ಬೆಂಗಳೂರು: ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜಾ ಫಾತಿಮಾ ಹಿಜಬ್ ಧರಿಸಿಯೇ ಇಂದು ಕಲಾಪಕ್ಕೆ ಆಗಮಿಸಿದ್ದಾರೆ.
ಈ ಹಿಂದೆ ಹಿಜಬ್ ವಿವಾದಕ್ಕೆ ಸಂಬಂಧಿಸಿ ಮಾತನಾಡಿ, ಹಿಜಬ್ ಧರಿಸುವುದು ಮುಸ್ಲಿಂ ಮಹಿಳೆಯರ ಸಂಪ್ರದಾಯ, ಅದು ಹಕ್ಕಾಗಿದೆ. ನಾನು ಹಿಜಬ್ ಧರಿಸಿಯೇ ವಿಧಾನ ಸಭೆಗೆ ಹೋಗುತ್ತೇನೆ. ಧೈರ್ಯ ಇದ್ದರೇ ತಡೆಯಲಿ ಎಂದು ಶಾಸಕಿ ಸವಾಲೊಡ್ಡಿದ್ದರು. ಅದರಂತೆ ಇಂದು ಹಿಜಬ್ ಧರಿಸಿ ಕಲಾಪದಲ್ಲಿ ಭಾಗಿಯಾಗಿದ್ದಾರೆ. ಈ ಹಿಂದಿನ ಅಧಿವೇಶನಗಳಲ್ಲೂ ಹಿಜಬ್ ಧರಿಸಿಯೇ ಕಲಾಪದಲ್ಲಿ ಪಾಲ್ಗೊಂಡಿದ್ದರು.
Advertisement
Advertisement
ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಹೋಗಿದ್ದಕ್ಕೆ ತಡೆದು ಹೊರಗಡೆ ಕೂರಿಸಲಾಗಿದೆ. ಹಿಜಬ್‍ನ್ನು ನಾವು ಮೊದಲಿನಿಂದ ಧರಿಸುತ್ತಿದ್ದೇವೆ. ಈಗ ಹೊಸದಾಗಿ ಹಿಜಬ್ ಧರಿಸುತ್ತಿಲ್ಲ. ನಾನು ಕೂಡ ವಿಧಾನಸಭೆಗೆ ಹಿಜಬ್ ಧರಿಸಿಯೇ ಹೋಗಿದ್ದೇನೆ, ಮುಂದೆಯೂ ಹಿಜಬ್ ಧರಿಸಿಯೇ ಹೋಗುತ್ತೇನೆ. ಧೈರ್ಯ ಇದ್ದರೆ ನನ್ನನ್ನು ತಡೆಯಲಿ ಎಂದಿದ್ದರು. ಇದನ್ನೂ ಓದಿ: ಹೆಲ್ಮೆಟ್ ಹಾಕಿದ್ರೆ ಸೇಫ್ಟಿ ಅಲ್ವಾ ಅದ್ಕೆ ಹಿಜಬ್ ಹಾಕಿದ್ರೆ ಸೇಫ್ಟಿ ಅಂದಿದ್ದು: ಜಮೀರ್ ಸಮರ್ಥನೆ
Advertisement
ಹಿಜಬ್ ವಿವಾದ ದಿನೇ ದಿನೇ ತೀವ್ರ ಸ್ವರೂಪ ಪಡೆದು ಕೊಳ್ಳುತ್ತಿದ್ದು, ಸಮವಸ್ತ್ರ ಧರಿಸಿಯೇ ಶಾಲೆಗೆ ಬರುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಈ ಬೆನ್ನಲ್ಲೆ ಸರ್ಕಾರ ಕೂಡ ಸೂಚನೆ ನೀಡಿತ್ತು. ಈ ಎಲ್ಲದರ ನಡುವೆಯೇ ಬೆಂಗಳೂರು, ಮೈಸೂರು, ಬೆಳಗಾವಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಹಿಜಬ್ ಧರಿಸಿ ಶಾಲೆಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿಯೇ ಶಾಲೆಗೆ ಬಂದ ವಿದ್ಯಾರ್ಥಿನಿಯರು
Advertisement
ವಿದ್ಯಾರ್ಥಿನಿಯರು ತಮ್ಮ ಜೊತೆಗೆ ಷೋಷಕರನ್ನು ಕೂಡ ಶಾಲೆಗೆ ಕರೆತಂದಿದ್ದಾರೆ. ಸರ್ಕಾರದ ಆದೇಶದಂತೆ ಶಾಲಾ ಸಿಬ್ಬಂದಿ ಹಿಜಬ್ ತೆಗೆಸಿ ಕ್ಲಾಸ್ ರೂಮ್‍ಗೆ ಕಳುಹಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಮುಗಿಯದ ಸಮವಸ್ತ್ರ ಸಮರ – ವಿವಿಧ ಜಿಲ್ಲೆಗಳಲ್ಲಿ ಹಿಜಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿಯರು