ನನಗೆ ಸಿಎಎ ಬಗ್ಗೆ ಗೊತ್ತಿಲ್ಲ, ಆದ್ರೆ ನೀವೇಕೆ ವಿರೋಧ ಮಾಡ್ತೀರಿ ಹೇಳಿ: ಶಾಸಕ ರಾಜುಗೌಡ

Public TV
1 Min Read
rajugowda 1

ಕಲಬುರಗಿ: ಸಿಎಎ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನೀವು ಯಾಕೆ ವಿರೋಧ ಮಾಡುತ್ತಿದ್ದೀರಿ ಹೇಳಿ ಎಂದು ಸುರಪುರ ಶಾಸಕ ರಾಜುಗೌಡ ಕಲಬುರಗಿಯಲಲ್ಲಿ ಪೌರತ್ವ ವಿರೋಧಿಸುವವರಿಗೆ ಪ್ರಶ್ನೆ ಮಾಡಿದ್ದಾರೆ.

ಡಿ.11ರಂದು ಕಲಬುರಗಿ ನಗರದಲ್ಲಿ ಪೌರತ್ವ ಬೆಂಬಲಿಸಿ ನಡೆಯುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದವರು, ಸದ್ಯ ಸಿಎಎ ಬಗ್ಗೆ ಗಂಧ ಗಾಳಿಯು ಗೊತ್ತಿಲ್ಲದವರು ವಿರೋಧ ಮಾಡ್ತಿದ್ದಾರೆ. ಇದನ್ನು ವಿರೋಧಿಸುವವರ ಕನಸಿನಲ್ಲೂ ಮೋದಿ ಬರುತ್ತಾರೆ. ಬೆಳಗ್ಗೆ ಎದ್ದು ಹಲ್ಲುಜ್ಜುವಾಗ ಮೋದಿ, ಅಮಿತ್ ಶಾ ಕನ್ನಡಿಯಲ್ಲಿ ಕಾಣುತ್ತಾರೆ ಎಂದು ಲೇವಡಿ ಮಾಡಿದರು.

modi amit shah

ಸಿಎಎ ವಿರೋಧಿಸುವವರಿಗೆ ಅದನ್ನು ಮಾಡುವುದು ಬಿಟ್ಟು ಬೇರೆ ಏನು ಕೆಲಸ ಮಾಡೋದಿಲ್ಲ. ಮೋದಿ ಸಾಹೇಬರು ಹುಟ್ಟಿರೋದೆ ಭಾರತಾಂಬೆಯ ರಕ್ಷಣೆಗಾಗಿ, ಅಮಿತ್ ಶಾ ಹುಟ್ಟಿರೋದೆ ಮೋದಿ ಸಾಹೇಬರ ಆಜ್ಞೆ ಪಾಲನೆ ಮಾಡೋದಕ್ಕೆ. ಹಿಂದಿನ ಕಾಲದಲ್ಲಿ ರಾಮ ಆಂಜನೇಯನನ್ನು ನೋಡುತ್ತಿದ್ದೇವು. ಡಿ.11ರ ಬೆಳಗ್ಗೆ 11 ಗಂಟೆಗೆ ಕಲಬುರಗಿಯ ಎಲ್ಲಾ ಸಮುದಾಯದ ಜನ ಪೌರತ್ವ ಕಾಯ್ದೆ ಬೆಂಬಲಿಸಿ ಕಲಬುರಗಿಯ ಮೆರವಣಿಗೆಯಲ್ಲಿ ಭಾಗವಹಿಸಿ ಎಂದು ರಾಜುಗೌಡ ಕರೆ ನೀಡಿದ್ದಾರೆ.

ಕಲಬುರಗಿ-ಬೀದರ್ ಜಿಲ್ಲೆಯ ವಿವಿಧ ಮಠಾಧೀಶರು ಸೇರಿದಂತೆ ಎಲ್ಲಾ ಸಮುದಾಯದ ಜನ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಆ ಮೂಲಕ ಸಿಎಎ ಬೆಂಬಲಿಸಿ ಮೋದಿ-ಶಾ ಕೈ ಬಲಪಡಿಸಿ ಎಂದು ಕರೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *