ಕಾಲಿವುಡ್‌ನಲ್ಲಿ ಹೊಸ ಹವಾ ಸೃಷ್ಟಿ ಮಾಡಿದ ಸಿನಿಮಾ `ವಿಕ್ರಮ್’, ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿರುವ ಈ ಸಿನಿಮಾ ನಂತರ ಕಮಲ್ ಹಾಸನ್ ಮತ್ತೆ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಫ್ಯಾನ್ಸ್ ಕಾಯ್ತಿದ್ದರು. ಈಗ ಕಮಲ್ ಹಾಸನ್ ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಸಿಕ್ಕಿದೆ.
`ವಿಕ್ರಮ್ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ ಕಮಲ್ ಹಾಸನ್ ಉಗ್ರಾವತಾರಕ್ಕೆ ಇಡೀ ಸಿನಿ ಪ್ರಪಂಚನೇ ತಲೆಬಾಗಿತ್ತು. ಹೀಗಿರುವಾಗ ವಿಕ್ರಮ್ ಚಿತ್ರದ ನಂತರ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಡಿಟೈಲ್ಸ್ ಸಿಕ್ಕಿದೆ. ವಿಕ್ರಮ್ ಚಿತ್ರದ ಸಕ್ಸಸ್ ನಂತರ ಸಖತ್ ಸೆಲೆಕ್ಟಿವ್ ಆಗಿರುವ ಕಮಲ್ ಹಾಸನ್ ಪಾ ರಂಜಿತ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಲವರ್ಸ್ ಅಲ್ಲ ತಂದೆ ಮಗಳು : ರಾಖಿ ಸಾವಂತ್
ಇತ್ತೀಚೆಗಷ್ಟೇ ಫಿಲ್ಮ್ ಮೇಕರ್ ಪಾ ರಂಜಿತ್ ನೀಡಿದ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ಜತೆ ಸಿನಿಮಾ ಮಾಡುವುದಾಗಿ ರಿವೀಲ್ ಮಾಡಿದ್ದಾರೆ. ಸದ್ಯ ಚಿಯಾನ್ ವಿಕ್ರಮ್ ಸಿನಿಮಾ ಸೆಟ್ಟೇರುತ್ತಿದೆ. ಈ ಚಿತ್ರದ ಬಳಿಕ ಕಮಲ್ ಹಾಸನ್‌ಗೆ ಚಿತ್ರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಮತ್ತೆ ಭಿನ್ನ ಕಥೆಯ ಮೂಲಕ ಕಮಲ್ ಹಾಸನ್ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ. ಸಾಲು ಸಾಲು ಚಿತ್ರ ನಟನ ಕೈಯಲ್ಲಿದೆ. ಹೇಗೆ ಯಾವ ರೂಪದಲ್ಲಿ ಕಮಲ್ ಹಾಸನ್ ಬರಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.