ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಮಲ್ ಹಾಸನ್ ಪುತ್ರಿ ಶ್ರುತಿಗೆ ಮದುವೆ ಅಂದ್ರೆ ಭಯವಾಗುತ್ತಂತೆ. ಹಾಗಂತ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮದುವೆಯ ಕುರಿತು ಶ್ರುತಿ ಹಾಸನ್ ಮಾತನಾಡಿದ್ದಾರೆ.
ಚಿತ್ರರಂಗದ ದಂತಕಥೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಕೂಡ ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್‌ನಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶ್ರುತಿ ಹಾಸನ್ ನೀಡಿದ ಸಂದರ್ಶನವೊಂದರಲ್ಲಿ ಲವ್ ಮತ್ತು ಮದುವೆಯ ಕುರಿತು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಸಂತನು ಹಜಾರಿಕಗೂ ಎಂಬ ಡೂಡಲ್ ಮೇಕರ್ ಕಲಾವಿದನ ಜೊತೆ ಎಂಗೇಜ್ ಆಗಿರುವ ಶ್ರುತಿ, ತಮ್ಮ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ಸ್ನೇಹದಿಂದ ಪ್ರೀತಿಯಾಗಿ ಕೆಲ ಸಮಯದಿಂದ ಡೇಟ್‌ನಲ್ಲಿರುವ ಶ್ರುತಿಗೆ ಸಂತನು ಹಜಾರಿಕನ ಗುಣ ಇಷ್ಟವಂತೆ. ಇಬ್ಬರ ಅಭಿರುಚಿ ಕೂಡ ಒಂದೇ ಆಗಿದೆ. ಈ ಹಿಂದೆ ಸಾಕಷ್ಟು ಕಲಾವಿದರ ಜತೆ ಡೇಟ್ ಮಾಡಿದ್ದೆ, ನಮ್ಮ ಅಭಿರುಚಿ ಸಾಮ್ಯತೆ ಇರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ನಟಿ ತಾರಾ ಅನುರಾಧ ಮತ್ತೆ ಗರ್ಭಿಣಿ: ಫೋಟೋ ವೈರಲ್
ಇನ್ನು ಹೌದು, ನಾನು ಲವ್ ಮಾಡ್ತಿದ್ದೇನೆ, ಮದುವೆ ಅಂದ್ರೆ ನರ್ವಸ್ ಆಗುತ್ತೇನೆ ಮದುವೆ ಭಯ ಅಂತಾ ಮುಕ್ತವಾಗಿ ಶ್ರುತಿ ಮಾತನಾಡಿದ್ದಾರೆ. ಬಳಿಕ ಪಾಲಕರ ವಿಚ್ಛೇದನ ಇದಕ್ಕೆ ಕಾರಣನಾ ಅಂತಾ ಮರು ಪ್ರಶ್ನಿಸಿದ್ದಾರೆ. ನನ್ನ ಪಾಲಕರು ಮದುವೆ ಬಗ್ಗೆ ಸುಂದರವಾದ ಉದ್ದೇಶ ಹೊಂದಿದ್ದರು. ಮದುವೆಯಲ್ಲಿ ಎಲ್ಲವೂ ಚೆನ್ನಾಗಿರಬಹುದು, ಚೆನ್ನಾಗಿರದೇ ಇರಬಹುದು. ಆದರೆ ನಾನು ಯಾವುದು ಒಳ್ಳೆಯದಿದೆಯೋ ಅದರ ಕಡೆಗೆ ಗಮನ ಕೊಡುವೆ. ನನ್ನ ಪಾಲಕರಿಗೆ ಮದುವೆಯಾಗಿ ಚೆನ್ನಾಗಿ ಬಾಳಲಾಗಲಿಲ್ಲ ಅಂತ ನಾನು ಮದುವೆಯಾಗಬಾರದು ಅಂತಲ್ಲ. ಅವರಿಬ್ಬರು ಬುದ್ಧಿವಂತರಾಗಿದ್ದರು. ಅದನ್ನು ನಾನು ಗಮನಿಸಿರುವೆ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.