ಕಲಬುರಗಿ: ಜಿಲ್ಲೆಯಲ್ಲಿ ಜನ ಲಾಕ್ ಡೌನ್ ಪಾಲಿಸದಿದ್ದರಿಂದ ಪೊಲೀಸರು ಪಥಸಂಚನ ನಡೆಸಿದರು. ಈ ವೇಳೆ ಕೆಲವು ಮುಸ್ಲಿಮರು ಪೊಲೀಸರ ಮೇಲೆ ಪುಷ್ಪವೃಷ್ಟಿ ಮಾಡಿದರು.
ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾಗೆ 80 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಇತ್ತ ಮಂಗಳವಾರ ಮತ್ತೆ ಮೂವರಲ್ಲಿ ಕೊರೊನಾ ಸೋಂಕು ಪತ್ತೆ ಆಗಿದ್ದು ಸೋಂಕಿತರ ಸಂಖ್ಯೆ 30ಕ್ಕೆ ಏರಿದೆ. ಹೀಗಿದ್ದರೂ ಜನ ಲಾಕ್‍ಡೌನ್ ಪಾಲಿಸ್ತಿಲ್ಲ. ಹೀಗಾಗಿ ಕಲಬುರಗಿ ಪೊಲೀಸರು ನಗರದ ಪ್ರಮುಖ ಸರ್ಕಲ್‍ಗಳಲ್ಲಿ ಪಥ ಸಂಚಲನ ನಡೆಸಿದ್ರು.
Advertisement
Advertisement
ಇದೇ ವೇಳೆ ಪಥಸಂಚಲನ ಮಾಡ್ತಿದ್ದ ಪೊಲೀಸರಿಗೆ ಮುಸ್ಲಿಮರು ಪುಷ್ಪವೃಷ್ಟಿ ಮಾಡಿದ್ರು. ಜಿಲ್ಲೆಯಲ್ಲಿ ಇಲ್ಲಿಯವರೆಗೆ 2005 ಜನರ ಗಂಟಲ ದ್ರವದ ಮಾದರಿಯನ್ನ ಪರೀಕ್ಷಿಸಲಾಗಿದ್ದು 912 ಜನರ ವರದಿ ನೆಗೆಟಿವ್ ಬಂದಿದೆ. ಸೋಂಕು ಹೆಚ್ಚಾಗುವ ಭೀತಿ ಹಿನ್ನೆಲೆಯಲ್ಲಿ 24,699 ಜನರನ್ನು ಸ್ಕ್ಯಾನಿಂಗ್ ಮಾಡಲಾಗಿದೆ.
Advertisement
Advertisement
ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಶತ ಪ್ರಯತ್ನ ನಡೆಸ್ತಿದೆ. ಹೀಗಿದ್ದರೂ ಜನ ಲಾಕ್‍ಡೌನ್ ಉಲ್ಲಂಘಿಸಿ ಸುತ್ತಾಡ್ತಿರೋದು ವಿಷಾದನೀಯ.