ಚೆನ್ನೈ: ಕಾಲಿವುಡ್ ಸೂಪರ್‌ಸ್ಟಾರ್ ನಟ ಕಮಲ್ ಹಾಸನ್ ಅವರು ಬರ್ತ್ ಡೇ ದಿನ (ನ.7) ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ “ವಿಕ್ರಮ್” ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.
ನಟ ಕಮಲ್ ಹಾಸನ್ 67ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿನಯದ “ವಿಕ್ರಮ್” ಚಿತ್ರದ ಟೀಸರ್ ಫಸ್ಟ್ ಲುಕ್ ಅನ್ನು ನಿರ್ದೇಶಕ ಲೋಕೇಶ್ ಕನಗರಾಜ್ ಹಾಗೂ ಚಿತ್ರ ತಂಡ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಹಠಾತ್ ಹಾರ್ಟ್ ಅಟ್ಯಾಕ್ ಆದಾಗ ಏನ್ ಮಾಡ್ಬೇಕು?
Thank you @Dir_Lokesh and team. #Vikram_April2022@RKFI @anirudhofficial @VijaySethuOffl #Fahaadh @kalidas700 @gopiprasannaa @girishganges @turmericmediaTM @APIfilms https://t.co/ZwunTEKIp9
— Kamal Haasan (@ikamalhaasan) November 5, 2021
ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ವಿಕ್ರಮ್ ಚಿತ್ರದ ಟೀಸರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಜೈಲಿನಲ್ಲಿ ಪೊಲೀಸರಿಂದ ಎದುರಾಗುವ ಗುಂಡಿನ ಸುರಿಮಳೆಯನ್ನು ಕಬ್ಬಿಣದ ಶೀಲ್ಡ್‌ನಿಂದ ಕಮಲ್ ಹಾಸನ್ ತಡೆಯುವ ದೃಶ್ಯಾವಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ
ಈ ಸಿನಿಮಾಗೆ ಅನಿರುದ್ಧ್ ಮತ್ತು ಗಿರೀಶ್ ಗಂಗಾಧರನ್ ಛಾಯಾಗ್ರಹಣ, ಫಿಲೋಮಿನ್ ರಾಜ್ ಸಂಕಲನ ಮಾಡಿದ್ದಾರೆ.