ಕಲಬುರಗಿ: ನಗರಕ್ಕೆ ಆಗಮಿಸಿದ ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವರಾದ ಬೈರತಿ ಸುರೇಶ್ (Byrathi suresh) ಅವರನ್ನು ಕಲಬುರಗಿ ಮಹಾನಗರ ಪಾಲಿಕೆಯ (Kalaburagi Municipal Corporation) ಮೇಯರ್, ಉಪಮೇಯರ್ ಸೇರಿದಂತೆ ಹಾಗೂ ಸ್ಥಾಯಿ ಸಮಿತಿ ಸದಸ್ಯರು ಪುಷ್ಫಗುಚ್ಛ ನೀಡಿ ಸ್ವಾಗತಿಸಿದರು.
Advertisement
ಮೇಯರ್ ಯಲ್ಲಪ್ಪ ಎಸ್.ನಾಯಕೋಡಿ, ಮಾಜಿ ಮೇಯರ್ ಸಯ್ಯದ್ ಅಹ್ಮದ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪರವೀನ್ ಬೇಗಂ, ಶ. ಸಚಿನ ಶಿರವಾಳ, ಮುಹಮ್ಮದ್ ಅಜೀಮೊದ್ದಿನ್, ಇರ್ಫಾನಾ ಪರವೀನ್, ಲತಾ ರವೀಂದ್ರ ಕುಮಾರ, ಪಾಲಿಕೆಯ ಸದಸ್ಯರು ಸಚಿವರನ್ನು ಸ್ವಾಗತಿಸಿ, ಮನವಿ ಸಲ್ಲಿಸಿದರು. ಇದನ್ನೂ ಓದಿ: ದೂರು ಕೊಡಲು ಬಂದ ಮಹಿಳೆಯೊಂದಿಗೆ ಅಸಭ್ಯ ವರ್ತನೆ – ಮಧುಗಿರಿ ಡಿವೈಎಸ್ಪಿ ಅಮಾನತು, ಬಂಧನ
Advertisement
Advertisement
ಕಲಬುರಗಿ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನದ ಬೇಡಿಕೆ ಇದ್ದು, ರಸ್ತೆಗಳು ಮತ್ತು ಒಳಚರಂಡಿಗಳಿಗೆ 70 ಕೋಟಿ ರೂ. ಅನುದಾನದ ಅಗತ್ಯವಿದೆ. ಅಲ್ಲದೇ ಕಲಬುರಗಿ ನಗರದ ಹೊರವಲಯದಲ್ಲಿ 4 ದಿಕ್ಕಿನಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ಸಲುವಾಗಿ ಭೂಮಿ ಖರೀದಿಸುವುದಕ್ಕಾಗಿ 100 ಕೋಟಿ ರೂ., ಮಹಾನಗರ ಪಾಲಿಕೆಯ ಸಭಾಭವನ ಕಟ್ಟಡಕ್ಕಾಗಿ 20 ಕೋಟಿ ರೂ., ರಸ್ತೆ ಅಗಲೀಕರಣಕ್ಕಾಗಿ 20 ಕೋಟಿ ರೂ., ಸರಡಗಿ ನಾಲಾ ಡೈವರ್ಶನ ಕಾಮಗಾರಿಗಾಗಿ 10 ಕೋಟಿ ರೂ., ನೀರು ಸರಬರಾಜು ಯೋಜನೆಗಾಗಿ 190.4 ಕೋಟಿ ರೂ., ಒಳಚರಂಡಿ ವ್ಯವಸ್ಥೆಗಾಗಿ 350 ಕೋಟಿ ರೂ. ಅನುದಾನ, ಉದ್ಯಾನವನ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನವನ್ನು ಕಲಬುರಗಿ ಮಹಾನಗರ ಪಾಲಿಕೆಗೆ ಬಿಡುಗಡೆ ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಯಿತು.
Advertisement
ಅಲ್ಲದೇ ಕಲಬುರಗಿ ಸ್ಥಳೀಯ ಪ್ರದೇಶದಲ್ಲಿ ಮಂಡಲ/ಗ್ರಾಮ ಪಂಚಾಯಿತಿಯಿಂದ ಹಸ್ತಾಂತರಗೊಂಡ ಮತ್ತು ಅನುಮೋದನೆಗೊಂಡ ವಿನ್ಯಾಸಗಳಲ್ಲಿಯ ನಿವೇಶನಗಳ ಕರವಸೂಲಿ, ಕಟ್ಟಡ ಪರವಾನಿಗೆ ಹಾಗೂ ಇನ್ನಿತರ ಎಲ್ಲಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸೂಕ್ತ ಮಾರ್ಗದರ್ಶನ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅನುಮತಿ ನೀಡುವಂತೆ ಕೋರಲಾಯಿತು.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ನೀಡಲು ಪ್ರಸ್ತುತ ಇರುವ ವಲಯ ನಿಯಮಾವಳಿಗಳನ್ನು ಪರಿಷ್ಕರಿಸಿ ಕಲಬುರಗಿ ನಗರದ ಬೆಳವಣಿಗೆಗಾಗಿ ಕಟ್ಟಡದ ಎತ್ತರ 15 ಮೀಟರ್ ವರೆಗೆ ಹಾಗೂ ಎಫ್‌ಎಆರ್ 4 (ಗರಿಷ್ಠ) ವರೆಗೆ ಹೆಚ್ಚಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಲಾಯಿತು. ಇದನ್ನೂ ಓದಿ: ಮಂಗಳೂರಿನಲ್ಲಿ NIA ಘಟಕ ಸ್ಥಾಪಿಸಿ – ದ.ಕ. ಸಮಗ್ರ ಅಭಿವೃದ್ಧಿಗೆ ಶಾಗೆ ಚೌಟ ಮನವಿ