ಕಾರವಾರ: ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ತಾಲೂಕಿನ ಕದಂಬ ನೌಕಾನೆಲೆಯಲ್ಲಿ ಕಲ್ವರಿ ವರ್ಗದ ಸಬ್‌ಮೆರಿನ್ (Kalvari-Class Submarine) ನಿರ್ವಹಣೆಗೆ ಘಟಕ ಆರಂಭ ಮಾಡಲಾಗಿದೆ. ಈ ವ್ಯವಸ್ಥೆ ದೇಶದಲ್ಲಿ ಇದೇ ಮೊದಲ ಬಾರಿಯಾಗಿದೆ.
ಈವರೆಗೆ ಕಲ್ವರಿ ವರ್ಗದ ಸಬ್‌ಮೆರಿನ್‌ಗಳ ಪರೀಕ್ಷೆಗೆ ಫ್ರಾನ್ಸ್ ದೇಶವನ್ನು ಅವಲಂಬನೆ ಮಾಡಬೇಕಿತ್ತು. ಇದರಿಂದ ಸಮಯ ಮತ್ತು ಅಧಿಕ ವೆಚ್ಚವಾಗುತಿತ್ತು. ಆದರೆ, ಸದ್ಯ ಸಬ್ ಮೆರಿನ್‌ಗಳ ನಿಲ್ದಾಣ ಹಾಗೂ ನಿರ್ವಹಣಾ ಕೇಂದ್ರವಾಗಿರುವ ಕಾರವಾರದ ಕದಂಬ ನೌಕಾನೆಲೆಯಲ್ಲಿ ಕಲ್ವರಿ ವರ್ಗದ ಸಬ್‌ಮೆರಿನ್‌ಳ ಪರೀಕ್ಷೆಗಾಗಿ ನಿರ್ವಹಣಾ ಘಟಕ ಪ್ರಾರಂಭ ಮಾಡಿದ್ದು, ಭಾರತೀಯ ನೌಕಾಪಡೆಯ ವೈಸ್ ಅಡ್ಮಿರಲ್ ಬಿ. ಶಿವಕುಮಾರ್ ಈ ನ್ಯುಮ್ಯಾಟಿಕ್ ರ್ಯಾಮ್ ಟೆಸ್ಟ್ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ. ಈ ಸೌಲಭ್ಯವು ಕಲ್ವರಿ ವರ್ಗದ ಸಬ್‌ಮೆರಿನ್‌ಗಳಲ್ಲಿ ಅಳವಡಿಸಲಾದ ಮಹತ್ವದ ನ್ಯುಮ್ಯಾಟಿಕ್ ವ್ಯವಸ್ಥೆಗಳನ್ನು ಪರೀಕ್ಷಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಭಾರತದ ಸ್ವದೇಶಿ ಸಾಮರ್ಥಗಳನ್ನು ಬಲಪಡಿಸುವಲ್ಲಿ ಪ್ರಮುಖ ಮೈಲುಗಲ್ಲಾಗಿದೆ. ಇದನ್ನೂ ಓದಿ: ವಾರದಲ್ಲಿ 4 ದಿನ ಮಾತ್ರ ಕೆಲಸ, ಪ್ರತಿ ಬುಧವಾರವೂ ರಜೆ: ಪೆಟ್ರೋಲ್, ಡೀಸೆಲ್ ಉಳಿಸಲು ಶ್ರೀಲಂಕಾ ಹೊಸ ರೂಲ್ಸ್
ಕಲ್ವರಿ ವರ್ಗದ ಸಬ್‌ಮರಿನ್ ವಿಶೇಷತೆ ಏನು?
ಕಲ್ವರಿ ವರ್ಗದ ಸಬ್‌ಮೆರಿನ್ (Kalvari Class Submarine) ಎಂದರೆ ಭಾರತೀಯ ನೌಕಾಪಡೆಯ ಅತ್ಯಾಧುನಿಕ ಡೀಸೆಲ್-ಎಲೆಕ್ಟ್ರಿಕ್ ದಾಳಿಯ ಜಲಾಂತರ್ಗಾಮಿ (attack submarine)ಗಳ ಒಂದು ವರ್ಗ. ಇವು ಫ್ರಾನ್ಸ್ ದೇಶದ Scorpene design ಆಧಾರಿತವಾಗಿದ್ದು, ಭಾರತದಲ್ಲೇ ನಿರ್ಮಿಸಲಾಗಿದೆ. ಈ ಯೋಜನೆಯನ್ನು Indian Navy ಹಾಗೂ Mazagon Dock Shipbuilders Limited ಸಹಯೋಗದಲ್ಲಿ ನಿರ್ಮಿಸಲಾಗಿದೆ.
ಈ ಸಬ್‌ಮೆರಿನ್ ನೀರಿನೊಳಗೆ ಬಹಳ ಕಡಿಮೆ ಶಬ್ದ ಮಾಡುತ್ತವೆ. ಶತ್ರು ರಡಾರ್ ಅಥವಾ ಸೋನಾರ್‌ಗೆ ಸುಲಭವಾಗಿ ಪತ್ತೆಯಾಗುವುದಿಲ್ಲ. ಅತ್ಯಾಧುನಿಕ ಸೋನಾರ್ ವ್ಯವಸ್ಥೆ ಸಮುದ್ರದೊಳಗಿನ ಹಡಗುಗಳು, ಸಬ್‌ಮೆರಿನ್‌ಗಳು ಹಾಗೂ ಗುರಿಗಳನ್ನು ದೂರದಿಂದ ಪತ್ತೆಹಚ್ಚಲು ಸೋನಾರ್ ಸಿಸ್ಟಮ್ ಇರುತ್ತದೆ. ಟಾರ್ಪಿಡೋ ಮತ್ತು ಕ್ಷಿಪಣಿ ದಾಳಿ ಭಾರಿ ಶಕ್ತಿಯ ಟಾರ್ಪಿಡೋಗಳು ಹಾಗೂ ಆ್ಯಂಟಿ-ಶಿಪ್ ಮಿಸೈಲ್‌ಗಳು ಬಳಸಬಹುದು. ವಿಶೇಷವಾಗಿ ನೀರಿನೊಳಗೆ ಹೆಚ್ಚು ದಿನ ಇರಬಹುದು. ಡೀಸೆಲ್-ಎಲೆಕ್ಟ್ರಿಕ್ ವ್ಯವಸ್ಥೆಯಿಂದ ಹಲವು ದಿನಗಳ ಕಾಲ ನೀರಿನೊಳಗೆ ಕಾರ್ಯನಿರ್ವಹಿಸುತ್ತದೆ.
ಭಾರತದಲ್ಲೇ ನಿರ್ಮಾಣ
Make in India ಯೋಜನೆಯಡಿ ಭಾರತದಲ್ಲೇ ನಿರ್ಮಾಣವಾದ ಅತ್ಯಾಧುನಿಕ ಜಲಾಂತರ್ಗಾಮಿ ಸಬ್‌ಮೆರಿನ್‌ಗಳಾಗಿವೆ. ಕಲ್ವರಿ ವರ್ಗದ ಸಬ್‌ಮೆರಿನ್‌ಗಳು ಒಟ್ಟು ಆರಕ್ಕೂ ಹೆಚ್ಚು ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಂಬೈ ಹಾಗೂ ವಿಶಾಕಪಟ್ಟಣಂ ಇವುಗಳ ನಿಲುಗಡೆ ಸ್ಥಳವಾಗಿದೆ. ಇದನ್ನೂ ಓದಿ: ಅನಾಗರಿಕ, ಹೇಡಿತನದ ಕೃತ್ಯ: ಕಾಬೂಲ್ ಆಸ್ಪತ್ರೆ ಮೇಲಿನ ಪಾಕ್ ದಾಳಿ ಖಂಡಿಸಿದ ಭಾರತ
ಕಾರವಾರ ಕದಂಬ ನೌಕಾನೆಲೆ ಫೇಸ್ -2 ಪ್ರಾಜಕ್ಟ್ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಸಬ್‌ಮೆರಿನ್‌ಗಳಿಗೆ ನಿಲ್ದಾಣ ಸಹ ಮಾಡಲಾಗುತ್ತಿದೆ. ಇದಲ್ಲದೇ ಈ ನೌಕಾನೆಲೆ ರಿಪೇರಿ ಯಾರ್ಡ್ ಸಹ ಆಗಿದ್ದು, ಕಲ್ವರಿ ವರ್ಗದ ಸಬ್‌ಮೆರಿನ್ ಘಟಕ ಪ್ರಾರಂಭ ಮಾಡಿರುವುದು ಮತ್ತಷ್ಟು ಶಕ್ತಿ ನೀಡುವ ಜೊತೆಗೆ ಉದ್ಯೋಗ ಸೃಷ್ಟಿಗೂ ಅವಕಾಶ ಕಲ್ಪಿಸಿದೆ.

