ಕಲಬುರಗಿ: ತನ್ನ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹಲ್ಲೆ ಮಾಡಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ (Manikanth Rathod) ಅವರನ್ನು ಕಲಬುರಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಿಯಾಂಕ್ ಖರ್ಗೆ ಮೇಲೆ ಆರೋಪ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಬಿಡುಗಡೆ ಮಾಡಲು ಮಣಿಕಂಠ್ ರಾಠೋಡ್ ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಸುದ್ದಿಗೋಷ್ಠಿಗೆ ಆಗಮಿಸುವ ಮುನ್ನವೇ ಮಣಿಕಂಠ್ ರಾಠೋಡ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
Advertisement
ಈ ಹಿಂದೆ ಮಣಿಕಂಠ್ ರಾಠೋಡ್ ಶಹಾಬಾದ್ ಬಳಿ ತನ್ನ ಮೇಲೆ ಪ್ರಿಯಾಂಕ್ ಖರ್ಗೆ ಹಲ್ಲೆ ಮಾಡಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಆದರೆ ಇದೆಲ್ಲ ಕಟ್ಟುಕಥೆ, ಹಲ್ಲೆಯಾಗಿಲ್ಲ, ಕಾರ್ ಅಪಘಾತವನ್ನು ಹಲ್ಲೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಕಲಬುರಗಿ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿತ್ತು. ಇದನ್ನೂ ಓದಿ: ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿ ಇದ್ರೆ ನಿಮ್ಮ ಆಸ್ತಿ ಮಾರಿ ಹಣ ಕೊಡಿ: ಸಿಎಂ ವಿರುದ್ಧ ರೇಣುಕಾ ವಾಗ್ದಾಳಿ
Advertisement
Advertisement
ಪೊಲೀಸರ ತನಿಖೆ ವರದಿ ಸುಳ್ಳು ಎಂದಿರುವ ಮಣಿಕಂಠ ರಾಠೋಡ್ ತನ್ನ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸಾಕ್ಷಿ ಬಿಡುಗಡೆ ಮಾಡಲು ಇಂದು ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಸುದ್ದಿಗೋಷ್ಠಿಗೆ ಆಗಮಿಸುವ ಮುನ್ನವೇ ಕಲಬುರಗಿ ನಗರದ ಚೌಕ್ ಠಾಣೆ ಪೊಲೀಸರು ಭಾರತ್ ಫ್ರೈಡ್ ಅಪಾರ್ಟ್ಮೆಂಟ್‌ನಲ್ಲಿರುವ ಅವರ ಮನೆಗೆ ತೆರಳಿ ರಾಠೋಡ್‌ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಸಿಎಂ ತವರಿಗೆ ಶೀಘ್ರವೇ ಅಂಗನವಾಡಿ ಕಟ್ಟಡದ ಭರವಸೆ