಆಸಕ್ತಿ ತೋರಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಕಮಲಾ ಹ್ಯಾರಿಸ್ (Kamala Harris) ಮಧ್ಯೆ ನೇರಾನೇರ ಸ್ಪರ್ಧೆ ಇದ್ದು ಸೋಲಿನ ಅಂತರ ಬಹಳ ಕಡಿಮೆ ಇರಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.