ವಿಕ್ರಮ್ (Vikram) ಸಿನಿಮಾದ ಯಶಸ್ಸಿನ ನಂತರ ಕಮಲ್ ಹಾಸನ್ (Kamal Haasan) ಲಕ್ ಮತ್ತು ಲುಕ್ ಎರಡೂ ಬದಲಾಗಿದೆ. ಸಿನಿಮಾ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದ ಕಮಲ್ ಅವರಿಗೆ ವಿಕ್ರಮ್ ಬಂಪರ್ ಬೆಳೆ. ಸಾಲ ತೀರಿಸುವುದರ ಜೊತೆ ತುಂಬಾ ದಿನಗಳ ನಂತರ ದೊಡ್ಡ ಮಟ್ಟದಲ್ಲೇ ಯಶಸ್ಸು ತಂದುಕೊಟ್ಟ ಸಿನಿಮಾವಿದು. ತಮ್ಮದೇ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರು ಮಾಡಿದ್ದರಿಂದ ಎಲ್ಲ ಸಾಲ ತೀರಿಸಿ ನಿರುಮ್ಮಳಾರಾಗಿದ್ದಾರೆ ಕಮಲ್.
Advertisement
ಸದ್ಯ ಇಂಡಿಯನ್ 2 ಸಿನಿಮಾದ ಶೂಟಿಂಗ್ ನಲ್ಲಿ ಕಮಲ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಯಾವಾಗ ಮುಗಿಯತ್ತೋ ಅವರಿಗೆ ಗೊತ್ತಿಲ್ಲ. ಆದರೂ, ಈ ನಡುವೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ ಕಮಲ್. ಅದು ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವುದು ವಿಶೇಷ. ಈಗಾಗಲೇ ಕಥೆ ಕೂಡ ಫಿಕ್ಸ್ ಆಗಿದ್ದು, ನಿರ್ದೇಶಕರನ್ನೂ ಹುಡುಕಿದ್ದಾರೆ.
Advertisement
Advertisement
ಇಂಡಿಯನ್ 2 ನಂತರ ಕಮಲ್ ಮಾಡುತ್ತಿರುವ ಸಿನಿಮಾವಿದು. ಹಾಗಾಗಿ ಇನ್ನೂ ಹೆಸರಿಟ್ಟಿಲ್ಲ. ಇದು ಕಮಲ್ ನಟನೆಯ 233ನೇ ಚಿತ್ರ. ಈ ಸಿನಿಮಾವನ್ನು ಚದುರಂಗ ವೇಟ್ಟೈ ಸೇರಿದಂತೆ ಹಲವು ಚಿತ್ರಗಳನ್ನು ಮಾಡಿರುವ ನಿರ್ದೇಶಕ ಹೆಚ್.ವಿನೋದ್ (Vinod) ನಿರ್ದೇಶನ ಮಾಡಲಿದ್ದಾರೆ. ಇದೇ ನಿರ್ದೇಶಕರ ತುನಿವು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಸಿನಿಮಾವನ್ನು ಥಿಯೇಟರ್ ಗೆ ಕಳುಹಿಸಿ, ಕಮಲ್ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಮತ್ತೆ ರೂಪೇಶ್ ರಾಜಣ್ಣ ಕಿರಿಕ್