ಬೆಂಗಳೂರು: ನಾನು ಯಾವುದೇ ಸುಳ್ಳು ಹೇಳಿಲ್ಲ, ನಮ್ಮ ತನಿಖೆ ಪ್ರಕಾರ ಬೈಕ್ ಟಚ್ ಆಗಿದ್ದಕ್ಕೆ ಚಂದ್ರು ಕೊಲೆ ನಡೆದಿದೆ ಎಂದು ಕಮಿಷನರ್ ಕಮಲ್ ಪಂಥ್ ಸ್ಪಷ್ಟನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆ.ಜೆ ನಗರ ಯುವಕ ಚಂದ್ರು ಕೊಲೆ ಪ್ರಕರಣದ ತನಿಖೆಯಲ್ಲಿ ಕಂಡುಕೊಂಡ ವಿಚಾರವನ್ನಷ್ಟೇ ಹೇಳಿದ್ದೇನೆ. ನಮ್ಮ ತನಿಖೆಯಲ್ಲಿ ಮೃತ ಚಂದ್ರು ಜೊತೆಗೆ ಘಟನೆ ವೇಳೆ ಇದ್ದ ಸೈಮನ್ ಹೇಳಿಕೆ ನೀಡಿದ್ದಾನೆ ಎಂದು ಮಾಹಿತಿ ನೀಡಿದರು.
ನಮ್ಮ ತನಿಖೆ ವೇಳೆ ಬೈಕ್ ಟಚ್ ಆಗಿದ್ದರಿಂದಲೇ ಚಾಕುವಿನಿಂದ ಇರಿದಿದ್ದಾಗಿ ಸೈಮನ್ ಹೇಳಿಕೆ ನೀಡಿದ್ದಾನೆ. ಈ ಹಿನ್ನೆಲೆ ತನಿಖೆ ಮಾಡಿದ್ದ ಬಳಿಕ ಕಂಡುಕೊಂಡ ವಿಚಾರದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ, ಚಂದ್ರು ಕೊಲೆಗೆ ಉರ್ದು ಕಾರಣ: ರವಿಕುಮಾರ್
ಪೊಲೀಸ್ ಕಮಿಷನರ್ ಕಮಲ್ ಪಂಥ್ ಸುಳ್ಳು ಹೇಳಿದ್ದಾರೆ. ಚಂದ್ರು ಸ್ನೇಹಿತ ಸೈಮನ್ ರಾಜನ್ ಹೇಳಿರುವುದೇ ಸತ್ಯ. ಚಂದ್ರು ಮನೆಯವರು ಹೇಳಿರುವಂತೆ ಉರ್ದು ಕಾರಣಕ್ಕಾಗಿಯೇ ಚಂದ್ರು ಕೊಲೆ ಆಗಿರುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದರು. ಇದನ್ನೂ ಓದಿ: ಗ್ರಾಮ ಪಂಚಾಯಿತಿ ಅಧ್ಯಕ್ಷನ ಶೋಕಿ ಲೈಫ್ – ಸ್ವಂತ ಗಾಡಿಗೆ ಸರ್ಕಾರದ ಲೋಗೋ ಹಾಕಿ ಪ್ರವಾಸ