BollywoodCinemaLatestMain PostSouth cinema

ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಚಿತ್ರದಿಂದ ಕಾಜಲ್ ಅಗರ್ವಾಲ್ ಔಟ್

Advertisements

`ವಿಕ್ರಮ್’ ಚಿತ್ರದ ಸಕ್ಸಸ್ ನಂತರ ಕಮಲ್ ಹಾಸನ್ `ಇಂಡಿಯನ್ 2′ ಚಿತ್ರಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರದ ನಾಯಕಿಯಾಗಿದ್ದ ಕಾಜಲ್ ಔಟ್ ಆಗಿದ್ದಾರೆ. ಅವರ ಜಾಗಕ್ಕೆ ಬೇರೆ ನಾಯಕಿಯ ಎಂಟ್ರಿಯಾಗುತ್ತಿದೆ.

ಕಮಲ್ ಮತ್ತು ಶಂಕರ್ ಕಾಂಬಿನೇಷನ್‌ನ `ಇಂಡಿಯನ್’ ಚಿತ್ರ 1996ರಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಬಳಿಕ ಇದರ ಸೀಕ್ವೇಲ್ 2019ರಿಂದ ಚಿತ್ರೀಕರಣ ಶುರುವಾಯಿತು. 2020ರಲ್ಲಿ ನಡೆದ ಅವಘಡದಲ್ಲಿ ಮೂರು ಕಾರ್ಮಿಕರು ಜೀವ ಕಳೆದುಕಂಡಿದ್ದರು. ಬಳಿಕ ಕೊರೊನಾ ಕಾಟದಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಈಗ 60% ಶೂಟಿಂಗ್ ಆಗಿದ್ದ ಈ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ: ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ನಿಮಗೇಕೆ ಅಷ್ಟೊಂದು ಆಸಕ್ತಿ?: ಕರಣ್ ಗೆ ಕಾಲೆಳೆದ ಆಮೀರ್

`ವಿಕ್ರಮ್’ ಚಿತ್ರದ ಸಕ್ಸಸ್ ನಂತರ ಸ್ಥಗಿತಗೊಂಡಿದ್ದ `ಇಂಡಿಯನ್ 2′ ಚಿತ್ರವನ್ನ ಕಮಲ್ ಹಾಸನ್ ಮತ್ತೆ ಕೈಗೆತ್ತಿಕೊಂಡಿದ್ದಾರೆ. ಕಮಲ್‌ಗೆ ನಿರ್ದೇಶಕ ಶಂಕರ್ ಸಾಥ್ ನೀಡಿದ್ದಾರೆ. ಆದರೆ ಈಗ ಪ್ಯಾನ್ ಇಂಡಿಯಾ ಚಿತ್ರವಾಗಿ ಬರುತ್ತಿದೆ. ಈ ಚಿತ್ರದ ನಾಯಕಿಯಾಗಿದ್ದ ಕಾಜಲ್ ಮದುವೆಯಾಗಿ, ಮಗನ ಆರೈಕೆಯಲ್ಲಿರುವುದರಿಂದ ಮತ್ತೆ ಚಿತ್ರೀಕರಣದಿಂದ ಮುಂದುವರೆಯುವುದು ಕಷ್ಟವಾಗುತ್ತಿದೆ. ಹಾಗಾಗಿ ಚಿತ್ರತಂಡ ಕಾಜಲ್‌ನ್ನ ಚಿತ್ರದಿಂದ ಕೈ ಬಿಡಲಾಗಿದೆ.

ಇನ್ನು ಕಮಲ್ ಹಾಸನ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್‌ನ `ಇಂಡಿಯನ್ 2’ಗೆ ಫೈನಲ್ ಮಾಡಲು ಯೋಚಿಸಿದೆಯಂತೆ. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಮಾಹಿತಿ ಹೊರಬರಲಿದೆ.

Live Tv

Leave a Reply

Your email address will not be published.

Back to top button