ಉಡುಪಿ: ಒಂದು ಒಳ್ಳೆಯ ಮಸೂದೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ಮತ್ತೆ ಕೃಷಿ ಮಸೂದೆ ಮಂಡನೆ ಮಾಡಿಯೇ ಮಾಡುತ್ತಾರೆ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
Advertisement
ಉಡುಪಿಯ ಪ್ರಸಾದ್ ನೇತ್ರಾಲಯದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಕೇಂದ್ರ ಕೃಷಿ ಕಾಯ್ದೆ ವಾಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಯ್ದೆಯನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಗೊಂದಲ ನಿರ್ಮಾಣವಾಗಿತ್ತು. ಒಂದು ಒಳ್ಳೆಯ ಮಸೂದೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ಮತ್ತೆ ಮಂಡನೆ ಮಾಡಿಯೇ ಮಾಡುತ್ತಾರೆ. ಕೂತು ಚರ್ಚಿಸಲು ಹೋರಾಟಗಾರರು ತಯಾರಿರಲಿಲ್ಲ. ನಮ್ಮ ದೇಶದಲ್ಲಿ ವಿಪಕ್ಷಗಳು ವಿರೋಧ ಪಕ್ಷಗಳಾಗಿವೆ. ಕೇಂದ್ರ ಸರ್ಕಾರ ಮತ್ತೆ ರೈತರ ಜೊತೆ ಚರ್ಚಿಸಲಿದೆ. ಸರ್ಕಾರದ ಜೊತೆ ಚರ್ಚಿಸದೆ ವಿರೋಧಿಸುವುದು ಪ್ರಜಾಪ್ರಭುತ್ವವೇ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ರೈತ ಹೋರಾಟಕ್ಕೆ ಬಿಜೆಪಿ ಸಂಸದ ಬೆಂಬಲ – ಮೋದಿಗೆ ಸೆಡ್ಡು ಹೊಡೆದ ವರುಣ್ ಗಾಂಧಿ
Advertisement
Advertisement
ಕರ್ನಾಟಕದಲ್ಲೂ ಸರ್ಕಾರದ ಜೊತೆ ವಿಪಕ್ಷಗಳು ಚರ್ಚಿಸಲು ಸಿದ್ಧವಿರಲಿಲ್ಲ. ವಿರೋಧಿಗಳು ರಾಜಕೀಯ ಲಾಭ ಪಡೆಯುವ ಉದ್ದೇಶ ಹೊಂದಿದ್ದಾರೆ. ರಾಜಕೀಯ ಲಾಭದ ಉದ್ದೇಶದಿಂದ ಕಾಯಿದೆಯನ್ನು ವಾಪಸ್ ಪಡೆದಿದ್ದಲ್ಲ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಾಪಾಸ್ ಪಡೆಯಲಾಗಿದೆ. ಎಲ್ಲಾ ಕಾಯ್ದೆಗಳನ್ನು ಬೀದಿಯಲ್ಲಿ ನಿಂತು ನಿರ್ಧರಿಸುವುದು ಸಾಧ್ಯವಿಲ್ಲ. ಒಂದು ವರ್ಷಗಳ ಕಾಲ ಕೇಂದ್ರ ಸರ್ಕಾರ ಮನವೊಲಿಸಲು ಪ್ರಯತ್ನಿಸಿದೆ. ಮೋದಿ ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ ಎಂದರೆ ಎರಡು ಹೆಜ್ಜೆ ಮುಂದಕ್ಕೆ ಇಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು. ಇದನ್ನೂ ಓದಿ: ಉಪಚುನಾವಣೆಯಲ್ಲಿ ಹಿನ್ನಡೆ, ಪಂಚರಾಜ್ಯಗಳ ಚುನಾವಣೆಯ ಮೇಲೆ ಕಣ್ಣು – ಕೃಷಿ ಕಾಯ್ದೆ ವಾಪಸ್!
Advertisement