ಕಲಬುರಗಿ ಡಿಸಿ ಸರ್ಕಾರಿ ಕಾರು ಜಪ್ತಿಗೆ ಕೋರ್ಟ್‌ ಆದೇಶ!

Public TV
2 Min Read
kalaburgi dc car

ಕಲಬುರಗಿ: ರೈತನಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಕಲಬುರಗಿ ಜಿಲ್ಲಾಧಿಕಾರಿ ಸರ್ಕಾರಿ ವಾಹನ ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.

ಭೀಮಾ ಏತ ನೀರಾವರಿ ಯೋಜನೆ ಅಡಿಯಲ್ಲಿ ರೈತನ ಜಮೀನು ಮುಳುಗಡೆಯಾಗಿತ್ತು. ಜಮೀನು ಮುಳಗಡೆಯಾಗಿ ಬರೋಬ್ಬರಿ ಹತ್ತು ವರ್ಷಗಳೆ ಕಳೆದು ಹೋಗಿದೆ. ಜಮೀನು ಮುಳುಗಡೆ ಪರಿಹಾರ ಕೊಡಬೇಕಿದ್ದ ನೀರಾವರಿ ಇಲಾಖೆ ಇದುವರೆಗೂ ಪರಿಹಾರ ನೀಡಿರಲಿಲ್ಲ. ರೈತನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ರೈತ ಕೋರ್ಟ್ ಮೊರೆ ಹೋಗಿದ್ದ. ರೈತನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡುವಂತೆ ಆದೇಶ ನೀಡಿದೆ. ಇದನ್ನೂ ಓದಿ: ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆ ಸದಾ ಸಿದ್ಧ: ರಾಜವಂಶಸ್ಥ ಯದುವೀರ್ ಒಡೆಯರ್

kalaburgi farmer

ನ್ಯಾಯಾಲಯದ ಆದೇಶದ ಕಾಪಿಯನ್ನು ತೆಗೆದುಕೊಂಡು ಬಂದ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ಜಿಲ್ಲಾಧಿಕಾರಿ ಕಾರನ್ನು ಜಪ್ತಿ ಮಾಡುವುದಕ್ಕೆ ಮುಂದಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಉಡಚಣ ಗ್ರಾಮದ ರೈತ ಕಲ್ಲೆಶ್ ಮೇತ್ರೆ ಅವರ 33 ಗುಂಟೆ ಜಮೀನು 2010 ರಲ್ಲಿ ಭೀಮಾ ಏತ ನೀರವಾರಿ ಯೋಜನೆ ಅಡಿಯಲ್ಲಿ ಮುಳುಗಡೆಯಾಗಿತ್ತು. ಜಮೀನು ಮುಳುಗಡೆಯಾದ ಹಿನ್ನೆಲೆ ಪರಿಹಾರ ರೂಪದಲ್ಲಿ 7 ಲಕ್ಷ 41 ಸಾವಿರ ರೂಪಾಯಿ ನೀಡಬೇಕಿತ್ತು. ಆದರೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ಕಾರಣ ರೈತ ಕೋರ್ಟ್ ಮೊರೆ ಹೋಗಿದ್ದ.

ಜಮೀನು ಮುಳುಗಡೆಯಾದ ಬಳಿಕ ಕೆಎನ್‌ಎನ್‌ಎಲ್‌ ಅಧಿಕಾರಿಗಳು ಪರಿಹಾರ ನೀಡಿದ್ದರು. ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ರೈತ ಕೋರ್ಟ್ ಮೊರೆ ಹೋಗಿದ್ದ. ರೈತ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಹೆಚ್ಚುವರಿ ಮೊತ್ತವನ್ನು ನೀಡುವಂತೆ 2018 ರಲ್ಲಿ ಆದೇಶ ಮಾಡಿತ್ತು. ಆದರೆ ಕೋರ್ಟ್ ಆದೇಶದ ಬಳಿಕ ಅಧಿಕಾರಿಗಳು ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದರು. ರೈತ ಪರಿಹಾರಕ್ಕಾಗಿ ಸರ್ಕಾರಿ ಅಧಿಕಾರಿಗಳ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದ. ಹಾಗಾಗಿ ರೈತ ಮತ್ತೆ ಕೋರ್ಟ್ ಮೊರೆ ಹೋದ. ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಲಯ ಮೊರೆ ಹೋಗಿದ್ದ. ಕೋರ್ಟ್ ಇದೀಗ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡುವಂತೆ ಆದೇಶ ಹೊರಿಡಿಸಿದ ಹಿನ್ನಲೆ ಕೋರ್ಟ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರು ಜಪ್ತಿಗೆ ಮುಂದಾಗಿದ್ದರು. ಆದರೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಕಾರು ಕೀ ನೀಡದ ಕಾರಣ ಮಧ್ಯಾಹ್ನ ಎರಡು ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೋರ್ಟ್ ಸಿಬ್ಬಂದಿ, ರೈತ ಮತ್ತು ವಕೀಲರು ಕಾಯುವಂತಾಯಿತು. ಬಳಿಕ ಕಚೇರಿಯಿಂದ ಹೊರ ಬಂದ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ತಮ್ಮ ಕಾರನ್ನು ತೆಗೆದುಕೊಂಡು ಹೋದರು. ಇದನ್ನೂ ಓದಿ: ರೈಲು ಹಳಿಗೆ ಬಿದ್ದಿದ್ದ ಬಾಲಕಿಯನ್ನ ರಕ್ಷಿಸಿದ ಲೋಕೋ ಪೈಲಟ್..!

kalaburgi dc car1

ರೈತನಿಗೆ ಬಾಕಿ ಉಳಿಸಿಕೊಂಡಿರುವ ಪರಿಹಾರದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಯಶವಂತ್, ಪರಿಹಾರದ ಮೊತ್ತವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೆಎನ್‌ಎನ್‌ಎಲ್‌ ನಿಗಮದ ಅಧಿಕಾರಿ ಜಿಲ್ಲೆಯಲ್ಲಿ ಇರದ ಕಾರಣ ನಾಳೆ ಕೋರ್ಟ್ ಮುಖಾಂತರ ಚೆಕ್ ಪಾವತಿ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *