ಕಲ್ಯಾಣ ರಾವ್ ಮುಚಳಂಬಿ ಪ್ರಥಮ ಪುಣ್ಯ ಸ್ಮರಣೆ – ಐವರಿಗೆ ಕಲ್ಯಾಣಶ್ರೀ ಪ್ರಶಸ್ತಿ ಪ್ರದಾನ

Public TV
1 Min Read
kalyana rao first anniversary kalyanshree award function belagavi

ಬೆಳಗಾವಿ: ಹಸಿರುಕ್ರಾಂತಿ ಕನ್ನಡ ಪತ್ರಿಕೆಯ ಸಂಪಾದಕರು ಮತ್ತು ರೈತ ಹೋರಾಟಗಾರರಾಗಿದ್ದ ಕಲ್ಯಾಣ ರಾವ್(Kalyana Rao) ಮುಚಳಂಬಿಅವರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮ ನಿಮಿತ್ತ ‘ಕಲ್ಯಾಣಶ್ರೀ’ ಪ್ರಶಸ್ತಿ ಪ್ರದಾನ, ‘ಸ್ನೇಹಸೇತು’ ಕಥಾಸಂಕಲನ ಬಿಡುಗಡೆ, ‘ಕಥಾಸ್ಪರ್ಧೆ’ಯ ಬಹುಮಾನ ವಿತರಣೆ ಸಮಾರಂಭ ಜರುಗಿತು.

ನೆಹರು ನಗರದ ಕನ್ನಡ ಭವನ ಎದುರುಗಡೆ ಇರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಭವನದಲ್ಲಿ ಜನಕಲ್ಯಾಣ ಪ್ರತಿಷ್ಠಾನ ಮತ್ತು ಮುಚಳಂಬಿ ಅಭಿಮಾನಿಗಳು ಬಳಗದ ಆಶ್ರಯದಲ್ಲಿ ನಡೆದ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಐವರಿಗೆ ಕಲ್ಯಾಣಶ್ರೀ ಪ್ರಶಸ್ತಿ(Kalyanshree Award) ಪ್ರದಾನ ಹಾಗೂ ಸ್ನೇಹಸೇತು ಕಥಾ ಸಂಕಲನ ಬಿಡುಗಡೆ, ಕಥಾ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು. ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ, ರೈತ ಮುಖಂಡ ಕೆ.ಟಿ‌‌.ಗಂಗಾಧರ, ಸಾವಯವ ಕೃಷಿಕ ಅಶೋಕ ತುಬಚಿ,ಹಿರಿಯ ಪತ್ರಕರ್ತರಾದ ವಿಜಯಕುಮಾರ್ ಪಾಟೀಲ್, ಮಹಾವೀರ ಮೆಕ್ಕಳಕಿರವರಿಗೆ ಕಲ್ಯಾಣಶ್ರೀ ಪ್ರಶಸ್ತಿ ಪ್ರಧಾನ‌ ಮಾಡಲಾಯಿತು. ಇದನ್ನೂ ಓದಿ: ಕೊರೊನಾ ಇದ್ದರೂ T20 ವಿಶ್ವಕಪ್ ಆಡಲು ಆಟಗಾರರಿಗೆ ಅವಕಾಶ!


ಕಾರ್ಯಕ್ರಮದಲ್ಲಿ ಯಡಿಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ಸಿದ್ದರಾಮ ಮಹಾಸ್ವಾಮಿಗಳು,ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್, ರೈತ ಮುಖಂಡ ಕೆ.ಟಿ.ಗಂಗಾಧರ, ಸಾಹಿತಿಗಳಾದ ಮೈತ್ರಾಯಿಣಿ ಗದಿಗೆಪ್ಪಗೌಡರ, ಸಾಹಿತಿ ಲೀಲಾ ಕುಲಕೋಟಿ, ಪತ್ರಕರ್ತ ರಾಜೇಂದ್ರ ಪಾಟೀಲ್, ದಿ.ಕಲ್ಯಾಣರಾವ ಮುಚಳಂಬಿ ಧರ್ಮಪತ್ನಿ ನಿರ್ಮಲಾ ಕ. ಮುಳಚಂಬಿ ಸೇರಿ ಹಲವರು ಭಾಗಿಯಾಗಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *