ಪ್ಯಾನ್ ಇಂಡಿಯಾ ಸಿನಿಮಾ ‘ಕಲ್ಕಿ 2898 ಎಡಿ’ (Kalki 2898 AD) ಜೂನ್ 27ರಂದು ಬಿಡುಗಡೆಯಾಗಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ಕಲ್ಕಿ ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಕಮಲ್ ಹಾಸನ್ (Kamal Haasan) 7 ನಿಮಿಷ ನಟಿಸಿದಕ್ಕೆ 20 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ.
ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone), ಬಿಗ್ ಬಿ ನಟನೆಯ ಕಲ್ಕಿ ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣ್ತಿದೆ. ರಿಲೀಸ್ ಬಳಿಕ ಕಮಲ್ ಹಾಸನ್ (Kamal Haasan) ನಟಿಸಿದ ಯಾಸ್ಕಿನ್ ಪಾತ್ರದ ಬಗ್ಗೆ ಟಾಕ್ ಆಗುತ್ತಿದೆ. ಈ ಪಾತ್ರಕ್ಕೆ ಅವರು ಸೆಲೆಕ್ಟ್ ಆಗಿದ್ದು ಹೇಗೆ? ಸಂಭಾವನೆ ವಿಚಾರದ ಬಗ್ಗೆ ಫ್ಯಾನ್ಸ್‌ಗೆ ಈಗ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ದರ್ಶನ್ ಪ್ರಕರಣ: ಹಣೆಬರಹದಲ್ಲಿ ಏನಿದೆಯೋ ಅದೇ ಆಗುತ್ತೆ- ಶಿವಣ್ಣ ಫಸ್ಟ್ ರಿಯಾಕ್ಷನ್
ಸಿನಿಮಾ ಆರಂಭದಲ್ಲಿ ಹಣ್ಣು ಹಣ್ಣು ಮುದುಕನ ಪಾತ್ರದಲ್ಲಿ ಕಮಲ್ ಎಂಟ್ರಿ ಕೊಡ್ತಾರೆ. ಆದರೆ ಚಿತ್ರದ ಅಂತ್ಯದಲ್ಲಿ ಅವರ ನಿಜವಾದ ಲುಕ್ ರಿವೀಲ್ ಆಗುತ್ತದೆ. ಅದನ್ನು ನೋಡಿಯೇ ಫ್ಯಾನ್ಸ್ ದಂಗಾಗಿದ್ದಾರೆ. ಡೈರೆಕ್ಟರ್ ನಾಗ್ ಅಶ್ವಿನ್ ಕತೆ ಮಾಡಿದಾಗಲೇ ಯಾಸ್ಕಿನ್ ಪಾತ್ರವಿತ್ತಂತೆ ಆದರೆ ಯಾರು ಈ ಪಾತ್ರ ಸೂಕ್ತ ಎಂದು ಫೈನಲ್ ಆಗಿರಲಿಲ್ಲವಂತೆ.
ಬಳಿಕ ಚಿತ್ರೀಕರಣ ಪ್ರಾರಂಭಿಸಿದ ವೇಳೆ, ಕೊಂಚ ಅಳುಕಿನಿಂದಲೇ ಕಮಲ್ ಹಾಸನ್‌ರನ್ನು ಯಾಸ್ಕಿನ್ ಪಾತ್ರಕ್ಕೆ ಕೇಳಿದ್ರಂತೆ ನಾಗ್ ಅಶ್ವಿನ್. ಆದರೆ ಕಮಲ್ ಖುಷಿಯಿಂದಲೇ ಈ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. ಆದರೆ ಮೂರೇ ದೃಶ್ಯ, 7 ನಿಮಿಷ 4 ಸೆಕೆಂಡ್ ನಟಿಸಿದ ಕಮಲ್ ಹಾಸನ್‌ಗೆ ನಿರ್ಮಾಪಕ ಅಶ್ವಿನ್ ದತ್ 20 ಕೋಟಿ ರೂ. ಸಂಭಾವನೆ ನೀಡಿರೋದು ಈಗ ಹಾಟ್ ಟಾಪಿಕ್ ಆಗಿದೆ.
ಅಂದಹಾಗೆ, ‘ಕಲ್ಕಿ 2898 ಎಡಿ’ ಪಾರ್ಟ್ 2ನಲ್ಲಿ ಕಮಲ್ ಹಾಸನ್ ಪಾತ್ರವೇ ಹೈಲೆಟ್. ವಿಲನ್ ಆಗಿರುವ ಕಮಲ್ ಪಾತ್ರದ ಮೇಲೆ ಕಥೆ ಸುತ್ತಲಿದೆಯಂತೆ. ಭಾಗ 2ರಲ್ಲಿ ಯಾರು ಊಹಿಸಿರದ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗಲಿದೆ. ಕಲ್ಕಿ ಸಿನಿಮಾದ ಸಕ್ಸಸ್ ನಂತರ ಪಾರ್ಟ್ 2 ಬರಲಿದೆ ಎಂದು ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.