ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡರು ಅಂತಾರಲ್ಲಾ? ಅದು ಈ ಸೆಲೆಬ್ರಿಟಿಗಳಿಗೆ ಹೆಚ್ಚು ಅನ್ವಯವಾಗುತ್ತೆ. ಇದನ್ನಿಲ್ಲಿ ಯಾಕೆ ಹೇಳಬೇಕಾಯ್ತೆಂದರೆ, ಖ್ಯಾತ ನಟ ಕಮಲ್ ಹಾಸನ್ ಕೂಡಾ ಇದೀಗ ಅಂಥಾದ್ದದೇ ಕೆಲಸ ಮಾಡಿಕೊಂಡಿದ್ದಾರೆ!
ಮಾಧ್ಯಮದ ಮಂದಿ ಕೇಳಿದ್ದೇ ಒಂದು ಪ್ರಶ್ನೆ, ಕಮಲ್ ಹೇಳಿದ್ದೇ ಮತ್ತೊಂದು ಉತ್ತರ. ಅದು ಕರ್ನಾಟಕವನ್ನು ಕೆಣಕುವಂಥಾ ಉತ್ತರ!
Advertisement
Advertisement
ಶಬರಿಮಲೆಗೆ ಮಹಿಳೆಯರಿಗೂ ಪ್ರವೇಶ ನೀಡಿ ಸುಪ್ರೀಂ ಕೋರ್ಟ್ ನೀಡಿರೋ ತೀರ್ಪು ಇದೀಗ ವಿವಾದದ ಅಲೆಯೆಬ್ಬಿಸಿದೆ. ಇಲ್ಲಿನ ಧಾರ್ಮಿಕ ವಲಯ ಸುಪ್ರೀಂ ತೀರ್ಪಿಗೇ ಸೆಡ್ಡು ಹೊಡೆದಿದೆ. ಈ ವಿದ್ಯಮಾನದ ಬಗ್ಗೆ ಏನಂತೀರಿ ಅಂತ ಮಾಧ್ಯಮ ಮಂದಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿರೋ ಕಮಲ್, ‘ಕೇರಳ ಸರ್ಕಾರ ಸುಪ್ರೀಂ ತೀರ್ಪನ್ನು ಗೌರವಿಸಿದೆ. ಅದಕ್ಕೆ ಪೂರಕವಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಕಾವೇರಿ ನದಿ ನೀರಿನ ವಿಚಾರವಾಗಿ ತಮಿಳುನಾಡಿಗೆ ಅನ್ಯಾಯ ಮಾಡುತ್ತಿದೆ’ ಎಂಬರ್ಥದಲ್ಲಿ ಮಾತಾಡಿದ್ದಾರೆ.
Advertisement
ಇದರಲ್ಲಿ ಕರ್ನಾಟಕವನ್ನು ಎಳೆತರುವ ಯಾವ ದರ್ದೂ ಕೂಡಾ ಕಮಲ್ ಹಾಸನ್ ಅವರಿಗಿರಲಿಲ್ಲ. ಆದರೂ ಕೂಡಾ ಅವರು ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಶಬರಿಮಲೆ ವಿವಾದದಲ್ಲಿ ಕರ್ನಾಟಕವನ್ನು ಎಳೆತಂದು ಕನ್ನಡಿಗರನ್ನು ಕೆಣಕಿದ್ದಾರೆ!
Advertisement
ಕಮಲ್ ಹಾಸನ್ ಅವರ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv