ಹಳಿ ಮೇಲಿದ್ದ ಸಿಲಿಂಡರ್‌ಗೆ ಗುದ್ದಿದ ರೈಲು – ಕಾನ್ಪುರದಲ್ಲಿ ರೈಲು ದುರಂತಕ್ಕೆ ಸಂಚು!

Public TV
2 Min Read
Kalindi Train

ಲಕ್ನೋ: ರೈಲು ಹಳಿ ಮೇಲೆ ಸಿಲಿಂಡರ್ ಇರಿಸಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ ಘಟನೆ ಉತ್ತರ ಪ್ರದೇಶದ (Uttarpradesh) ಕಾನ್ಪುರದಲ್ಲಿ (Kanpur) ನಡೆದಿದೆ.

ಭಾನುವಾರ ರಾತ್ರಿ 8:25ರ ವೇಳೆ ಕಾನ್ಪುರದಿಂದ ಭಿವಾನಿಗೆ ಪ್ರಯಾಣಿಸುತ್ತಿದ್ದ ಕಾಳಿಂದಿ ಎಕ್ಸ್‌ಪ್ರೆಸ್‌ (Kalindi Express) ಹಳಿ ಮೇಲಿದ್ದ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಿಲಿಂಡರ್ ದೂರಕ್ಕೆ ಚಿಮ್ಮಿ ಸ್ಫೋಟಗೊಂಡಿದೆ.ಇದನ್ನೂ ಓದಿ: ಮುಡಾ ಕೇಸ್ ವಿಚಾರಣೆ – ಇಡೀ ದಿನ ಸಿಎಂ ಕಾರ್ಯಕ್ರಮ ರಿಸರ್ವ್

ಕಾನ್ಪುರದಿಂದ ಕಾಸ್‌ಗಂಜ್ ಮಾರ್ಗದಲ್ಲಿ ರೈಲು ಚಲಿಸುತ್ತಿತ್ತು. ರ‍್ರಾಜ್‌ಪುರ ಹಾಗೂ ಬಿಲ್ಹೌರ್ ನಿಲ್ದಾಣಗಳ ಮಧ್ಯೆ ಮುಂಡೇರಿ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದೆ. ಮುಂಡೇರಿ ಕ್ರಾಸಿಂಗ್ ಬಳಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ.

ಗಂಟೆಗೆ 70 ರಿಂದ 80 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲು ಹಳಿಯ ಮೇಲಿದ್ದ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ. ರೈಲು ಹಳಿಯ ಮೇಲಿದ್ದ ಸಿಲಿಂಡರ್‌ನ್ನು ನೋಡಿ ಚಾಲಕ ರಾಜ್ ಕಿಶೋರ್ ರೈಲಿನ ತುರ್ತು ಬ್ರೇಕ್ ಬಳಸಿ ನಿಲ್ಲಿಸಿದ್ದಾರೆ.

ಘಟನೆಯ ಬಳಿಕ 22 ನಿಮಿಷಗಳ ಕಾಲ ನಿಂತ ರೈಲು ಮತ್ತೆ ಪ್ರಯಾಣ ಬೆಳೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ತನಿಖೆ ವೇಳೆ ಸುಮಾರು 50 ಮೀಟರ್ ದೂರದಲ್ಲಿ ತುಂಬಿದ್ದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್, ಬೆಂಕಿ ಪೊಟ್ಟಣ ಹಾಗೂ ಪೆಟ್ರೋಲ್ ಬಾಟಲ್ ಪತ್ತೆಯಾಗಿದ್ದು, ಸ್ಫೋಟಕಗಳೆಂದು ಭಾವಿಸಲಾದ ಪುಡಿಯ ವಸ್ತು ಪತ್ತೆಯಾಗಿದೆ. ಸದ್ಯ ವಸ್ತುಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತಾದ್ಯಂತ ರೈಲುಗಳ ಮೇಲೆ ದಾಳಿ ನಡೆಸುವಂತೆ ಸ್ಲೀಪರ್ ಸೆಲ್‌ಗಳಿಗೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸೂತ್ರಧಾರ ಪಾಕಿಸ್ತಾನದಲ್ಲಿರುವ ಉಗ್ರ ಫರ್ಹಾತುಲ್ಲಾ ಘೋರಿ ಕರೆ ನೀಡಿದ್ದ. ಶರ್ ಕುಕ್ಕರ್ ಬಳಸಿ ಬಾಂಬ್ ಸ್ಫೋಟಿಸುವ ವಿವಿಧ ವಿಧಾನಗಳನ್ನು ಈ ವೀಡಿಯೊದಲ್ಲಿ ವಿವರಿಸಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿದ್ದವು. ಇದನ್ನೂ ಓದಿ: ಭಾರತದ ರೈಲು, ಪೆಟ್ರೋಲ್ ಪೈಪ್‌ಲೈನ್‌ಗಳ ಮೇಲೆ ದಾಳಿ ಮಾಡಿ -ರಾಮೇಶ್ವರಂ ಕೆಫೆ ಸ್ಫೋಟ ಸಂಚುಕೋರನಿಂದ ಕರೆ

Share This Article