ತಮ್ಮ ಸಾಕ್ಷ್ಯಚಿತ್ರದಲ್ಲಿ ಕಾಳಿ ದೇವತೆಯ ಒಂದು ಕೈಯಲ್ಲಿ ಸಿಗರೇಟು ಮತ್ತು ಕೈಯಲ್ಲಿ ಎಲ್ಜಿಬಿಟಿಕ್ಯೂ ಧ್ವಜ ಕೊಟ್ಟ ಕಾರಣಕ್ಕಾಗಿ ತಮಿಳಿನ ಖ್ಯಾತ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಕ್ರಮಕ್ಕಾಗಿ ದೇಶಾದ್ಯಂತ ಆಗ್ರಹ ನಡೆದಿತ್ತು. ಹಲವು ಕಡೆ ಇವರ ವಿರುದ್ಧ ದೂರುಗಳು ದಾಖಲಾಗಿದ್ದವು. ಮುಂಬೈನಲ್ಲಿ ಎಫ್.ಐ.ಆರ್ ಕೂಡ ದಾಖಲಾಗಿತ್ತು. ಇದೀಗ ಭಾರತದಲ್ಲಿ ಅವರ ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿದೆ.
Advertisement
ನಿನ್ನೆಯಷ್ಟೇ ದೆಹಲಿಯಲ್ಲಿ ದೂರು ದಾಖಲಾಗಿದ್ದು, ಬೆಂಗಳೂರಿನಲ್ಲೂ ಕಿರಣ್ ಆರಾಧ್ಯ ಎನ್ನುವವರು ಸೈಬರ್ ಕ್ರೈಂಗೆ ದೂರು ನೀಡಿದ್ದರು. ಅಲ್ಲದೇ, ಅನೇಕ ಕಡೆ ಈ ಕುರಿತು ಪ್ರತಿರೋಧ ಕೂಡ ವ್ಯಕ್ತವಾಗಿತ್ತು. ಇದೀಗ ದೇಶದ ಹಲವು ಕಡೆ ಫಿಲ್ಮ್ ಚೇಂಬರ್ ಗೂ ದೂರುಗಳನ್ನು ದಾಖಲಿಸಲಾಗುತ್ತಿದೆ. ಅಲ್ಲದೇ, ಆ ಸಾಕ್ಷ್ಯ ಚಿತ್ರವನ್ನು ಪ್ರದರ್ಶನ ಮಾಡದಂತೆ ಒತ್ತಡ ಹೇರಲಾಗುತ್ತಿದೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್
Advertisement
Advertisement
ಲೀನಾ ಅವರು ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್ ಒಂದನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಆ ಪೋಸ್ಟರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಅವರು ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಲೀನಾ ಅವರು ಕಾಳಿ ಕುರಿತಾಗಿ ಸಾಕ್ಷ್ಯ ಚಿತ್ರ ಮಾಡಿದ್ದು, ಕಾಳಿಯ ಒಂದು ಕೈಲಿ ಸಿಗರೇಟು ಮತ್ತೊಂದು ಕೈಲಿ ಎಲ್ಜಿಬಿಟಿಕ್ಯೂ ಧ್ವಜವನ್ನು ನೀಡಲಾಗಿದೆ. ಈ ಪೋಸ್ಟರ್ ಅನ್ನು ಶೇರ್ ಮಾಡಿರುವ ಲೀನಾ, ಈ ಸಾಕ್ಷ್ಯ ಚಿತ್ರವು ಕೆನಡಾ ಫಿಲ್ಮ್ ಫೇಸ್ಟಿವಲ್ ನಲ್ಲಿ ಬಿಡುಗಡೆ ಆಗುತ್ತಿದೆ. ಈ ಕಾರಣಕ್ಕಾಗಿ ನಾನು ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
Advertisement
ಟ್ವಿಟರ್ ಬಳಕೆದಾರರು ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿದ್ದು, ಈ ನಿರ್ಮಾಪಕಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಕೋಟ್ಯಂತರ ಹಿಂದೂಗಳ ಭಾವನೆಗೆ ಆಕೆ ಧಕ್ಕೆ ಮಾಡಿದ್ದರಿಂದ, ಆ ಸಾಕ್ಷ್ಯ ಚಿತ್ರವನ್ನು ನಿಷೇಧ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ. ತಮಿಳು ನಾಡು ಮೂಲದ ಈ ಲೀನಾ ಸಲಿಂಗಿಗಳ ಬೆಂಬಲಕ್ಕೆ ಈ ಹಿಂದೆ ನಿಂತವರು ಎನ್ನುವುದು ವಿಶೇಷ.