ಪ್ರಾಜೆಕ್ಟ್ ಕೆ ಸಿನಿಮಾದ ಶೂಟಿಂಗ್ ಗಾಗಿ ಕಮಲ್ ಹಾಸನ್ (Kamal Haasan) ಅಮೆರಿಕಾದಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲದೇ, ಮೊನ್ನೆಯಷ್ಟೇ ಈ ಸಿನಿಮಾದ ಗ್ಲಿಂಪ್ಸ್ ಕೂಡ ರಿಲೀಸ್ ಆಗಿತ್ತು. ಆ ಸಮಾರಂಭದಲ್ಲೂ ಭಾಗಿಯಾಗಲು ಕಮಲ್ ಅಮೆರಿಕಾ ಪ್ರಯಾಣ ಬೆಳೆಸಿದ್ದರು. ಇದೇ ವೇಳೆಯಲ್ಲಿ ಸಮಯ ತೆಗೆದುಕೊಂಡು ಆಸ್ಕರ್ (Oscar) ಪ್ರಶಸ್ತಿ ವಿಜೇತ ಗೆಳೆಯನನ್ನು ಭೇಟಿ ಮಾಡಿದ್ದಾರೆ ಕಮಲ್.
Advertisement
ಕಮಲ್ ನಟನೆಯ ದಶಾವತಾರಂ, ಅವ್ವೈಷಣ್ಮುಗಿ ಸಿನಿಮಾಗಳಲ್ಲಿ ಮೇಕಪ್ ಮಾಡಿದವರು ಆಸ್ಕರ್ ಪ್ರಶಸ್ತಿ ವಿಜೇತ ಮೇಕಪ್ ಕಲಾವಿದ ಮೈಕೆಲ್ ವೆಸ್ಟ್ ಮೋರ್ (Michael Westmore). ನಲವತ್ತು ವರ್ಷಗಳಿಂದ ಕಮಲ್ ಮತ್ತು ಮೈಕೆಲ್ ಸ್ನೇಹಿತರು. ಸದ್ಯ ಮೈಕೆಲ್ ಅಮೆರಿಕಾದಲ್ಲೇ (America) ವಾಸವಿದ್ದಾರೆ. ಅವರನ್ನು ಕಮಲ್ ಭೇಟಿ ಮಾಡಿ ಒಂದಷ್ಟು ಸಮಯ ಕಳೆದಿದ್ದಾರೆ.
Advertisement
Advertisement
ಮೈಕೆಲ್ ಅವರನ್ನು ಕಮಲ್ ಭೇಟಿ ಮಾಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ನೇಹಿತ ಮೈಕಲ್ ಜೊತೆಗಿನ ಗೆಳೆತನವನ್ನು ಮತ್ತೆ ಮೆಲುಕು ಹಾಕಿರುವ ವಿಚಾರವನ್ನು ಕೂಡ ವರದಿ ಮಾಡಿವೆ. ಸದ್ಯ ಕಮಲ್ ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರಾಜೆಕ್ಟ್ ಕೆ ಶೂಟ್ ನಲ್ಲಿ ಬ್ಯುಸಿಯಾಗಿದ್ದಾರೆ.
Advertisement
Web Stories