ನಾಗಚೈತನ್ಯ (Naga Chaitanya) ನಟನೆಯ ಧೂತ್ ಸಿರೀಸ್ ಇದೀಗ ಸಿಕ್ವೇಲ್ ರೂಪದಲ್ಲಿ ಬರಲಿದೆ. ಈಗಾಗಲೇ ಸರಣಿಗಾಗಿ ಸರ್ವಸಿದ್ದತೆ ಮಾಡಿಕೊಂಡಿರುವ ಚಿತ್ರತಂಡ ನಾಯಕಿಯನ್ನೂ ಆಯ್ಕೆ ಮಾಡಿಕೊಂಡಿದೆ. ಈ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಮಾಕ್ಷಿ ಭಾಸ್ಕರಲಾ ಕಾಣಿಸಿಕೊಳ್ಳಲಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಕಾಮಾಕ್ಷಿ, ಪ್ರವೃತ್ತಿಯಲ್ಲಿ ನಟಿಯೂ ಹೌದು.
ಧೂತ್ (Dhoot 2) ಸರಣಿಯಲ್ಲಿ ಕಾಮಾಕ್ಷಿ (Kamakshi Bhaskarala), ಟ್ರಕ್ ಡ್ರೈವರ್ ಕೋಟಿ ಎನ್ನುವವರು ಪತ್ನಿಯಾಗಿ ನಟಿಸಿದ್ದರು. ಈಗ ಹೊಸ ಬಗೆಯ ಪ್ರಮುಖ ಪಾತ್ರವೇ ಅವರಿಗೆ ಸಿಕ್ಕಿದೆ. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸಗಳೂ ನಡೆಯುತ್ತಿವೆ.
ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಸರಣಿ ಇದಾಗಿದ್ದು, ಮಾಧ್ಯಮಗಳಲ್ಲಿ ನಡೆಯುವ ಅಕ್ರಮಗಳನ್ನು ತೋರಿಸುಲಾಗುತ್ತಿದೆ. ವಿಕ್ರಮ್ ಕುಮಾರ್ (Vikram Kumar) ನಿರ್ದೇಶನದಲ್ಲಿ ಈ ಸರಣಿ ಮೂಡಿ ಬಂದಿದ್ದು, ಅದೇ ನಿರ್ದೇಶಕರೇ ಮುಂದುವರೆದಿದ್ದಾರೆ.