Connect with us

Districts

ಬೋಗಸ್ ಬಿಲ್ ಮಾಡಿ 8 ಕೋಟಿ ಲೂಟಿ – ಅದೇ ದುಡ್ಡಲ್ಲಿ ಲಿಕ್ಕರ್ ಪಾರ್ಟಿ

Published

on

ಕಲಬುರಗಿ: ನೀತಿ ಸಂಹಿತೆ ಹಿನ್ನೆಲೆಯಲ್ಲಿ ಒಂದೆಡೆ ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಚುನಾವಣೆಯಲ್ಲಿ ಬ್ಯುಸಿಯಾಗಿದ್ದರೆ, ಸಿಕ್ಕಿದ್ದೇ ಚಾನ್ಸ್ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳು ಕೋಟಿ ಕೋಟಿ ಬೇಕಾಬಿಟ್ಟಿ ಬಿಲ್ ಮಾಡಿ ಹಣ ಲಪಟಾಯಿಸಿದ್ದಾರೆ. ಬಂದ ದುಡ್ಡಲ್ಲಿ ಕುಡಿದು ಕುಣಿದು ಕುಪ್ಪಳಿಸಿದ್ದಾರೆ. ಈ ಕುರಿತ ಒಂದು ಎಕ್ಸ್ ಕ್ಲೂಸಿವ್ ರಿಪೋರ್ಟ್ ಇಲ್ಲಿದೆ.

ಹೌದು. ಪಿಡಬ್ಲ್ಯೂಡಿ ಅಧಿಕಾರಿಗಳು 2018-19ರ ಇಯರ್ ಎಂಡ್ ಬಿಲ್ ಮಾಡಿ ತಮಗೆ ಬೇಕಾದಂತೆ ನಕಲಿ ಬಿಲ್ ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಮಾತ್ರವಲ್ಲ ವಂಚಿಸಿದ ಹಣದಲ್ಲಿ ಕಲಬುರಗಿಯ ಖಾಸಗಿ ಹೋಟೆಲ್‍ನಲ್ಲಿ ಕಾಕ್‍ಟೈಲ್ ಎಣ್ಣೆ ಪಾರ್ಟಿ ಮಾಡಿದ್ದು, ಆ ಪಾರ್ಟಿಯಲ್ಲಿ ಯಾರು ಎಷ್ಟು ಹಣ ಹೊಡೆದರು ಅನ್ನೋ ಲೆಕ್ಕವನ್ನು ಪರಸ್ಪರ ಹೇಳಿಕೊಂಡು ಸ್ಟೆಪ್ ಹಾಕಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಸಿದ್ದರಾಮಯ್ಯ ಹಿರೇಮಠ್ ಆರೋಪಿಸಿದ್ದಾರೆ.

ಆರ್‌ಟಿಐ ಮಾಹಿತಿಯಡಿ ಭ್ರಷ್ಟ ಅಧಿಕಾರಿಗಳ ನಿಜ ಬಣ್ಣ ಬಯಲಾಗಿದ್ದು, 3 ಕೋಟಿಗೂ ಅಧಿಕ ಹಣದ ಬೋಗಸ್ ಬಿಲ್ ಮಾಡಿದ್ದಾರೆ.
1. ಜಿಲ್ಲಾಧಿಕಾರಿಗಳ ವಸತಿಗೃಹದ ಬಾಗಿಲು, ಕಿಟಕಿಯ ಪರದೆ- 3 ಲಕ್ಷ ರೂ.
2. ಜಿಲ್ಲಾಧಿಕಾರಿಗಳ ವಸತಿಗೃಹದ ಪಾರ್ಕ್ ನ ಫಿನಿಶಿಂಗ್- 2 ಲಕ್ಷ ರೂ.
3. ಜೇವರ್ಗಿ ರಸ್ತೆಯ ವಸತಿ ಪ್ರದೇಶದ 5 ಚಿಕ್ಕ ಸೇಫ್ಟಿ ಟ್ಯಾಂಕ್ ಸ್ವಚ್ಛತೆ- 3.30 ಲಕ್ಷ ರೂ.
4. ಐವಾನ್-ಏ-ಶಾಹಿ ವಸತಿಗೃಹದ ಸೊಳ್ಳೆ ಪರದೆ- 5 ಲಕ್ಷ ರೂ.
5. ಐವಾನ್-ಏ-ಶಾಹಿ ವಸತಿಗೃಹದ ಮುಳ್ಳು ಕಂಟಿ ತೆಗೆಯಲು- 5 ಲಕ್ಷ ರೂ.
6. ಐವಾನ್-ಏ-ಶಾಹಿ ವಸತಿಗೃಹದ ಸೋಫಾ ರಿಪೇರಿಗೆ- 3 ಲಕ್ಷ ರೂ.


7. ಐವಾನ್-ಏ-ಶಾಹಿ ವಸತಿಗೃಹದ ಸ್ನಾನಗೃಹದ ನವೀಕರಣ- 4 ಲಕ್ಷ ರೂ
8. ಐವಾನ್-ಏ-ಶಾಹಿ ವಸತಿಗೃಹದಲ್ಲಿ ಟವೆಲ್ & ನ್ಯಾಪ್‍ಕಿನ್ ಖರೀದಿ- 4 ಲಕ್ಷ ರೂ
9. ಮೇಲ್ಛಾವಣಿಯ ಪೇಟಿಂಗ್- 2 ಲಕ್ಷ 35 ಸಾವಿರ ರೂ.
10. ಪಿಡಬ್ಲ್ಯೂಡಿ ಕಚೇರಿಯ ಸಿಇ-ಎಸ್‍ಇ ಎರಡು ಕಚೇರಿಗಳ ಪಾರ್ಕ್ ನವೀಕರಣ- 10 ಲಕ್ಷ ರೂ.

ಒಟ್ಟಿನಲ್ಲಿ ಒಂದೆಡೆ ಭೀಕರ ಬರ, ಮತ್ತೊಂದೆಡೆ ರೈತರ ಸಾಲಮನ್ನಾಕ್ಕೆ ಹಣ ಇಲ್ಲದೇ ಸರ್ಕಾರ ಪರದಾಡುತ್ತಿದೆ. ಆದರೆ ಇತ್ತ ಅಧಿಕಾರಿಗಳು ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ಈಗಲಾದರೂ ಸಿಎಂ ಕುಮಾರಸ್ವಾಮಿ ಎಚ್ಚೆತ್ತು ಭ್ರಷ್ಟಾಚಾರದ ತನಿಖೆ ಮಾಡಿಸ್ತಾರಾ ಕಾದು ನೋಡಬೇಕಿದೆ.

Click to comment

Leave a Reply

Your email address will not be published. Required fields are marked *