InternationalLatestMain Post

1ಗಂಟೆ 25 ನಿಮಿಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಮಲಾ ಹ್ಯಾರಿಸ್

ವಾಷಿಂಗ್ಟನ್: ಜೋ ಬೈಡನ್‍ಗೆ ಆರೋಗ್ಯ ಹಿನ್ನೆಲೆ ಉಪಾಧ್ಯೆಕ್ಷೆ ಕಮಲಾ ಹ್ಯಾರಿಸ್ ಅಲ್ಪಾವಧಿಗೆ ಅಮೆರಿಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಶುಕ್ರವಾರ ಶ್ವೇತಭವನ ತಿಳಿಸಿದೆ. ಒಂದು ಗಂಟೆ 25 ನಿಮಿಷಗಳ ಕಾಲ ಅಧ್ಯಕ್ಷಿಯ ಅಧಿಕಾರವನ್ನು ಕಮಲಾ ಹ್ಯಾರಿಸ್ ಹೊಂದಿದ್ದರು ಎಂದು ತಿಳಿಸಿದೆ.

USA ಮೊದಲ ಮಹಿಳಾ ಅಧ್ಯಕ್ಷ: ಬೆಳಗ್ಗೆ 10.10ಕ್ಕೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಬಗ್ಗೆ ಅಧಿಕ ಪತ್ರವನ್ನ ಕಳುಹಿಸಲಾಗಿತ್ತು. ಅಧ್ಯಕ್ಷರು ಬೆಳಗ್ಗೆ 11.35ಕ್ಕೆ ತಮ್ಮ ಕರ್ತವ್ಯಗಳನ್ನು ಪುನರಾರಂಭಿಸಿದ್ದಾರೆ ಎಂದು ವೈಟ್ ಹೌಸ್ ತಿಳಿಸಿವೆ. ಇದನ್ನೂ ಓದಿ: ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಅತ್ಯಂತ ಹಿರಿಯ ವ್ಯಕ್ತಿ ಬೈಡನ್ ಅವರು ತಮ್ಮ 79ನೇ ಹುಟ್ಟುಹಬ್ಬದ ಮುನ್ನಾದಿನ ಶುಕ್ರವಾರದ ಆರಂಭದಲ್ಲಿ ವಾಷಿಂಗ್ಟನ್‌ನ ಹೊರಗಿನ ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರಕ್ಕೆ ತೆರಳಿದರು. ವಾರ್ಷಿಕ ತಪಾಸಣೆ (routine annual physical) ಕಾರಣ ಬೈಡನ್ ಅವರ ಆರೋಗ್ಯ ತಪಾಸಣೆ ನಡೆಸಬೇಕಿತ್ತು ಎಂದು ಶ್ವೇತಭವನ ತಿಳಿಸಿದೆ.ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

ಕೊಲೊನೋಸ್ಕೋಪಿ ಪರೀಕ್ಷೆ ಸಮಯದಲ್ಲಿ ಬೈಡನ್‌ ಅವರಿಗೆ ಅರಿವಳಿಕೆ ಔಷಧಿಯನ್ನು ನೀಡಲಾಗಿತ್ತು. ಹೀಗಾಗಿ ಉಪಾಧ್ಯಕ್ಷರು ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ. ಬೈಡನ್ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಅಲ್ಪಾವಧಿಗೆ ಅಧಿಕಾರ ಹಸ್ತಾಂತರಿಸಿ ಆರೋಗ್ಯ ತಪಾಸಣೆಗೆ ತೆರಳಿದರು. ಈ ವೇಳೆ ಉಪಾಧ್ಯಕ್ಷೆ ವೆಸ್ಟ್ ವಿಂಗ್‌ನಲ್ಲಿರುವ ಅವರ ಕಚೇರಿಯಲ್ಲೇ ಕಾರ್ಯನಿರ್ವಹಿಸಿದರು.

ಹಂಗಾಮಿ ಅಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಕರ್ತವ್ಯ ನಿಭಾಯಿಸಿದ್ದಾರೆ. ಈ ಮೂಲಕ ಅಮೆರಿಕಾ ಅಧ್ಯಕ್ಷರಾದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಕಮಲಾ ಹ್ಯಾರಿಸ್ ಪಾತ್ರರಾಗಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕೊಲೊನೋಸ್ಕೋಪಿಗಾಗಿ ಅರಿವಳಿಕೆಗೆ ಒಳಗಾಗಿದ್ದರು. ಈ ವೇಲೆ ಅಧ್ಯಕ್ಷೀಯ ಅಧಿಕಾರವನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‍ಗೆ ವರ್ಗಾಯಿಸಲಾಯಿತ್ತು. ವಾಷಿಂಗ್ಟನ್ ಡಿಸಿಯಲ್ಲಿರುವ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟಿರಿ ಆಸ್ಪತ್ರೆಯಲ್ಲಿ ಬೈಡನ್ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Leave a Reply

Your email address will not be published.

Back to top button