ಕಲಬುರಗಿ ಪಾಲಿಕೆ ಮೇಯರ್ ಫೈಟ್- ಬಿಜೆಪಿ ಸೇರಿದ ಪಕ್ಷೇತರ ಸದಸ್ಯ

Public TV
2 Min Read
kalaburagi BJP

– 24ಕ್ಕೆ ಏರಿದ ಬಿಜೆಪಿ ಸ್ಥಾನಗಳ ಬಲ

ಕಲಬುರಗಿ: ಇತ್ತೀಚೆಗೆ ನಡೆದ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ನಗರದ ವಾರ್ಡ್ ನಂ.36 ರಿಂದ ಸ್ಪರ್ಧಿಸಿ, ಗೆದ್ದ ಬಿಜೆಪಿ ಬಂಡಾಯ ಅಭ್ಯರ್ಥಿ ಶಂಭುಲಿಂಗ ಬಳಬಟ್ಟಿ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರಿನಲ್ಲಿಂದು ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವುರ, ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ರದ್ದೇವಾಡಿ ನೇತೃತ್ವದಲ್ಲಿ ಬಿಜೆಪಿ ಸೇರಿದರು.

ಒಟ್ಟು 55 ಸದಸ್ಯ ಬಲದ ಕಲಬುರಗಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ 23 ಸ್ಥಾನಗಳನ್ನು ಹೊಂದಿದ್ದು, ಈಗ ಬಳಟ್ಟಿ ಅವರ ಸೇರ್ಪಡೆಯಿಂದಾಗಿ ಈ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಮೇಯರ್ ಚುನಾವಣೆಯಲ್ಲಿ ಗೆಲ್ಲಬೇಕಾದರೆ 32 ಮ್ಯಾಜಿಕ್ ನಂಬರ್ ಆಗಿದ್ದು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದತೆ ಬಿಜೆಪಿ ಬಲ 30ಕ್ಕೆ ಏರಿದೆ. ಇದನ್ನೂ ಓದಿ: ಕಾರ್ಯಕರ್ತರನ್ನು ಮನೆ ಬಾಗಿಲಿಗೆ ಬರಮಾಡಿಕೊಳ್ಳಲಿದ್ದಾರೆ ಹೆಚ್‍ಡಿಕೆ

ಇತ್ತ ಕಾಂಗ್ರೆಸ್ 27 ಸದಸ್ಯರು ಹೊಂದಿದ್ದು, ಶಾಸಕ, ಓರ್ವ ರಾಜ್ಯಸಭಾ ಸದಸ್ಯ ಸೇರಿದರೆ 29 ಆಗಲಿದೆ. 4 ಸ್ಥಾನ ಪಡೆದು ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ಒಲವಿನ ಮೇಲೆ ಯಾರು ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಎಂಬುದು ತಿಳಿಯಲಿದೆ.

ಸೆಪ್ಟೆಂಬರ್ 20ರಂದು ವಿಧಾನಸಭೆಯಲ್ಲಿ ಮೇಯರ್ ಚುನಾವಣೆಯ ಬಗ್ಗೆ ನಿರ್ಣಯ ಮಂಡನೆಯಾಗಿ ಪಾಸ್ ಆಗಿದ್ದು, ಇಲ್ಲಿಯವರೆಗೂ ಮೇಯರ್ ಚುನಾವಣೆ ನಡೆಸಲು ಸರ್ಕಾರ ದಿನಾಂಕ ನಿಗದಿ ಮಾಡಿಲ್ಲ. ಹೀಗಾಗಿ ತೆರೆಮರೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಮೇಯರ್ ಚುನಾವಣೆ ದಿನಾಂಕ ಘೋಷಣೆ ಬಳಿಕ ಯಾರಿಗೆ ಬೆಂಬಲ ನೀಡಬೇಕು ಎನ್ನುವುದರ ಬಗ್ಗೆ ಜೆಡಿಎಸ್ ನಿರ್ಧಾರ ಮಾಡಲಿದೆ.

ಆಯುಕ್ತರ ಸ್ಪಷ್ಟನೆ:
ಕಲಬುರಗಿ ಸೇರಿದಂತೆ ರಾಜ್ಯದ ಮೂರು ಮಹಾನಗರಪಾಲಿಕೆಗಳಿಗೆ ಚುನಾವಣೆ ನಡೆದು ಎರಡು ವಾರಗಳು ಗತಿಸಿದರೂ ಮೇಯರ್ ಚುನಾವಣೆಯ ಅಧಿಸೂಚನೆ ಹೊರಡಿಸಲಾಗಿಲ್ಲ. ಈ ಬಗ್ಗೆ ಕಲಬುರಗಿ ಪಾಲಿಕೆಯ ಆಯುಕ್ತ ಸ್ನೇಹಲ್ ಲೋಖಂಡೆ ಅವರೊಂದಿಗೆ ಮಾತನಾಡಿದಾಗ ಚುನಾವಣೆ ಅಧಿಸೂಚನೆ ಹೊರಡಿಸಿರಬಹದು. ಆದರೆ ಅದು ನಮ್ಮ ಕೈ ಸೇರಿಲ್ಲ, ಕೈ ಸೇರಿದ ಕೂಡಲೇ ದಿನಾಂಕ ಪ್ರಕಟಿಸುವುದಾಗಿ ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ ಪಾಲಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸಿವೆ.

Share This Article
Leave a Comment

Leave a Reply

Your email address will not be published. Required fields are marked *