ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ ಮಳೆ ಅವಾಂತರ ಪ್ರಕೃತಿಯ ನಿಯಮ ಯಾರು ಏನೂ ಮಾಡೋಕೆ ಆಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಮಳೆಯ ಅವಾಂತರ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರ ಗೊತ್ತಿದೆ. ನಮ್ಮ ಸಿಎಂ ಅವರು ಸಂಬಂಧಪಟ್ಟಂತಹ ಮಂತ್ರಿಗಳಿಗೆ ತಿಳಿಸಿದ್ದಾರೆ. ಮಹಾರಾಷ್ಟ್ರದಿಂದ ವಿಪರೀತ ನೀರು ಬರುತ್ತಿದೆ. ಮೊದಲ ಬಾರಿಗೆ ನ್ಯಾಷನಲ್ ಹೈವೆ ಮುಚ್ಚಬೇಕಾದಂತಹ ಅನಿವಾರ್ಯತೆ ಬಂದಿದೆ. ಪ್ರಕೃತಿಯ ನಿಯಮ ಇದು. ನಾವೇನು ಮಾಡೋಕೆ ಆಗಲ್ಲ ಎಂದಿದ್ದಾರೆ.ಇದನ್ನೂ ಓದಿ: ದೊಡ್ಡ ನಗರಗಳಲ್ಲಿ ಗುಂಡಿ ಇದ್ದೇ ಇರುತ್ತದೆ: ಡಿಕೆಶಿ
ಜನರನ್ನು ರಕ್ಷಣೆ ಮಾಡಲಿಕ್ಕೆ, ಜನರನ್ನು ಕಾಪಾಡಲಿಕ್ಕೆ, ಯಾರಿಗೆ ತೊಂದರೆ ಆಗದ ರೀತಿಯಲ್ಲಿ ನಮ್ಮ ಸರ್ಕಾರದ ಎಲ್ಲಾ ಅಧಿಕಾರಿಗಳು ಸಹಕಾರ ಕೊಡುತ್ತಾರೆ. ಇದಕ್ಕೆ ಸಾರ್ವಜನಿಕರು ಸಹಕಾರ ಕೊಡಬೇಕು ಎಂದು ವಿನಂತಿ ಮಾಡುತ್ತೇನೆ ಎಂದು ಹೇಳಿದ್ದಾರೆ.
 


 
		 
		 
		 
		 
		
 
		 
		 
		 
		