ಅನುಷ್ಕಾ ಅಲ್ಲ, ದೀಪಿಕಾ ಪಡುಕೋಣೆ ಅಂದರೆ ಇಷ್ಟ ಅಂತಾ ವರಸೆ ಬದಲಿಸಿದ ಪ್ರಭಾಸ್

Public TV
2 Min Read
deepika padukone

‘ಬಾಹುಬಲಿ’ (Bahubali) ಪ್ರಭಾಸ್ (Prabhas) ಅವರು ಪಠಾಣ್ ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಬಗ್ಗೆ ಅಚ್ಚರಿ ಹೇಳಿಕೆಯೊಂದನ್ನ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ನಟ ಪ್ರಭಾಸ್ ಅವರು ಅನುಷ್ಕಾ ಅಲ್ಲ, ದೀಪಿಕಾ ಪಡುಕೋಣೆ ಅಂದರೆ ಇಷ್ಟ ಅಂತಾ ವರಸೆ ಬದಲಿಸಿದ್ದಾರೆ. ಸಲಾರ್ ನಟನ ಮಾತು ಈಗ ಭಾರೀ ಸದ್ದು ಮಾಡ್ತಿದೆ.

prabhas 1

‘ಕಲ್ಕಿ 2898 AD’ ಸಿನಿಮಾದಲ್ಲಿ ಪ್ರಭಾಸ್-ದೀಪಿಕಾ ಜೋಡಿಯಾಗಿ ನಟಿಸಿದ್ದಾರೆ. ನಾಗ್ ಅಶ್ವೀನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬಿಗ್ ಬಿ, ಕಮಲ್ ಹಾಸನ್ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಈ ಚಿತ್ರದಲ್ಲಿದೆ. ಚಿತ್ರ ಶುರುವಾದ ದಿನದಿಂದ ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಇದನ್ನೂ ಓದಿ:‘ಸಂಜೆ ಮೇಲೆ ಸುಮ್ನೆ ಹಂಗೆ’ ಅಂತಿದ್ದಾರೆ ನೀನಾಸಂ ಸತೀಶ್: ಮ್ಯಾಟ್ನಿ ಹಾಡು ವೈರಲ್

deepika padukone 1 1

ಇದೀಗ ಸಮಾರಂಭವೊಂದರಲ್ಲಿ ದೀಪಿಕಾ ಪಡುಕೋಣೆ ಬಗ್ಗೆ ಮನಬಿಚ್ಚಿ ಪ್ರಭಾಸ್ ಮಾತನಾಡಿದ್ದಾರೆ. ದೀಪಿಕಾ ಸೆಟ್‌ಗಳಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ಅವರು ಸೆಟ್‌ಗೆ ಬಂದಾಗ ಎಲ್ಲರೂ ಸಂತೋಷವಾಗಿರುತ್ತಾರೆ. ಹಾಗಾಗಿ ನಟಿ ದೀಪಿಕಾ ಎಂದರೆ ನನಗೆ ತುಂಬಾ ಇಷ್ಟ ನಾನು ಯಾವಾಗಲೂ ಅವಳನ್ನ ಇಷ್ಟ ಪಡ್ತೀನಿ ಅಂತ ಪ್ರಭಾಸ್ ಹೇಳಿದರು. ದೀಪಿಕಾ ಬಗ್ಗೆ ಆಡಿದ ಪ್ರಭಾಸ್ ಮಾತುಗಳು ವೈರಲ್ ಆಗುತ್ತಿವೆ. ಪ್ರಭಾಸ್ ಅವರ ಹೆಸರು ಅನುಷ್ಕಾ ಶೆಟ್ಟಿ(Anushka Shetty), ಕೃತಿ ಸನೋನ್ (Kriti Sanon) ಜೊತೆ ತಳುಕು ಹಾಕಿಕೊಂಡಿತ್ತು. ಹಾಗಾಗಿ ದೀಪಿಕಾ ಬಗ್ಗೆ ಪ್ರಭಾಸ್ ಹೇಳಿದ ಮಾತು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ.

Prabhas 2

ನಿರ್ದೇಶಕ ನಾಗ್ ಅಶ್ವಿನ್ ‘ಕಲ್ಕಿ 2898 AD’ ಸಿನಿಮಾವನ್ನು ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವನಿ ದತ್ ಸುಮಾರು 600 ಕೋಟಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಿಂದ ಬಿಡುಗಡೆಯಾಗಿರುವ ಗ್ಲಿಂಪ್ಸಸ್ ವಿಡಿಯೋ ಈಗಾಗಲೇ ದಾಖಲೆಗಳನ್ನು ಸೃಷ್ಟಿಸಿದೆ.

ಸಾಲು ಸಾಲು ಸಿನಿಮಾ ಸೋಲಿನಿಂದ ಕೆಂಗೆಟ್ಟಿರುವ ಪ್ರಭಾಸ್‌ಗೆ ಈಗ ಗೆಲುವಿನ ರುಚಿ ಬೇಕಾಗಿದೆ. ಪ್ರಭಾಸ್ ಜೊತೆ ಪಠಾಣ್ ಸೂಪರ್ ಸ್ಟಾರ್ ದೀಪಿಕಾ ಇರೋದ್ರಿಂದ ಚಿತ್ರದ ನಿರೀಕ್ಷೆ ಹೆಚ್ಚಿದೆ. ಇಬ್ಬರ ಕೆಮಿಸ್ಟ್ರಿ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article