ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‍ನ (ಎಐಎಫ್‍ಎಫ್) ಅಧ್ಯಕ್ಷರಾಗಿ ಮೋಹನ್ ಬಗಾನ್ ತಂಡದ ಮಾಜಿ ಗೋಲ್ಕೀಪರ್ ಕಲ್ಯಾಣ್ ಚೌಬೆ ಆಯ್ಕೆಯಾಗಿದ್ದಾರೆ.
Advertisement
ನೂತನ ಅಧ್ಯಕ್ಷ ಪಟ್ಟಕ್ಕೆ ನಡೆದ ಚುನಾವಣೆಯಲ್ಲಿ ಭಾರತ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಅವರನ್ನು ಸೋಲಿಸಿ ಕಲ್ಯಾಣ್ ಚೌಬೆ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ. ಚೌಬೆ ಚುನಾವಣೆಯಲ್ಲಿ 33-1 ಅಂತರದಿಂದ ಗೆಲುವು ದಾಖಲಿಸಿದರು. ಈ ಮೂಲಕ 85 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಆಟಗಾರರೊಬ್ಬರು ಫುಟ್ಬಾಲ್ ಫೆಡರೇಶನ್‍ನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಚೌಬೆ ಬಿಜೆಪಿ ನಾಯಕರೂ ಆಗಿದ್ದು, ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಇದನ್ನೂ ಓದಿ: ಭಾರತದ ಮೇಲೆ ಫಿಫಾ ಹೇರಿದ ಅಮಾನತು ತೆರವು
Advertisement
Advertisement
ಚುನಾವಣೆಯಲ್ಲಿ ಒಟ್ಟು 34 ರಾಜ್ಯಗಳು ಭಾಗವಹಿಸಿದ್ದವು, ಅದರಲ್ಲಿ ಬೈಚುಂಗ್ ಭುಟಿಯಾ ಕೇವಲ ಒಂದು ರಾಜ್ಯದ ಮತವನ್ನು ಪಡೆಯುವಲ್ಲಿ ಯಶಸ್ವಿಯಾದರು. ಫಿಫಾ ಇತ್ತೀಚೆಗೆ AIFF ಅನ್ನು ನಿಷೇಧಿಸಿತು. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‍ನಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿದೆ ಎಂದು ಫಿಫಾ ಆರೋಪ ಹೊರಿಸಿತ್ತು. ಎಐಎಫ್‍ಎಫ್‍ನ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಸರ್ವೋಚ್ಚ ನ್ಯಾಯಾಲಯವು ಆಡಳಿತಗಾರರ ಸಮಿತಿಯನ್ನು ರಚಿಸಿತ್ತು. ಇದನ್ನು FIFA ಮೂರನೇ ವ್ಯಕ್ತಿಯ ಹಸ್ತಕ್ಷೇಪ ಎಂದು ಪರಿಗಣಿಸಿ AIFF ಅನ್ನು ನಿಷೇಧಿಸಿತ್ತು. ಆಗ ಭಾರತ ಸರ್ಕಾರವು ಫಿಫಾದಿಂದ ನಿಷೇಧವನ್ನು ತೆರವುಗೊಳಿಸುವಂತೆ ಒತ್ತಾಯಿಸಿತ್ತು. ಜೊತೆಗೆ ಸಿಒಎ ತೆಗೆದುಹಾಕಿ, ಅವಧಿಗೆ ಮುಂಚಿತವಾಗಿ ಚುನಾವಣೆ ನಡೆಸಲು ಮುಂದಾಗಿತ್ತು. ಇದನ್ನೂ ಓದಿ: 6 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ಕೊಹ್ಲಿ – 1 ಓವರ್ 6 ರನ್
Advertisement
We congratulate Mr. @kalyanchaubey on being elected as the President, Mr. @mlanaharis as the Vice President, and Mr. Kipa Ajay as the Treasurer of the All India Football Federation ????????#AIFFGeneralBodyElections2022 ????️ #IndianFootball ⚽ pic.twitter.com/YRwexiUntx
— Indian Football Team (@IndianFootball) September 2, 2022
ಪ್ರಫುಲ್ ಪಟೇಲ್ ಅಧಿಕಾರವಧಿ ಅಂತ್ಯ
ಈ ಹಿಂದೆ ಪ್ರಫುಲ್ ಪಟೇಲ್ ಎಐಎಫ್‍ಎಫ್ ಅಧ್ಯಕ್ಷರಾಗಿದ್ದರು. ಅವರು 2008 ರಿಂದ ಈ ಹುದ್ದೆಯಲ್ಲಿದ್ದರು. ಆ ಬಳಿಕ 2022ರಲ್ಲಿ ಸುಪ್ರೀಂಕೋರ್ಟ್ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಆದೇಶಿಸಿತ್ತು. ಇದಾದ ನಂತರ AIFFನ ಸಮಸ್ಯೆಗಳು ಹೆಚ್ಚಾಗತೊಡಗಿದವು. ಫಿಫಾ ನಿಷೇಧದ ನಂತರ ಭಾರತವೂ ಅಂಡರ್-17 ಮಹಿಳಾ ವಿಶ್ವಕಪ್‍ಗೆ ಆತಿಥ್ಯ ವಹಿಸುವ ಬಗ್ಗೆ ಗೊಂದಲ ಏರ್ಪಟಿತ್ತು. ಆದರೆ ಈಗ ನಿಷೇಧವನ್ನು ತೆಗೆದುಹಾಕಲಾಗಿದ್ದು, ಮಹಿಳಾ ವಿಶ್ವಕಪ್ ಯಾವುದೇ ಆತಂಕವಿಲ್ಲದೆ ನಡೆಯಲಿದೆ.