ಕಳ್ಳನಿಗೆ ಮಹಿಳಾ ಪೇದೆಯ ಸಿಡಿಆರ್‌ – ಪೊಲೀಸರಿಂದಲೇ ಮಾರಾಟ

Public TV
1 Min Read
cdr phone

ಕಲಬುರಗಿ: ನಗರದಲ್ಲಿ ಮತ್ತೆ ಪೊಲೀಸರ (Kalaburgi) ಕಳ್ಳಾಟ ಬಯಲಾಗಿದ್ದು, ಈ ಬಾರಿ ಮಹಿಳಾ ಪೇದೆಯ (Women Constable) ಮೊಬೈಲ್ ನಂಬರ್‌ನ ಸಿಡಿಆರ್‌ (ಕರೆ ವಿವರದ ದಾಖಲೆಗಳು) ಅನ್ನು ಕಳ್ಳನಿಗೆ ಪೊಲೀಸರು ಮಾರಾಟ ಮಾಡಿದ್ದಾರೆ.

ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಮಹಿಳಾ ಪೇದೆಗೆ ಒನ್ ಸೈಡ್ ಲವ್ (Onne Side Love) ಮಾಡುತ್ತಿದ್ದ ಅಶೋಕ ನಗರ ಠಾಣಾ ವ್ಯಾಪ್ತಿಯ ಕಳ್ಳನಾದ ಮಹೇಶ್ ಎಂಬವನಿಗೆ ಪೊಲೀಸರು (Police) ಸಿಡಿಆರ್ ಮಾರಾಟ ಮಾಡಿದ್ದಾರೆ.  ಇದನ್ನೂ ಓದಿ: ಅನುದಾನ ಖಾಲಿ – 3 ವರ್ಷ ಜಾರಿಯಿದ್ದ ಮಹಿಳಾ ಪರ ಯೋಜನೆ ಸ್ಥಗಿತ

ಈ ಸಿಡಿಆರ್ ಬಳಸಿ ಆ ಕಳ್ಳ ಮಹಿಳಾ ಪೇದೆಗೆ ಪ್ರೀತಿಸುವಂತೆ ಮಾನಸಿಕ ಕಿರುಕುಳ ನೀಡಿದ್ದಾನೆ. ಪೇದೆ ಪ್ರೀತಿಯನ್ನು ಒಪ್ಪದಾಗ ಕರೆ ಮಾಹಿತಿಯನ್ನು ಆಕೆಯ ಜೊತೆ ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಕಳುಹಿಸಿ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಕಳ್ಳನ ಮಾತನ್ನು ನಂಬಿದ ಆ ಯುವಕ ಮಹಿಳಾ ಪೇದೆ ಜೊತೆ ಮಾಡಿಕೊಂಡಿದ್ದ ನಿಶ್ಚಿತಾರ್ಥವನ್ನು ರದ್ದು ಮಾಡಿದ್ದಾನೆ.

ನೊಂದ ಪೇದೆ ಈಗ ಸಿಡಿಆರ್ ನೀಡಿರುವ ಅಧಿಕಾರಿಗಳ ವಿರುದ್ಧ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಮಹಿಳಾ ಠಾಣೆಯಲ್ಲಿ ದಾಖಲಾದ ಕ್ರೈ ನಂಬರ್ 47 ರ ತನಿಖೆ ಹೆಸರಲ್ಲಿ ಮಹಿಳಾ ಪೇದೆ ನಂಬರ್ ಸೇರಿಸಿ ಸಿಡಿಆರ್ ಕೊಟ್ಟಿರುವ ವಿಷಯ ಬೆಳಕಿಗೆ ಬಂದಿದೆ.

Share This Article