ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿಜವಾದ ಮಣ್ಣಿನ ಮಗ. ಮೂರೂವರೆ ವರ್ಷಗಳ ನಂತರ ಬಿಎಸ್‍ವೈ ಚುನಾವಣೆಗೆ ನಿಲ್ಲಲ್ಲವೆಂದು ಹೇಳಿದ್ದಾರೆ ಅಂತ ಆರ್ ಎಸ್‍ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಬಿಜೆಪಿ ಹಾಗೂ ದೀನ ದಯಾಳ್ ಆಶಯದಂತೆ ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಯಡಿಯೂರಪ್ಪ ಏಕೈಕ ಜನಪರ ದೀನ ದಲಿತರ ಉದ್ಧಾರಕ ಮುಖ್ಯಮಂತ್ರಿಯಾಗಿದ್ದು, ರಾಜ್ಯದಲ್ಲಿ ಯಾವುದೇ ಮುಖ್ಯಮಂತ್ರಿ ಮಾಡದ ಕೆಲಸವನ್ನು ಬಿಎಸ್‍ವೈ ಮಾಡುತ್ತಿದ್ದಾರೆ. ಬಿಎಸ್‍ವೈ ಆಕಸ್ಮಿಕ ಅವಕಾಶವಾದಿ ಮುಖ್ಯಮಂತ್ರಿಯಲ್ಲ ಅಂತ ವಿರೋಧಿಗಳಿಗೆ ಟಾಂಗ್ ನೀಡಿದರು. ಸೊನ್ನೆಯಿಂದ ಅಧಿಕಾರದವರೆಗೂ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು, ರಾಜ್ಯದಲ್ಲಿ ಮಾದರಿ ಆಡಳಿತ ನೀಡುವುದಾಗಿ ಹೇಳಿದ್ದಾರೆ.
Advertisement
Advertisement
ಮೂರೂವರೆ ವರ್ಷಗಳ ನಂತರ ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿ ಇರುವುದಾಗಿ ಬಿಎಸ್‍ವೈ ಹೇಳಿದ್ದಾರೆ. ಜನರಿಗೆ ಹಿಂದೂ ಧರ್ಮದ ಬಗ್ಗೆ ಇನ್ನಷ್ಟು ತಿಳುವಳಿಕೆ ಕೊಡುವ ಅವಶ್ಯಕತೆ ಇದೆ. ಕಳೆದ 150 ವರ್ಷಗಳಿಂದ ಹಿಂದೂ ಧರ್ಮವನ್ನು ಅದೊಂದು ಕೋಮುವಾದ, ಸಂಕುಚಿತ, ಸಮಾಜವನ್ನು ವಿಭಜನೆ ಮಾಡುವ ಕಾರ್ಯ ಎಂದು ಬ್ರಿಟಿಷರು ಹೇಳುತ್ತಾ ಬಂದರು. ನಂತರ ಅದೇ ಗಿಳಿಪಾಠವನ್ನು ಕಾಂಗ್ರೆಸ್ಸಿನವರು ಮಾಡುತ್ತಾ ಬಂದರು. ಅದಕ್ಕಾಗಿ ಹಿಂದೂ ಎಂದು ಹೇಳಿಕೊಳ್ಳಲು ಹಿಂದೂ ಸಮಾಜಕ್ಕೆ ಧೈರ್ಯವಿಲ್ಲ. ಅದನ್ನು ಮತ್ತೊಮ್ಮೆ ಪ್ರತಿಷ್ಠಾಪಿಸುವ ಕೆಲಸ ನಾವು ಮಾಡಲೇಬೇಕು. ಧರ್ಮ ಎಂದರೆ ಅದೊಂದು ಜೀವನ ಪದ್ಧತಿ. ಈಗ ಅದನ್ನು ಪೂಜಾ ವಿಧಾನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಸರ್ವಧರ್ಮ ಎಂದು ಹೇಳುತ್ತಾರೆ. ಆದರೆ ಇಲ್ಲಿ ಸರ್ವಧರ್ಮ ಇಲ್ಲ. ಇಡೀ ಜಗತ್ತಿಗೆ ಒಂದೇ ಧರ್ಮ. ಉಳಿದದ್ದೆಲ್ಲ ಆರಾಧನೆಯ ಪಥ. ಪೂಜೆ ಹೇಗೆ ಮಾಡಬೇಕು. ನಾಮ, ಮುದ್ರೆ ಹೇಗೆ ಹಾಕಬೇಕು? ಯಾವ ಹೊತ್ತಿನಲ್ಲಿ, ಯಾವ ಕಡೆಗೆ ಮುಖ ಮಾಡಿ ಪೂಜೆ ಮಾಡಬೇಕು ಇದೆಲ್ಲ ಹೇಳುವುದು ವೇ ಆಫ್ ವರ್ಷಿಪ್. ನಮ್ಮಲ್ಲಿ ಯಾವ ಹೊತ್ತಿನಲ್ಲಾದರೂ, ಯಾವ ದಿಕ್ಕಿಗಾದರೂ ಮುಖ ಮಾಡಿ, ಯಾರನ್ನೂ ಬೇಕಾದರೂ ಪೂಜೆ ಮಾಡಬಹುದು. ಇದು ನಾವು ಕೊಟ್ಟಿರುವ ಧಾರ್ಮಿಕ ಸ್ವಾತಂತ್ರ್ಯ. ಆದ್ದರಿಂದ ನಮ್ಮದು ಸಂಕುಚಿತವಲ್ಲ. ಜಗತ್ತಿನ ಏಕಮೇವ ವಿಶಾಲ ಸಮಾಜ, ಧರ್ಮ, ಸಂಸ್ಕೃತಿ ನಮ್ಮದು. ಅದರ ತಿಳುವಳಿಕೆ ಮತ್ತಷ್ಟು ಜನರಿಗೆ ಕೊಡುವ ಕೆಲಸವಾಗಬೇಕಿದೆ ಎಂದರು. ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್‍ಗೆ ಪರೋಕ್ಷ ಟಾಂಗ್ ಕೊಟ್ಟ ಮಾಧುಸ್ವಾಮಿ
Advertisement
Advertisement
ಹಿಂದೂ ಧರ್ಮ ಸಂಕುಚಿತ, ಅದು ದೇಶವನ್ನು ತುಂಡರಿಸುತ್ತದೆ ಎಂದು ಮಕ್ಕಳಿಗೆ ಬಾಲ್ಯದಿಂದಲೇ ಹೇಳುತ್ತಾ ಬರುತ್ತಿರುವುದರಿಂದ ಈ ಸಮಸ್ಯೆ ಬಂದಿದೆ. ದೇಶ ವಿಭಜನೆಯಾದಾಗಲೂ ನಾವು ಸ್ವಲ್ಪ ಎಚ್ಚರಿಕೆಯಿಂದ ಯೋಚನೆ ಮಾಡಿದ್ದರೆ, ದೇಶ ವಿಭಜನೆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಇದೊಂದು ಮತೀಯ ಆಧಾರದಲ್ಲಿ ನಡೆದ ವಿಭಜನೆ. ಆದ್ದರಿಂದ, ಪಾಕಿಸ್ತಾನದಲ್ಲಿರುವ ಹಿಂದೂಗಳನ್ನೆಲ್ಲ ಇಲ್ಲಿಗೆ ಬರಲು ಹೇಳಿ. ಇಲ್ಲಿರುವ ಮುಸಲ್ಮಾನರನ್ನು ಅಲ್ಲಿಗೆ ಕಳುಹಿಸಿ ಎಂದು ಹೇಳಿದರು.
ಹಾಗೇ ಆಗಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಜಗತ್ತು ಕೂಡ ಶಾಂತವಾಗಿ ಇರುತ್ತಿತ್ತು. ಇವತ್ತು ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಮತ್ತೊಂದು ಮಿನಿ ಪಾಕಿಸ್ತಾನ ರಚನೆ ಮಾಡುವ ಪ್ರಯತ್ನ, ಮಿನಿ ಕ್ರಿಸ್ತ ಲ್ಯಾಂಡ್ ಮಾಡುವ ಮತ್ತೊಂದು ಪ್ರಯತ್ನ ನಡೆಯುತ್ತಿದೆ. ಮಿನಿ ಚೀನಾ ಮಾಡುವ ಪ್ರಯತ್ನ ಮೂರು ಜನ ಒಂದು ರೀತಿಯಲ್ಲಿ ದೇಶಕ್ಕೆ ವಿರೋಧವಾಗಿ ವಿಚಾರ ಮಾಡುತ್ತಾ, ತಮ್ಮದೇ ಸಾಮ್ರಾಜ್ಯ ನಿರ್ಮಾಣ ಮಾಡಬೇಕು ಎನ್ನುವ ಹುನ್ನಾರದಲ್ಲಿದ್ದಾರೆ. ಅದಕ್ಕಾಗಿ ನಮ್ಮ ಧರ್ಮದ ಜಾಗೃತಿ ಕಾರ್ಯ ನಡೆಯಬೇಕಿದೆ. ದುರ್ದೈವ ನಮ್ಮ ಶಾಲೆಗಳಲ್ಲಿ ನಮ್ಮ ಧರ್ಮದ ಬಗ್ಗೆ ಹೇಳುವ ವ್ಯವಸ್ಥೆ ಇಲ್ಲ. ಮುಸ್ಲಿಮರಿಗೆ ಮಸೀದಿಯಲ್ಲಿ ಕುರಾನ್, ಚರ್ಚ್‍ಗಳಲ್ಲಿ ಬೈಬಲ್ ಕುರಿತು ಹೇಳಿಕೊಡುತ್ತಾರೆ. ನಮ್ಮಲ್ಲಿ ದುರ್ದೈವದಿಂದ ದೇವಾಲಯಗಳು, ಮಠಗಳಲ್ಲಿ ಆ ಕೆಲಸ ಮಾಡಲ್ಲ. ಮಠ-ಮಂದಿರಗಳು, ದೇವಾಲಯಗಳು, ಸನ್ಯಾಸಿಗಳು ಈ ಕಾರ್ಯ ಮಾಡಬೇಕು. ಈ ಮೂವರು ನಾವೆಲ್ಲ ಹಿಂದೂಗಳು ಎಂದು ಹೇಳುವ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾಳೆ ಜಾತ್ಯಾತೀತ ಎಂದು ಹೇಳುತ್ತ ಮುಂದೆ ಹೋದರೆ ಸನ್ಯಾಸಿಗೆ ಗೌರವ ಕೊಡುವವರು ಯಾರು? ದೇವಸ್ಥಾನಗಳು, ಮಠಗಳ ಬಗ್ಗೆ ಭಕ್ತಿ ನಿರ್ಮಾಣ ಮಾಡುವವರು ಯಾರು? ಹಿಂದೂ ಎಂದು ಹೇಳುವುದು ಹೆಮ್ಮೆ, ಅಭಿಮಾನದ ವಿಷಯ. ಮಕ್ಕಳಲ್ಲಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಈ ದೇಶದಲ್ಲಿ ಹಿಂದಿನಿಂದಲೂ ಮಸೀದಿ, ಚರ್ಚುಗಳ ನಿರ್ಮಾಣ ಅವಕಾಶ ನೀಡಲಾಗಿದೆ. ಅಕ್ರಮವಾಗಿ ಮಸೀದಿ, ಚರ್ಚ್ ನಿರ್ಮಿಸಬೇಕಿದ್ದರೆ ಸ್ವಂತ ಜಾಗದಲ್ಲಿ ಮಾಡಬೇಕು. ಆದರೆ ಇಲ್ಲಿರುವ ಮುಸ್ಲಿಮರು, ಕ್ರಿಶ್ಚಿಯನ್‍ರು ಬೇರೆ ದೃಷ್ಟಿಯಿಂದ ಯೋಚನೆ ಮಾಡುತ್ತಿದ್ದಾರೆ. ಅದಕ್ಕಾಗಿಯೇ ನಾವು ಅವರಿಗೆ ಸರಿಯಾದ ಮುಸ್ಲಿಂ, ಕ್ರಿಶ್ಚಿಯನ್‍ರಾಗಿ ಎಂದು ಹೇಳುತ್ತಿದ್ದೇವೆ. ಆವಾಗ ಶಾಂತಿ ಇರುತ್ತದೆ. ಅದನ್ನು ಬಿಟ್ಟು ಇನ್ನೊಬ್ಬರನ್ನು ಮತಾಂತರ ಮಾಡಿದರೆ ಸ್ವರ್ಗದಲ್ಲಿ 76 ಹೆಣ್ಣು ಮಕ್ಕಳು, ಕುಡಿಯಲು ಮದ್ಯ ಸಿಗುತ್ತದೆ. ವೈನ್ ಆ್ಯಂಡ್ ವುಮನ್ ಹುಚ್ಚು ಮಾತುಗಳಿಂದ ಆ ಸಮಾಜಗಳನ್ನು ಹಾಳು ಮಾಡುವ ಕೆಲಸವನ್ನು ಪ್ರಮುಖ ಮತೀಯ ಮುಖಂಡರು ಮಾಡುತ್ತಿದ್ದಾರೆ. ಅದರ ಪರಿಣಾಮ ಸಿಕ್ಕವರನ್ನೆಲ್ಲ ಮುಸ್ಲಿಮರು, ಕ್ರಿಶ್ಚಿಯನ್‍ರನ್ನಾಗಿ ಮತಾಂತರಿಸುವ ಕೆಲಸ ನಡೆಯುತ್ತಿದೆ. ಅವರು ಏಸು, ಅಲ್ಲಾನನ್ನು ಆರಾಧಿಸಲು ನಮಗೆ ಅಭ್ಯಂತರವಿಲ್ಲ. ಎಲ್ಲ ಧರ್ಮದವರ ಆರಾಧನೆ ಅವಕಾಶ ಮಾಡಿಕೊಟ್ಟ ದೇಶ ಅದು ಭಾರತ. ಹಿಂದೂ ಧರ್ಮ, ಸಂಸ್ಕೃತಿಯ ಪ್ರತೀಕ ಎಂದು ಹೇಳಿದರು.