ಕಲಬುರಗಿ: ಟ್ರೈನ್ ಜರ್ನಿ ಸೇಫ್ ಅಂತ ಹೋಗುವ ಯುವತಿಯರು ಎಚ್ಚರವಾಗಿರಬೇಕು. ಯಾಕಂದ್ರೆ ಅಲ್ಲಿ ಸಹ ಇದೀಗ ವಿಕೃತ ಮನಸ್ಸಿನ ಕಾಮುಕರ ಹಾವಳಿ ಜಾಸ್ತಿಯಾಗಿದ್ದು, ಕೇವಲ ಯುವತಿರಷ್ಟೇ ಅಲ್ಲ ಮಂಗಳಮುಖಿಯರನ್ನು ಕೂಡ ಕಾಮುಕಾರು ಕಾಡುತ್ತಿದ್ದಾರೆ.
ಹೌದು. ಕಲಬುರಗಿ ರೈಲು ನಿಲ್ದಾಣದಿಂದ ಹೋಗುವ ಒಂಟಿ ಯುವತಿ ಮತ್ತು ಮಹಿಳೆಯರೇ ಕಾಮುಕನ ಟಾರ್ಗೆಟ್ ಆಗಿದ್ದು, ಅವರು ರೈಲಿನಲ್ಲಿ ಹತ್ತುತ್ತಿದ್ದಂತೆ ಅವರ ಪಕ್ಕದಲ್ಲಿ ಹೋಗಿ ಕುಳಿತು ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ. ಈತನ ಕಾಮದಾಟ ನೋಡಿದ ಇನ್ನೋರ್ವ ಪ್ರಯಾಣಿಕ ತಮ್ಮ ಮೊಬೈಲ್‍ನಲ್ಲಿ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಈ ಮೂಲಕ ಈ ಕಾಮುಕನ ಅಸಲಿ ಬಣ್ಣವನ್ನು ಜನರಿಗೆ ಪರಿಚಯಿಸಿದ್ದಾನೆ.
ಕಲಬುರಗಿಯಿಂದ ರಾಯಚೂರಿನತ್ತ ಹೋಗುವ ಒಂಟಿ ಯುವತಿಯರಿಗೇ ಮಾತ್ರ ಇದು ಸೀಮಿತವಾಗಿಲ್ಲ. ಈ ನಿಲ್ದಾಣದಿಂದ ಹೋಗುವ ಮಂಗಳಮುಖಿಯರಿಗೂ ಇಲ್ಲಿನ ಕೆಲ ಕಾಮುಕರ ನಿತ್ಯ ಸತಾಯಿಸುತ್ತಾರಂತೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸುವುದಿಲ್ಲ. ಹೀಗಾಗಿ ನಮ್ಮ ಕಷ್ಟ ಯಾರಿಗೇ ಹೇಳಬೇಕು ಎಂಬುದು ಮಂಗಳಮುಖಿಯರು ಅಳಲು ತೋಡಿಕೊಂಡಿದ್ದಾರೆ.
ಸದ್ಯ ಟ್ರೈನ್‍ನಲ್ಲಿ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ ಯಾರು ಎಂಬುದು ಇದೀಗ ಸದ್ಯ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಕೂಡಲೇ ಆ ಕಾಮುಕನನ್ನು ಪೊಲೀಸರು ಹಿಡಿದು ತಕ್ಕ ಪಾಠ ಕಲಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.