ಚಿಕ್ಕಮಗಳೂರು: ನಮಗೆ ಇಟ್ಟಿಗೆ ಬೇಡ, ಇಟ್ಟಿಗೆ ಬೇಕಾಗಿರೋದು ನಿಮಗೆ. ಇಟ್ಟಿಗೆಯನ್ನು ಯಾರು ಯೂಸ್ ಮಾಡ್ತಾರೆ ಅನ್ನೋದು ರಾಜ್ಯಕ್ಕೆ ಗೊತ್ತಿದೆ ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.
Advertisement
ಮಳಲಿಯಿಂದ ಒಂದು ಇಟ್ಟಿಗೆಯನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂಬ ಎಸ್‍ಡಿಪಿಐ ಮುಖಂಡನ ಹೇಳಿಕೆಗೆ ಕಡೂರಿನ ಕಾಳಿಮಠದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನೀವು ಇಟ್ಟಿಗೆಯನ್ನು ಯೂಸ್ ಮಾಡಿಕೊಳ್ಳಿ. ನಾವು ಕಲ್ಲಿನಲ್ಲಿಯೇ ದೇವಸ್ಥಾನ ಕಟ್ಟಿಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ತಾಂಬೂಲ ಪ್ರಶ್ನೆ ಅಂತಾ ಬರೋರನ್ನು ಒದ್ದು ಒಳಗೆ ಹಾಕ್ಬೇಕು: ಅಬ್ದುಲ್ ವಾಜೀದ್ ವಿವಾದಾತ್ಮಕ ಹೇಳಿಕೆ
Advertisement
Advertisement
ಮಳಲಿಯಲ್ಲಿ ತಾಂಬೂಲ ಪ್ರಶ್ನೆ ಕೇಳುವ ಅವಶ್ಯಕತೆ ಇತ್ತು. ಆದರೆ ಶ್ರೀರಂಗಪಟ್ಟಣದಲ್ಲಿ ತಾಂಬೂಲ ಪ್ರಶ್ನೆ ಕೇಳುವ ಅವಶ್ಯಕತೆ ಇಲ್ಲ. ಅಲ್ಲಿ ಕಂಬಗಳೇ ಇದ್ದಾವೆ, ಅದೇ ಎಲ್ಲದನ್ನು ಹೇಳುತ್ತದೆ. ಅಲ್ಲಿ ಕಲ್ಯಾಣಿ, ಗರ್ಭಗುಡಿ, ಪ್ರಾರಂಗಣ ಎಲ್ಲವೂ ಇದೆ. ಮಳಲಿಯ ದೇವಸ್ಥಾನ ಆಗುತ್ತೆ, ಶ್ರೀರಂಗಪಟ್ಟಣದಲ್ಲೂ ದೇವಸ್ಥಾನ ಆಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಮಡಿ, ಮೈಲಿಗೆ ಹೆಸರಲ್ಲಿ ಬ್ರಾಹ್ಮಣ್ಯ ನಮ್ಮನ್ನು ಕೀಳಾಗಿ ಮಾಡಿದೆ: ನಟ ಚೇತನ್